• Home
  • »
  • News
  • »
  • entertainment
  • »
  • Sushmita Sen-Charu Asopa: ದಾಂಪತ್ಯ ಕಲಹ! ತಮ್ಮನ ಹೆಂಡ್ತಿಗೆ ನಟಿ ಸುಶ್ಮಿತಾ ಸೇನ್ ಕೊಟ್ಟ ಸಲಹೆ ಇದು

Sushmita Sen-Charu Asopa: ದಾಂಪತ್ಯ ಕಲಹ! ತಮ್ಮನ ಹೆಂಡ್ತಿಗೆ ನಟಿ ಸುಶ್ಮಿತಾ ಸೇನ್ ಕೊಟ್ಟ ಸಲಹೆ ಇದು

ರಾಜೀವ್ ಸೇನ್-ಚಾರು ಅಸೋಪಾ

ರಾಜೀವ್ ಸೇನ್-ಚಾರು ಅಸೋಪಾ

ಚಾರು ಅಸೋಪಾ ಹಾಗೂ ರಾಜೀವ್ ದಾಂಪತ್ಯದಲ್ಲಿ ಮತ್ತೊಮ್ಮೆ ಬಿರುಕು ಕಾಣಿಸಿದೆ. ತಮ್ಮನ ಹೆಂಡತಿಗೆ ಸುಶ್ಮಿತಾ ಸೇನ್ ಕೊಟ್ಟ ಸಲಹೆ ಏನು?

  • Trending Desk
  • Last Updated :
  • Bangalore, India
  • Share this:

ಸುಶ್ಮಿತಾ ಸೇನ್ (Sushmit) ಅವರ ಸಹೋದರ ಹಾಗೂ ಅವರ ಪತ್ನಿ ಚಾರು ಅಸೋಪ (Charu Asopa) ನಡುವಿನ ಜಗಳ ಈಗ ಹಾಟ್ ಹಾಪಿಕ್ ಆಗಿದೆ. ಕಳೆದ ಕೆಲವು ತಿಂಗಳುಗಳಿಂದ ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ. ಈ ಆರೋಪಗಳನ್ನು ನೋಡಿದರೆ, ಈ ದಂಪತಿ ಸಂಬಂಧ ಯಾವಾಗ ಮುರಿದು ಬೀಳುತ್ತದೆಯೋ ಅನ್ನೋ ಹಾಗೆ ಆಗಿದೆ. ಚಾರು ತಮ್ಮ ಮೊದಲನೇ ಮದುವೆಯ ಬಗ್ಗೆ ನನ್ನಿಂದ ಮುಚ್ಚಿಟ್ಟು ಮೋಸ ಮಾಡಿದ್ದಾರೆ ಅಂತ ರಾಜೀವ್ ಆರೋಪಿಸಿದರೆ, ಚಾರು ಅವರು ರಾಜೀವ್ ತನಗೆ ಮೋಸ ಮಾಡಿದ್ದಾರೆ. ಮನೆಯಲ್ಲಿ ಇಲ್ಲದ ಹೊತ್ತಿನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡಿ ಇಡುತ್ತಾರೆ ಅಂತ ಆರೋಪಿಸಿದ್ದಾರೆ.


ಇವರಿಬ್ಬರ ನಿರ್ಧಾರದ ಬಗ್ಗೆ ಸುಶ್ಮಿತಾ ಸೇನ್ ಹೇಳಿದ್ದೇನು?


ರಾಜೀವ್ ಸೇನ್ ಅವರಿಂದ ಬೇರ್ಪಡಲು ನಿರ್ಧರಿಸಿರುವುದಾಗಿ ಚಾರು ಅಸೋಪಾ ಘೋಷಿಸಿದಾಗಿನಿಂದ, ಇಬ್ಬರೂ ಸುದ್ದಿಯಲ್ಲಿದ್ದಾರೆ ಅಂತ ಹೇಳಬಹುದು. ಇತ್ತೀಚೆಗೆ, ‘ಮೇರೆ ಆಂಗ್ನೆ ಮೇ’ ಧಾರಾವಾಹಿ ನಟಿ ಅವರ ನಿರ್ಧಾರದ ಬಗ್ಗೆ ಅವರ ಅತ್ತಿಗೆ ಸುಶ್ಮಿತಾ ಸೇನ್ ಅವರ ಅಭಿಪ್ರಾಯದ ಬಗ್ಗೆ ಕೇಳಲಾಗಿದೆ.


ಇದಕ್ಕೆ, ಚಾರು ಅವರು ಸುಶ್ಮಿತಾ ಅವರೊಂದಿಗೆ ತಾವು ಸಂಪರ್ಕದಲ್ಲಿರುವುದಾಗಿ ಬಹಿರಂಗಪಡಿಸಿದರು. ಸುಶ್ಮಿತಾ ಸೇನ್ ಅವರು ಚಾರು ಅವರಿಗೆ ತಮ್ಮ ಸಂತೋಷಕ್ಕೆ ಆದ್ಯತೆ ನೀಡುವಂತೆ ಹೇಳಿದ್ದಾರೆ ಎಂದು ಚಾರು ಹೇಳಿದರು.


ಇದನ್ನೂ ಓದಿ: Entertainment: ಮುಗಿಯದ ನಟಿ ಚಾರು ಸಂಸಾರದ ಜಗಳ, ನಟ ಕರಣ್ ಮೆಹ್ರಾ ಜೊತೆ ಹೆಂಡತಿಗೆ ಸಂಬಂಧ ಎಂದ ರಾಜೀವ್ ಸೇನ್


"ರಾಜೀವ್ ಜೊತೆಯಲ್ಲಿರುವ ಅಥವಾ ಅವರಿಂದ ದೂರವಾಗುವ ಬಗ್ಗೆ ನಟಿ ಸುಶ್ಮಿತಾ ಸೇನ್ ಅವರು ಎಂದಿಗೂ ನಮಗೆ ಏನು ಹೇಳಿಲ್ಲ" ಎಂದು ಚಾರು ಅವರು ಹೇಳಿದ್ದಾರೆ.


ಮೊದಲ ದಿನದಿಂದಲೇ ಅಕ್ಕ ನನಗೆ ನನ್ನ ಸಂತೋಷಕ್ಕೆ ಆದ್ಯತೆ ನೀಡುವಂತೆ  ಹೇಳಿದ್ದಾರೆ. ನನ್ನ ಹೆತ್ತವರು ಈ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸು ಎಂದು ನನಗೆ ಹೇಳಿದ್ದರು. ಆದರೆ ಎಂದಿಗೂ ಸುಶ್ಮಿತಾ ಅಕ್ಕ ಈ ರೀತಿಯಾಗಿ ಏನೂ ಹೇಳಿಲ್ಲ ಎಂದು ಅವರು ಹೇಳಿದರು.


Rajeev Sen accuses wife Charu Asopa having affair with actor karan mehra
ರಾಜೀವ್ ಮತ್ತು ಚಾರು


ತನ್ನ ಮತ್ತು ರಾಜೀವ್ ಅವರ ಸಂಬಂಧದಲ್ಲಿ ಏನಾಗುತ್ತಿದೆ ಅನ್ನೋದರ ಬಗ್ಗೆ ಎಲ್ಲವೂ ಸುಶ್ಮಿತಾ ಸೇನ್ ಅವರಿಗೆ ತಿಳಿದಿದೆ ಎಂದು ಚಾರು ಅಸೋಪಾ ಹೇಳಿದರು. "ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಯಾರೊಂದಿಗೂ ಹೆಚ್ಚು ಮಾತನಾಡಲು ಹೋಗಲಿಲ್ಲ. ಆದರೆ ಸುಶ್ಮಿತಾ ಅವರು ಮನೆಯವರಾಗಿದ್ದರಿಂದ ಅವರಿಗೆ ಎಲ್ಲ ವಿಷಯಗಳು ಸಹ ಗೊತ್ತಿದೆ.


ಇದನ್ನೂ ಓದಿ: Ashu Reddy: ಬೆಡ್‌ ಮೇಲೆ ಆಶು ರೆಡ್ಡಿ ಸಖತ್ ಪೋಸ್! ಫೋಟೋ ನೋಡಿ ನೆಟ್ಟಿಗರು ಏನ್ ಹೇಳಿದ್ರು?


ನನ್ನ ಅತ್ತೆ-ಮಾವಂದಿರಿಗೂ ತೊಂದರೆ ನೀಡಲು ನಾನು ಇಷ್ಟಪಡುವುದಿಲ್ಲ, ಏಕೆಂದರೆ ಅವರಿಗೆ ವಯಸ್ಸಾಗಿದೆ ಮತ್ತು ನನ್ನ ಅತ್ತೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಸುಶ್ಮಿತಾ ಅಕ್ಕ ಕರೆ ಮಾಡಿದಾಗ ಈ ವಿಷಯ ಮಾತಾಡಿದಾಗ ಅವಳು ಯಾವಾಗಲೂ ನನ್ನ ಬಗ್ಗೆ ಹೆಚ್ಚು ಗಮನ ನೀಡಲು ಹೇಳಿದ್ದಾರೆ ಎಂದು ಚಾರು ಹೇಳಿದರು.




2019 ರಲ್ಲಿ ಚಾರು-ರಾಜೀವ್ ಮದುವೆಯಾಗಿದ್ರು


ಚಾರು ಅಸೋಪಾ ಮತ್ತು ರಾಜೀವ್ ಸೇನ್ ಜೂನ್ 2019 ರಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಈ ವರ್ಷದ ಜೂನ್ ನಲ್ಲಿ ಚಾರು ರಾಜೀವ್ ಗೆ ಪರಸ್ಪರ ಬೇರ್ಪಡಲು ಕೋರಿ ನೋಟಿಸ್ ಕಳುಹಿಸಿದರು.




ಇದರ ನಂತರ, ರಾಜೀವ್, ಚಾರು ತಮ್ಮ ಮೊದಲ ಮದುವೆಯನ್ನು ಮರೆಮಾಚಿದ್ದಾಳೆ ಎಂದು ಆರೋಪಿಸಿದ ಮತ್ತೊಂದು ನೋಟಿಸ್ ನೊಂದಿಗೆ ಅವರ ನೋಟಿಸ್ ಗೆ ಉತ್ತರಿಸಿದರು. ತಮ್ಮ ಮಗಳಿಗಾಗಿ ಸೆಪ್ಟೆಂಬರ್ ನಲ್ಲಿ ಮತ್ತೆ ಒಂದಾಗಲು ನಿರ್ಧರಿಸುವ ಮೊದಲು ಇಬ್ಬರೂ ಪರಸ್ಪರರ ಹಲವಾರು ಆರೋಪಗಳನ್ನು ಮಾಡಿದ್ದರು. ಆದಾರೂ ಮತ್ತೊಮ್ಮೆ, ಅವರು ಈಗ ಬೇರ್ಪಡಲು ನಿರ್ಧರಿಸಿದ್ದಾರೆ.

Published by:Divya D
First published: