ವೈರಲ್​ ಆಗುತ್ತಿದೆ ಬಾಯ್​ಫ್ರೆಂಡ್​ ಜೊತೆ ಸುಶ್ಮಿತಾ ಸೇನ್​ರ​ ರೊಮ್ಯಾಂಟಿಕ್​ ವರ್ಕೌಟ್​ ವಿಡಿಯೋ..!

Sushmita Sen Workout Video: ಸುಶ್ಮಿತಾ ಸೇನ್​ ಆಗಾಗ ತಮ್ಮ ಮಕ್ಕಳೊಂದಿಗೆ ಸೇರಿ ಮನೆಯಲ್ಲಿ ವ್ಯಾಯಾಮ ಮಾಡುವ ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಲಾಕ್​ಡೌನ್​ನಲ್ಲಿ ಸುಶ್ಮಿತಾ ತಮ್ಮ ಬಾಯ್​ಫ್ರೆಂಡ್​ ಜೊತೆ ಸೇರಿ ಮಾಡಿರುವ ರೊಮ್ಯಾಂಟಿಕ್​ ವರ್ಕೌಟ್​ ವಿಡಿಯೋಗಳು ಈಗ ಸದ್ದು ಮಾಡುತ್ತಿವೆ.

ಬಾಯ್​ಫ್ರೆಂಡ್​ ಜತೆ ಸುಶ್ಮಿತಾ ಸೇನ್​

ಬಾಯ್​ಫ್ರೆಂಡ್​ ಜತೆ ಸುಶ್ಮಿತಾ ಸೇನ್​

  • Share this:
ಇಬ್ಬರು ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ಸುಶ್ಮಿತಾ ಸೇನ್​ ತಮ್ಮ ಫಿಟ್ನೆಸ್​ ವಿಡಿಯೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಆಗಾಗ ತಮ್ಮ ಕ್ರೇಜಿ ವರ್ಕೌಟ್​ ವಿಡಿಯೋಗಳನ್ನು ಹಂಚಿಕೊಳ್ಳುವ ಸುಶ್ಮಿತಾ ಅವರ ಇತ್ತೀಚೆಗಿನ ಒಂದು ವಿಡಿಯೋ ವೈರಲ್​ ಆಗುತ್ತಿದೆ. 

ಸುಶ್ಮಿತಾ ಸೇನ್​ ಆಗಾಗ ತಮ್ಮ ಮಕ್ಕಳೊಂದಿಗೆ ಸೇರಿ ಮನೆಯಲ್ಲಿ ವ್ಯಾಯಾಮ ಮಾಡುವ ವಿಡಿಯೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಲಾಕ್​ಡೌನ್​ನಲ್ಲಿ ಸುಶ್ಮಿತಾ ತಮ್ಮ ಬಾಯ್​ಫ್ರೆಂಡ್​ ಜೊತೆ ಸೇರಿ ಮಾಡಿರುವ ರೊಮ್ಯಾಂಟಿಕ್​ ವರ್ಕೌಟ್​ ವಿಡಿಯೋಗಳು ಈಗ ಸದ್ದು ಮಾಡುತ್ತಿವೆ.

Sushmita Sen announced that she is going to start her second innings after 10 years
ಬಾಯ್​ಫ್ರೆಂಡ್​ ಜತೆ ಸುಶ್ಮಿತಾ ಸೇನ್​


 
ಇನ್ನೂ ಸಿಂಗಲ್​ ಆಗಿರುವ 42 ವರ್ಷದ ನಟಿ ಸುಶ್ಮಿತಾ ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾದ ರೊಹ್ಮಾನ್​ ಅವರನ್ನು ಬಹಳ ಸಮಯದಿಂದ ಡೇಟಿಂಗ್​ ಮಾಡುತ್ತಿದ್ದಾರೆ. ಮಾಡೆಲಿಂಗ್​​ ಕ್ಷೇತ್ರದಲ್ಲಿರುವ ರೊಹ್ಮಾನ್ ಅವರಿಗೆ​ 28 ವರ್ಷ. ಈ ಜೋಡಿಯ ಲವ್ ಸ್ಟೋರಿ ಗುಟ್ಟಾಗಿ ಉಳಿದಿಲ್ಲ.

 
ಈ ಜೋಡಿ ಹೆಚ್ಚಾಗಿ ಹೊರಗಡೆ ಸುತ್ತಾಡುತ್ತಲೇ ಕಣ್ಣಿಗೆ ಬೀಳುತ್ತಾರೆ. ಅಷ್ಟೇ ಅಲ್ಲ ಇವರು ಜೊತೆಯಾಗಿ ಸೇರಿ ಮಾಡುವ ವರ್ಕೌಟ್​ ವಿಡಿಯೋಗಳೂ ಆಗಾಗ ಸುದ್ದಿಯಲ್ಲಿರುತ್ತವೆ. ಈ ಹಿಂದೆಯೂ ಇಂತಹದ್ದೇ ಒಂದು ವಿಡಿಯೋ ಸದ್ದು ಮಾಡಿತ್ತು. ಈಗ ಲಾಕ್​ಡೌನ್​ನಲ್ಲೂ ಇಂತಹದ್ದೇ ರೊಮ್ಯಾಂಟಿಕ್​ ವರ್ಕೌಟ್​ ವಿಡಿಯೋವನ್ನು ಸುಶ್ಮಿತಾ ಹಂಚಿಕೊಂಡಿದ್ದು, ಈಗ ಅದೂ ವೈರಲ್​ ಆಗುತ್ತಿದೆ.
ಸುಶ್ಮಿತಾ ತಮ್ಮ ವಿಡಿಯೋ ಜೊತೆಗೆ ಸ್ಥಿರವಾದ ಸಂಬಂಧದ ಕುರಿತೂ ಬರೆದುಕೊಂಡಿದ್ದಾರೆ. ಸ್ಥಿರವಾದ ಸಂಬಂಧ ಇರಬೇಕಾದರೆ, ಅದಕ್ಕೆ ಸಮತೋಲನ ಕೇಂದ್ರ ಬಹಳ ಮುಖ್ಯ. ಜೊತೆಗೆ ನಂಬಿಕೆ ಹಾಗೂ ಹೊಂದಿಕೊಳ್ಳುವ ಮನಸ್ಸಿರಬೇಕು ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ: Kishore Kumar: ಗೋಡೆ ಮೇಲಿನ ಬರವಣಿಗೆ ಅಂತ ಬೆರಣಿ ಜೊತೆ ಸೆಲ್ಫಿ ತೆಗೆದುಕೊಂಡ ಸ್ಯಾಂಡಲ್​ವುಡ್ ನಟ ಕಿಶೋರ್​..!

ಸುಶ್ಮಿತಾ ಸೇನ್​ ಹಾಗೂ ರೊಹ್ಮಾನ್​ ಅವರ ವಿವಾಹದ ವಿಷಯ ಬಹಳ ಹಿಂದಿನಿಂದಲೂ ಓಡಾಡುತ್ತಿದೆ. ಆದರೆ ಈ ಕುರಿತಾಗಿ ಈ ಜೋಡಿ ಮಾತ್ರ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಇವರು ನವದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

50ನೇ ವಯಸ್ಸಿನಲ್ಲೂ ಬೋಲ್ಡ್​ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದ ನಟಿ ಶ್ರೀದೇವಿ..!

First published: