Sushmita Sen: ಬ್ರೇಕಪ್ ನಂತರ ಮೂರನೇ ಮಗುವನ್ನು ದತ್ತು ಪಡೆದ ನಟಿ.. ನಿಜವಾಗಿಯೂ ನೀವು ದೇವತೆ ಅಂದಿದ್ಯಾಕೆ ನೆಟ್ಟಿಗರು?

ಈಗಾಗಲೇ ಸುಶ್ಮಿತಾ ಇಬ್ಬರು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಾ ಇದ್ದಾರೆ. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ಎರಡು ಹೆಣ್ಣುಮಕ್ಕಳ ನಂತ ಗಂಡು ಮಗುವನ್ನು ದತ್ತು ಪಡೆದಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. 

ನಟಿ ಸುಶ್ಮಿತಾ ಸೇನ್​​

ನಟಿ ಸುಶ್ಮಿತಾ ಸೇನ್​​

  • Share this:
ಮಿಸ್‌ ಯುನಿವರ್ಸ್ ಕಿರೀಟ ತೊಟ್ಟ ಬಾಲಿವುಡ್ (Bollywood) ನಟಿ ಸುಶ್ಮಿತಾ ಸೇನ್‌ (Sushmita Sen) ಅವರು ಮಾಡಲ್‌ ರೋಹ್‌ಮನ್ ಶಾಲ್ ( model Rohman shawl ) ಬ್ರೇಕಪ್ (Breakup) ವಿಚಾರ ಸದ್ಯ ಎಲ್ಲಾರಿಗೂ ಗೊತ್ತಿರುವ ವಿಚಾರ, ಆದರೆ ಅವರ ಬ್ರೇಕ್ ಅಪ್ ಹಿಂದಿನ ಕಾರಣ ಏನು ಎಂದು ತಿಳಿಯುವ ಕುತೂಹಲ ಜನರಲ್ಲಿ ತುಸು ಹೆಚ್ಚಾಗಿಯೇ ಇದೆ. ಸುಶ್ಮಿತಾ ಅವರ ಸಿನಿ ಬದುಕಿನ ಜೊತೆಗೆ ಅವರ ವೈಯಕ್ತಿಕ ಬದುಕು (Personal life) ಕೂಡ ಅಷ್ಟೇ ಸದಾ ಚರ್ಚೆಯಲ್ಲಿತ್ತು. ಯಾಕೆಂದರೆ ಸುಶ್ಮಿತಾ ಅವರು ಇನ್ನು ಮದುವೆಯೇ ಆಗಿರಲಿಲ್ಲ, ಸುಶ್ಮಿತಾ ಸೇನ್ ತನ್ನ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬ್ರೇಕ್ ಅಪ್ ಆಗಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್​ ಆಗಿತ್ತು. ಬಹುಕಾಲದಿಂದ ಸುಶ್ಮಿತಾ , ರೋಹ್‌ಮನ್ ಶಾಲ್ ಜೊತೆಗೆ ಲಿವ್ ಇನ್ ರಿಲೇಷನ್‌ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಅವರು ಆತನಿಂದ ದೂರ ಆಗಿದ್ದಾರೆ. ಈ ವಿಚಾರವನ್ನು ಸುಶ್ಮಿತಾ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟಪಡಿಸಿದ್ದರು. ಮತ್ತೆ ಇದೀಗ ಸುಶ್ಮಿತಾ ಸೇನ್​ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ಅವರು ಹೊಸ ಬಾಯ್​ಫ್ರೆಂಡ್​ ವಿಚಾರಕ್ಕೆ ಸುದ್ದಿಯಾಗುತ್ತಿಲ್ಲ. ಬದಲಾಗಿ, ಮತ್ತೊಂದು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಬ್ರೇಕಪ್ ನೋವಿನಿಂದ ಹೊರ ಬಂದು ಸುಶ್ಮಿತಾ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇವರ ಈ ಕಾರ್ಯ ಕಂಡು ನೆಟ್ಟಿಗರು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಮೂರನೇ ಮಗುವನ್ನು ದತ್ತು ಪಡೆದ ನಟಿ ಸುಶ್ಮಿತಾ! 

ಈಗಾಗಲೇ ಸುಶ್ಮಿತಾ ಇಬ್ಬರು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಾ ಇದ್ದಾರೆ. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ಎರಡು ಹೆಣ್ಣುಮಕ್ಕಳ ನಂತ ಗಂಡು ಮಗುವನ್ನು ದತ್ತು ಪಡೆದಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಮೊದಲು ನಟಿ ಸುಶ್ಮಿತಾ ಸೇನ್ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ನಟಿ 2000ದಲ್ಲಿ ರೆನೀ ಹಾಗೂ 2010ರಲ್ಲಿ ಅಲಿಶಾರನ್ನು ದತ್ತು ಪಡೆದಿದ್ದರು ಆದರೆ ಈ ಬಾರಿ ಸುಶ್ಮಿತಾ ಗಂಡು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ತಮ್ಮ ಇಬ್ಬರು ದತ್ತು ಮಕ್ಕಳಾದ ರೀನಾ ಮತ್ತು ಅಲಿಸಾ ಜೊತೆಗೆ ತನ್ನ ಹೊಸ ಗಂಡು ಮಗುವಿನ ಜೊತೆಗೆ ಫೊಟೋಗೆ ಪೋಸ್‌ ಕೊಟ್ಟಿದ್ದಾರೆ ಸುಶ್ಮಿತಾ ಸೇನ್.
View this post on Instagram


A post shared by yogen shah (@yogenshah_s)

ಇದನ್ನು ಓದಿ : ಬಾಯ್‌ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್.. ಕಾರಣ ಇಲ್ಲಿದೆ

11 ವರ್ಷದ ಬಳಿಕ ಗಂಡು ಮಗು ದತ್ತು ಪಡೆದ ನಟಿ!

ನಟಿ ಸುಷ್ಮಿತಾ ಸೇನ್‌ ತನಗೆ 24 ವರ್ಷ ಇದ್ದಾಗ ಮೊದಲ ಮಗು ರೀನಾಳನ್ನು ದತ್ತು ಪಡೆದಿದ್ದಾರೆ.ಈಗ 11 ವರ್ಷದ ಬಳಿಕ ಮತ್ತೊಂದು ಮಗುವನ್ನು ಸುಶ್ಮಿತಾ ದತ್ತು ಪಡೆದುಕೊಂಡಿದ್ದಾರೆ. ಬಹುಶಃ ಸುಶ್ಮಿತಾ ಅವರು ಮಕ್ಕಳ ಜೊತೆಗೆ ಅತಿ ಹೆಚ್ಚಾಗಿ ಸಂತಸದಿಂದ ಇರುತ್ತಾರೆ ಎನಿಸುತ್ತೆ. ಹಾಗಾಗಿ ಮತ್ತೊಂದು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ನೀವು ನಿಜವಾದ ದೇವತೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ನೀವು ಮತ್ತೆ ಪ್ರೀತಿಯಲ್ಲಿ ಬೀಳಬೇಡಿ.. ಮಕ್ಕಳನ್ನೇ ಪ್ರೀತಿಸಿ ಎಂದು ಇನ್ನೂ ಕೆಲವರು ಕಮೆಂಟ್​ ಮಾಡಿದ್ದಾರೆ.

ಇದನ್ನು ಓದಿ: Reba Monica John ಮದುವೆ ಆಯ್ತು, ‘ರತ್ನನ್ ಪ್ರಪಂಚ’ ಚೆಲುವೆ ಕೈಹಿಡಿದ ವರ ಯಾರು ಗೊತ್ತಾ?

1996ರಲ್ಲಿ ಬಾಲಿವುಡ್​ಗೆ ಪಾದಾರ್ಪಣೆ!

ಸುಶ್ಮಿತಾ ಸೇನ್ ಅವರು ಆರ್ಯ ಎಂಬ ವೆಬ್-ಸರಣಿಯೊಂದಿಗೆ ಚಿತ್ರರಂಗಕ್ಕೆ ಪುನರಾಗಮನ ಮಾಡಿದರು, ಇದು ಈ ವರ್ಷ ಇಂಟರ್ನ್ಯಾಷನಲ್ ಎಮ್ಮಿಸ್‌ನಲ್ಲಿ ಅತ್ಯುತ್ತಮ ನಾಟಕ ಸರಣಿಯ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು. ಅವರು ಕೊನೆಯ ಬಾರಿಗೆ ಆರ್ಯ ಎರಡನೇ ಸೀಸನ್ ನಲ್ಲಿ ಕಾಣಿಸಿಕೊಂಡರು, ಇದು ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಸುಶ್ಮಿತಾ ಸೇನ್ 1994 ರ ಭುವನ ಸುಂದರಿ ಕಿರೀಟವನ್ನು ಪಡೆದರು. ಅವರು 1996 ರ ಚಲನಚಿತ್ರ ದಸ್ತಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.
Published by:Vasudeva M
First published: