Sushanth Singh Rajput: ಬಾಲಿವುಡ್ ನಾಶಮಾಡಲು ಇದೊಂದು ಅಸ್ತ್ರ ಸಾಕಂತೆ, ಸುಶಾಂತ್ ಸಿಂಗ್ ಸಹೋದರಿಯ ಶಾಕಿಂಗ್ ಟ್ವೀಟ್​

Brahmastra: ಬಾಲಿವುಡ್ ಸ್ಟಾರ್ ನಟರಲ್ಲಿ ಸುಶಾಂತ್ ಸಿಂಗ್ ಕೂಡರು. ಸುಮಾರು ಮೂರು ವರ್ಷಗಳೇ ಕಳೆದರೂ ಅವರ ನಟನೆ ಮಾತ್ರ ಇನ್ನೂ ಅಭಿಮಾನಿಗಳ ಕಣ್ಣಿಂದ ಮರೆಮಾಚಿಲ್ಲ. ಇದೀಗ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಯಾದ ಹಿನ್ನಲೆಯಲ್ಲಿ ಸುಶಾಂತ್​ರವರ ತಂಗಿ ಒಂದು ಪೋಸ್ಟ್ ಮಾಡಿದ್ದಾರೆ.

ಸುಶಾಂತ್ ಸಿಂಗ್ ತಂಗಿಯ ಟ್ವಿಟರ್ ಪೋಸ್ಟ್

ಸುಶಾಂತ್ ಸಿಂಗ್ ತಂಗಿಯ ಟ್ವಿಟರ್ ಪೋಸ್ಟ್

  • Share this:
ಸದ್ಯ ಬಾಲಿವುಡ್‌ (Bollywood) ನಲ್ಲಿ ಬ್ರಹ್ಮಾಸ್ತ್ರದ್ದೇ ಮಾತು. ರಣಬೀರ್‌ ಕಪೂರ್‌  (Ranbir Kapoor ಹಾಗೂ ಆಲಿಯಾ ಭಟ್‌ ನಟನೆಯ ಭಾರೀ ನಿರೀಕ್ಷೆ ಹೊಂದಿದ್ದ ಸಿನಿಮಾ ಬ್ರಹ್ಮಾಸ್ತ್ರ ಸೋತು ಹೋದಂತೆ ಅನಿಸುತ್ತಿದೆ. ಸುಮಾರು 410 ಕೋಟಿ ರೂ ಬಜೆಟ್‌ ಹೊಂದಿರೋ ಈ ಚಿತ್ರ ನೋಡಿರೋ ಸಿನಿರಸಿಕರು ನಿರಾಸೆ ಹೊಂದಿದ್ದಾರೆ. ಬ್ರಹ್ಮಾಸ್ತ್ರ ಚಿತ್ರಕ್ಕೆ ಕೇವಲ 3 ಸ್ಟಾರ್‌ ಗಳನ್ನು ಕೊಟ್ಟಿರುವ ನೋಡುಗರು, ಅಷ್ಟೇನೂ ಚೆನ್ನಾಗಿಲ್ಲ ಅನ್ನೋದಾಗಿ ಹೇಳ್ತಿದ್ದಾರೆ. ಬಾಲಿವುಡ್​ನ  ಹಲವು ಸ್ಟಾರ್‌ ನಟರ ಅಪಿಯರೆನ್ಸ್‌ ಹೊಂದಿರುವ ಈ ಚಿತ್ರದ ಗ್ರಾಫಿಕ್ಸ್‌ ಹಾಗೂ ಕಥೆ ಏನೇನೂ ಚೆನ್ನಾಗಿಲ್ಲ ಎಂದಿರುವ ನೆಟ್ಟಿಗರು ಕೊಟ್ಟ‌ ದುಡ್ಡಿಗೂ ಮೋಸ ಅನ್ನೋದಾಗಿ ಹೇಳಿದ್ದಾರೆ. ಈ ಮಧ್ಯೆ ಸುಶಾಂತ್‌ ಸಿಂಗ್ ರಜಪೂತ್‌ ಸಹೋದರಿ ಮೀತು ಸಿಂಗ್  ( Meetu singh) ‌ಮಾತಲ್ಲೇ ಬ್ರಹ್ಮಾಸ್ತ್ರಕ್ಕೆ ಕುಟುಕಿದ್ದಾರೆ ಜೊತೆಗೆ ಬಾಲಿವುಡ್​ಗೆ ಮಾತಲ್ಲೆ ಚುಚ್ಚಿ ಪೋಸ್ಟ್‌ ಹಾಕಿದ್ದಾರೆ.

ಸದ್ಯ ಬಾಲಿವುಡ್‌ ನ ಸಿನಿಮಾಗಳು ಮಖಾಡೆ ಮಲಗುತ್ತಿವೆ. ಜನರನ್ನು ತಲುಪಲು ವಿಫಲವಾಗುತ್ತಿವೆ. ಬಂಡವಾಳಗಳಿಸೋಕೂ ಪರದಾಡುವ ಸ್ಥಿತಿಯಿಂದಾಗಿ ಚಿತ್ರದ ನಿರ್ಮಾಪಕರು ಕಂಗಾಲಾಗಿದ್ದಾರೆ. ಘಟಾನುಘಟಿ ನಟ- ನಟಿಯರು ಅಭಿನಯಿಸಿರುವ ಚಿತ್ರಗಳೇ ಫ್ಲಾಪ್ ಹೋಗುತ್ತಿವೆ. ಅಲ್ಲದೇ ಚಿತ್ರಕಥೆ, ನಿರ್ದೇಶನ ಚೆನ್ನಾಗಿಲ್ಲದ, ಜನರ ನಿರೀಕ್ಷೆ ತಲುಪದ ಹಿನ್ನೆಲೆಯಲ್ಲಿ ಬಾಯ್ಕಾಟ್‌ ಬಾಲಿವುಡ್‌ ಅನ್ನೋದು ಇಂಟರ್‌ ನೆಟ್‌ ನಲ್ಲಿ ಟ್ರೆಂಡ್‌ ಆಗುತ್ತಿದೆ. ಇದೇ ವೇಳೆ ಸುಶಾಂತ್‌ ಸಿಂಗ್‌ ರಜಪೂತ್​ಗೆ ನ್ಯಾಯ ಸಿಗಬೇಕು ಅನ್ನೋ ಮಾತುಗಳೂ ನೆಟ್ಟಿಗರಿಂದ ಕೇಳಿಬರುತ್ತಿದೆ.

ಇದನ್ನೂ ಓದಿ: Bigg Boss 16: ಹೇಗಿರಲಿದೆ ಗೊತ್ತಾ ಬಿಗ್ ಬಾಸ್ 16? ಪ್ರೋಮೋದಲ್ಲಿ ಸಲ್ಲು ಕೊಟ್ರು ನೋಡಿ ಟ್ವಿಸ್ಟ್

ಕಳೆದ ಎರಡು ವರ್ಷಗಳ ಹಿಂದೆ ನಿಧನರಾದ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಹಳೆಯ ಫೋಟೋವೊಂದನ್ನು ಸುಶಾಂತ್‌ ಸಿಂಗ್​ನ    ಸಹೋದರಿ ಮೀತು ಸಿಂಗ್‌ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್‌ ಅನ್ನು ಸರ್ವನಾಶ ಮಾಡಲು ಸುಶಾಂತ್‌ ನ ಬ್ರಹ್ಮಾಸ್ತ್ರವೊಂದೇ ಸಾಕು ಎಂಬುದಾಗಿ ಬರೆದುಕೊಂಡಿದ್ದಾರೆ.ಅಲ್ಲದೇ, ಬಾಲಿವುಡ್‌ ಯಾವಾಗಲೂ ಜನರ ಮೇಲೆ ಸವಾರಿ ಮಾಡುತ್ತೆ. ಅಲ್ದೇ ಪರಸ್ಪರ ಗೌರವ ಹಾಗೂ ಮನುಷ್ಯತ್ವ ತೋರಿಸೋದು ಕೂಡ ಮಾಡೋಲ್ಲ. ಜನರ ಪ್ರೀತಿಯನ್ನು ಗೆಲ್ಲಲು ಅವರು (ಬಾಲಿವುಡ್‌) ನಲ್ಲಿ ಸೋತಿದ್ದಾರೆ. ಇಂಥ ಜನರನ್ನು ದೇಶದ ಮುಖವೆಂಬಂತೆ ಬಿಂಬಿಸಲು ಏಕೆ ಬಿಡಬೇಕು. ನೈತಿಕ ಮೌಲ್ಯಗಳು ನಮ್ಮ ದೇಶದ ಆದರ್ಶ. ಜನರ ಅಭಿಮಾನ ಹಾಗೂ ಗೌರವನನ್ನು ಗೆಲ್ಲೋದಿಕ್ಕೆ ಬೇಕಾಗಿರೋದು ಗುಣಮಟ್ಟ ಹಾಗೂ ನೈತಿಕ ಮೌಲ್ಯ ಮಾತ್ರ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಬಾಲಿವುಡ್‌ ನ ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜಪೂತ್‌ 14 ನೇ ಜೂನ್‌ 2020 ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮುಂಬೈನಲ್ಲಿರೋ ತಮ್ಮ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ 34 ನೇ ವಯಸ್ಸಿಗೇ ಸಾವಿನ ಮನೆ ಸೇರಿದ ಸುದ್ದಿ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದರು. ಅಲ್ಲದೇ ಇದಾದ ಮೇಲೆ ಸುಶಾಂತ್‌ ಸಿಂಗ್‌ ಬಾಲಿವುಡ್‌ ನಲ್ಲಿ ಅನುಭವಿಸಿದ ಅವಮಾನ, ಕಿರಿಕಿರಿ ಇವೆಲ್ಲವೂ ಬೆಳಕಿಗೆ ಬಂದಿತ್ತು. ಘಟನಾನುಘಟಿ ನಟರಿಂದ, ನಿರ್ದೇಕರಿಂದ ಸುಶಾಂತ್‌ ಏನೆಲ್ಲ ಅನುಭವಿಸಿದ್ದರು ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿತ್ತು.

ಇದನ್ನೂ ಓದಿ: Brahmastra: ಬ್ರಹ್ಮಾಸ್ತ್ರ ಸಿನಿಮಾದಲ್ಲಿ ರಣಬೀರ್ ತಾಯಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ? ಚಿತ್ರತಂಡ ಮೌನ ವಹಿಸಿದ್ದೇಕೆ?

ಇದೇ ವೇಳೆ ಮೀತು ಸಿಂಗ್‌, ಸಹೋದರ ಸುಶಾಂತ್‌ ಸಿಂಗ್‌ ಅವರ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಈವೆಂಟ್‌ ಒಂದರಲ್ಲಿ ಸುಶಾಂತ್ ಸ್ಪೂರ್ತಿದಾಯಕ ಭಾಷಣ ಮಾಡುತ್ತಿರುವ ವೀಡೀಯೋ ಅದು. ಅಸೂಯೆ ಹಾಗೂ ಅಭದ್ರತೆಯಿಂದ ಬಾಲಿವುಡ್‌ ತನ್ನ ತಮ್ಮನನ್ನು ಕೊಂದಿರುವುದಾಗಿ ಅವರು ಪೋಸ್ಟ್‌ ಕೆಳಗೆ ಬರೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಸುಶಾಂತ್‌ ಸಿಂಗ್​ನ ಪ್ರತಿಭೆಯನ್ನು ಗುರುತಿಸ್ತಾರೆ. ಆದ್ರೆ ಸುಶಾಂತ್‌ ಕೆಲಸ ಮಾಡ್ತಿದ್ದ ಉದ್ಯಮ, ಚಿತ್ರರಂಗ ಮಾತ್ರ ಈ ವಿಷಯದಲ್ಲಿ ವಿಫಲವಾಗಿದೆ ಎಂದಿದ್ದಾರೆ.
First published: