ತನ್ನ ನೃತ್ಯ ಪ್ರದರ್ಶನದಲ್ಲಿ ಸಹ ನೃತ್ಯಗಾರನಾಗಿದ್ದ ಸುಶಾಂತ್​ ಅಗಲಿಕೆಗೆ ಕಂಬನಿ ಮಿಡಿದ ಐಶ್ವಯಾ ರೈ..!

Sushant - Aishwarya: ಸುಶಾಂತ್​ ಅಗಲಿಕೆಯಿಂದ ಬಾಲಿವುಡ್ ಶೋಕ​ದಲ್ಲಿ ಮುಳುಗಿದೆ.ಜೊತೆ ಸ್ಟಾರ್​ಗಳು ಸುಶಾಂತ್​ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸುತ್ತಿದ್ದಾರೆ. ಐಶ್ವರ್ಯಾ ರೈ ಬಚ್ಚನ್​ ಸಹ ಸುಶಾಂತ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಐಶ್ವರ್ಯಾ ರೈ ಹಾಗೂ ಸುಶಾಂತ್​ ಸಿಂಗ್​ ರಜಪೂತ್​

ಐಶ್ವರ್ಯಾ ರೈ ಹಾಗೂ ಸುಶಾಂತ್​ ಸಿಂಗ್​ ರಜಪೂತ್​

  • Share this:
ನಟ ಸುಶಾಂತ್​ ಸಿಂಗ್​ ರಜಪೂತ್​ ಕಿರುತೆರೆ ಮೂಲಕ ಬಾಲಿವುಡ್​ಗೆ ಎಂಟ್ರಿಕೊಟ್ಟಿದ್ದು ಗೊತ್ತೇ ಇದೆ. ಅದಕ್ಕೂ ಮೊದಲು ಸಾರ್ವಜನಿಕರ ನೃತ್ಯ ಪ್ರದರ್ಶನಗಳಲ್ಲಿ ಸಹ ನೃತ್ಯಗಾರನಾಗಿಯೂ ಕೆಲಸ ಮಾಡಿದ್ದಾರೆ. ಜೂನ್​ 14ರಂದು ಬಾಲಿವುಡ್​ನ ಪ್ರತಿಭಾವಂತ ನಟ ಸುಶಾಂತ್​ ಇಹಲೋಕ ತ್ಯಜಿಸಿದರು.

ಸುಶಾಂತ್​ ಅಗಲಿಕೆಯಿಂದ ಬಾಲಿವುಡ್ ಶೋಕದಲ್ಲಿ ಮುಳುಗಿದೆ.ಜೊತೆ ಸ್ಟಾರ್​ಗಳು ಸುಶಾಂತ್​ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸುತ್ತಿದ್ದಾರೆ. ಐಶ್ವರ್ಯಾ ರೈ ಬಚ್ಚನ್​ ಸಹ ಸುಶಾಂತ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

Sushant was among the backup dancers at the 2006 CWG ceremony in Australia
ಐಶ್ವರ್ಯಾ ರೈ ಅವರ ಇನ್​ಸ್ಟಾಗ್ರಾಂ ಸ್ಟೋರಿ


2006ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಕಾಮನ್​ ವೆಲ್ತ್​ ಗೇಮ್ಸ್​ನ ಮುಕ್ತಾಯ ಸಮಾರಂಭದಲ್ಲಿ ಐಶ್ವರ್ಯಾ ರೈ ಅವರ ನೃತ್ಯ ಪ್ರದರ್ಶನ ನಡೆದಿತ್ತು.ಈ ಪ್ರದರ್ಶನದಲ್ಲಿ ಶಾಮಕ್​ ದಾವರ್​ ಅವರ ಡ್ಯಾನ್ಸ್​ ಗ್ರೂಪ್​ನಿಂದ ಸುಶಾಂತ್​ ಸಹ ನೃತ್ಯಗಾರನಾಗಿ ಭಾಗವಹಿಸಿದ್ದರು. ಐಶ್ವರ್ಯಾ ಅವರ ಹಿಂದೆ ನೃತ್ಯ ಮಾಡುತ್ತಿದ್ದ ಸುಶಾಂತ್​ ಆಗ ಇನ್ನೂ ಬಾಲಿವುಡ್​ಗೆ ಕಾಲಿಟ್ಟಿರಲಿಲ್ಲ.ಆ ಪ್ರದರ್ಶನದಲ್ಲಿ ಸುಶಾಂತ್​ ಅವರಿಗೆ ಐಶ್ವರ್ಯಾ ಅವರನ್ನು ಮೇಲೆತ್ತುವ ಕೆಲಸ ನೀಡಲಾಗಿತ್ತು. ಅಂತೆಯೇ ಐಶ್ವರ್ಯಾ ಅವರನ್ನು ಮೇಲೆತ್ತಿದ್ದ ಸುಶಾಂತ್​ಗೆ ಅವರನ್ನು ಕೆಳಗಿಳಿಸುವುದೇ ಮರೆತು ಹೋಗಿತ್ತಂತೆ. ಹೀಗೆಂದು ಸುಶಾಂತ್​ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

 

Nithya Menen: ನಾವು ಚೆನ್ನಾಗಿದ್ದರೆ ಮಾತ್ರ ಬೇರೆಯವರಿಗೆ ನೆರವಾಗಬಹುದು ಎಂದ ನಿತ್ಯಾ ಮೆನನ್​..!


 

 

ಇದನ್ನೂ ಓದಿ: ಸುಶಾಂತ್​ರಂತೆಯೇ ಆಗಿತ್ತಾ ಟಾಲಿವುಡ್​ ನಟ ಉದಯ್​ ಕಿರಣ್​ ಪರಿಸ್ಥಿತಿ..?
First published: