Video: ಸುಶಾಂತ್​ ಸಾಕಿದ್ದ ನಾಯಿಯ ಮೂಕ ರೋಧನೆ..!

Sushant And His Dog Fudge: ​ಸುಶಾಂತ್​ ಅವರಿಗೆ ಬಿಡುವಿನ ವೇಳೆ ಪುಸ್ತಕ ಓದುವುದು, ರಾತ್ರಿವೇಳೆ ಟೆಲಿಸ್ಕೋಪ್​ ಮೂಲಕ ಆಕಾಶದಲ್ಲಿ ನಕ್ಷತ್ರಗಳನ್ನ ನೋಡುತ್ತಿದ್ದ ಸುಶಾಂತ್​ಗೆ ಪ್ರಾಣಿ-ಪಕ್ಷಿಗಳೆಂದರೂ ಇಷ್ಟವಿತ್ತು. ಅದಕ್ಕೆ ಅವರು ಮನೆಯಲ್ಲಿ ಮುದ್ದಾದ ನಾಯಿಯನ್ನು ಸಾಕಿಕೊಂಡಿದ್ದರು. ಸಮಯ ಸಿಕ್ಕಾಗಲೆಲ್ಲ ಅದರ ಜೊತೆ ಖುಷಿಯಿಂದ ಟೈಮ್​ಪಾಸ್​ ಮಾಡುತ್ತಿದ್ದರು.

ಸುಶಾಂತ್ ಹಾಗೂ ಅವರ ನಾಯಿ ಫಜ್​

ಸುಶಾಂತ್ ಹಾಗೂ ಅವರ ನಾಯಿ ಫಜ್​

  • Share this:
ಸಾಕು ಪ್ರಾಣಿ ಯಾವುದಾದರೂ ಅವುಗಳು ಸಾಕಿದ ಒಡೆಯನಿಗೆ ಸದಾ ಋಣಿಯಾಗಿರುತ್ತವೆ. ಅದಕ್ಕೆ ಸಾಕುಪ್ರಾಣಿಗಳು ನಿಯತ್ತಿಗೆ ಮತ್ತೊಂದು ಹೆಸರು ಎನ್ನಲಾಗುತ್ತದೆ. ಅದರಲ್ಲೂ ನಾಯಿಗಳು ಸಾಕಿದವರನ್ನೇ ತನ್ನ ಪ್ರಪಂಚವನ್ನಾಗಿಸಿಕೊಂಡಿರುತ್ತವೆ. ಸುಶಾಂತ್​ ಸಹ ಒಂದು ನಾಯಿ ಸಾಕಿದ್ದರು.

​ಸುಶಾಂತ್​ ಅವರಿಗೆ ಬಿಡುವಿನ ವೇಳೆ ಪುಸ್ತಕ ಓದುವುದು, ರಾತ್ರಿವೇಳೆ ಟೆಲಿಸ್ಕೋಪ್​ ಮೂಲಕ ಆಕಾಶದಲ್ಲಿ ನಕ್ಷತ್ರಗಳನ್ನ ನೋಡುತ್ತಿದ್ದ ಸುಶಾಂತ್​ಗೆ ಪ್ರಾಣಿ-ಪಕ್ಷಿಗಳೆಂದರೂ ಇಷ್ಟವಿತ್ತು. ಅದಕ್ಕೆ ಅವರು ಮನೆಯಲ್ಲಿ ಮುದ್ದಾದ ನಾಯಿಯನ್ನು ಸಾಕಿಕೊಂಡಿದ್ದರು. ಸಮಯ ಸಿಕ್ಕಾಗಲೆಲ್ಲ ಅದರ ಜೊತೆ ಖುಷಿಯಿಂದ ಟೈಮ್​ಪಾಸ್​ ಮಾಡುತ್ತಿದ್ದರು.

How True ♥️

ತಮ್ಮ ಮುದ್ದಿನ ನಾಯಿ ಫಜ್​ಗಾಗಿ ಕೆಲವು ತಿಂಗಳ ಹಿಂದೆ ​ ಸುಶಾಂತ್​ ಒಂದು ಟ್ವೀಟ್​ ಮಾಡಿದ್ದರು. ನನ್ನನೀನು ನೆನಪಿಸಿಕೊಂಡರೆ ಸಾಕು, ಬೇರೆ  ಯಾರು ಬೇಕಾದರೂ ಮರೆಯಲಿ, ಅಸದರಿಂದ ನನಗೆ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಟ್ವೀಟ್​ ಮಾಡಿದ್ದರು ಸುಶಾಂತ್​.

sushant singhs pet dog fudge is heartbroken and trying to find him in house
ಸುಶಾಂತ್​ ಮಾಡಿದ್ದ ಟ್ವೀಟ್​
ಸುಶಾಂತ್​ ಅವರ ನಾಯಿ ಈಗ ಅವರನ್ನು ಮನೆಯಲ್ಲು ಹುಡುಕಾಡುತ್ತಾ ಮೂಕ ರೋಧನೆ ಅನುಭವಿಸುತ್ತಿದೆ. ಅದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸುಶಾಂತ್​ ಆತ್ಮಹತ್ಯೆಗೆ ಕಾರಣ ಫಿಲ್ಮ್​ ಮೇಕರ್​ ಕರಣ್​ ಜೋಹರ್, ಸಲ್ಮಾನ್​ ಖಾನ್​, ಏಕ್ತಾ ಕಪೂರ್​ ಹಾಗೂ ಇನ್ನು ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಬಾಲಿವುಡ್​ನ ಸ್ಟಾರ್ ಕಿಡ್ಸ್​ಗಳ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.

sushant singhs pet dog fudge is heartbroken and trying to find him in house
ಸಾಕು ನಾಯಿ ಫಜ್​ ಜೊತೆ ಸುಶಾಂತ್​


 

Nithya Menen: ನಾವು ಚೆನ್ನಾಗಿದ್ದರೆ ಮಾತ್ರ ಬೇರೆಯವರಿಗೆ ನೆರವಾಗಬಹುದು ಎಂದ ನಿತ್ಯಾ ಮೆನನ್​..!


 

 

ಇದನ್ನೂ ಓದಿ: ತನ್ನ ನೃತ್ಯ ಪ್ರದರ್ಶನದಲ್ಲಿ ಸಹ ನೃತ್ಯಗಾರನಾಗಿದ್ದ ಸುಶಾಂತ್​ ಅಗಲಿಕೆಗೆ ಕಂಬನಿ ಮಿಡಿದ ಐಶ್ವಯಾ ರೈ..!
First published: