news18-kannada Updated:August 28, 2020, 12:15 PM IST
ಸುಶಾಂತ್ ಸಿಂಗ್
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಎರಡುವರೆ ತಿಂಗಳೇ ಕಳೆದಿದೆ. ಅವರ ಆತ್ಮಹತ್ಯೆ ನಂತರ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಸಾಕಷ್ಟು ಚರ್ಚೆಯಲ್ಲಿದೆ. ಇನ್ನು ಸುಶಾಂತ್ ಸಾವಿಗೆ ಅವರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಕೂಡ ಕಾರಣ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಈ ಮಧ್ಯೆ ರಿಯಾ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಚ್ಚರಿಯ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ ಸುಶಾಂತ್ ಕರ್ನಾಟಕದ ಕೊಡಗಿನಲ್ಲಿ ಸೆಟಲ್ ಆಗಲು ಬಯಸಿದ್ದರಂತೆ.
ಸುಶಾಂತ್ ಕೊನೆಯ ದಿನಗಳು ಹೇಗಿದ್ದವು? ನೀವು ಸುಶಾಂತ್ ಮನೆ ಬಿಟ್ಟು ತೆರಳಿದ್ದೇಕೆ ಎನ್ನುವ ಬಗ್ಗೆ ಮಾತನಾಡಿರುವ ರಿಯಾ, ಸುಶಾಂತ್ಗೆ ಮುಂಬೈ ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಆತ ಸದಾ ನಗರ ಜೀವನದಿಂದ ದೂರ ಉಳಿಯಲು ಬಯಸುತ್ತಿದ್ದ. ಹೀಗಾಗಿ, ಕೂರ್ಗ್ನಲ್ಲಿ ಮನೆ ಹುಡುಕಿ ಅಲ್ಲಿಯೇ ಉಳಿಯಲು ಬಯಸಿದ್ದ ಎಂದು ರಿಯಾ ಹೇಳಿದ್ದಾರೆ.
ಕೊಡಗಿನಲ್ಲಿ ವಾತಾವರಣ ತುಂಬಾನೇ ತಂಪು. ಮಳೆಗಾಲದಲ್ಲಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುತ್ತದೆ. ಚಳಿಗಾಲದಲ್ಲಿ ಮೈ ಕೊರೆಯುವಳ ಚಳಿ. ಬೇಸಿಗೆಯಲ್ಲಿ ಸೂರ್ಯ ಸುಡುತ್ತಿದ್ದರೂ ಕೊಡಗು ಮಾತ್ರ ಚಳಿಯಿಂದ ಕೂಡಿರುತ್ತದೆ. ಈ ವಾತಾವರಣ ಸುಶಾಂತ್ಗೆ ತುಂಬಾನೇ ಇಷ್ಟವಾಗಿತ್ತು ಎನ್ನಲಾಗಿದೆ.
ಸುಶಾಂತ್ ಕೂರ್ಗ್ನಲ್ಲಿ ಮನೆ ತೆಗೆದುಕೊಂಡು ಸೆಟಲ್ ಆಗುವ ಆಲೋಚನೆಯಲ್ಲಿದ್ದ. ಕನಿಷ್ಠ ಆರು ತಿಂಗಳು ಕೂರ್ಗ್ನಲ್ಲಿರಲು ಸುಶಾಂತ್ ಬಯಸಿದ್ದ. ಹೀಗಾಗಿ, ಸದಾ ಅದರ ಬಗ್ಗೆಯೇ ಆತ ಯೋಚನೆ ಮಾಡುತ್ತಿದ್ದ ಎಂದು ರಿಯಾ ಹೇಳಿದ್ದಾಳೆ.
Published by:
Rajesh Duggumane
First published:
August 28, 2020, 11:25 AM IST