• Home
  • »
  • News
  • »
  • entertainment
  • »
  • Sushant Singh Death: ಸುಶಾಂತ್ ಸಿಂಗ್ ಅನಿರೀಕ್ಷಿತ ಸಾವಿಗೆ ಕಂಬನಿ ಮಿಡಿದ ಚಿತ್ರರಂಗ

Sushant Singh Death: ಸುಶಾಂತ್ ಸಿಂಗ್ ಅನಿರೀಕ್ಷಿತ ಸಾವಿಗೆ ಕಂಬನಿ ಮಿಡಿದ ಚಿತ್ರರಂಗ

ಸುಶಾಂತ್ ಸಿಂಗ್ ರಜಪೂತ್

ಸುಶಾಂತ್ ಸಿಂಗ್ ರಜಪೂತ್

Sushant Singh Movies: ಸುಶಾಂತ್ ಸಿಂಗ್ ರಜಪೂತ್ ಇದುವರೆಗೂ 11 ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಬೆಳಗ್ಗೆ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟನ ಈ ಅನಿರೀಕ್ಷಿತ ಸಾವು ಅಭಿಮಾನಿಗಳಿಗೆ ಮಾತ್ರವಲ್ಲದೆ ಬಾಲಿವುಡ್​ ಮಂದಿಗೂ ಆಘಾತ ಉಂಟುಮಾಡಿದೆ.

ಮುಂದೆ ಓದಿ ...
  • Share this:

ಕಿರುತೆರೆ ಮೂಲಕ ನಟನಾ ರಂಗಕ್ಕೆ ಬಂದ ಸುಶಾಂತ್ ಸಿಂಗ್ ರಜಪೂತ್ ಇದುವರೆಗೂ 11 ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಬೆಳಗ್ಗೆ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದಯೋನ್ಮುಖ ನಟನ ಈ ಅನಿರೀಕ್ಷಿತ ಸಾವು ಅಭಿಮಾನಿಗಳಿಗೆ ಮಾತ್ರವಲ್ಲದೆ ಬಾಲಿವುಡ್​ ಮಂದಿಗೂ ಆಘಾತ ಉಂಟುಮಾಡಿದೆ. ವಿಷಯ ಗೊತ್ತಾಗುತ್ತಿದ್ದಂತೆ ಬಾಲಿವುಡ್ ನಟರು, ನಿರ್ದೇಶಕರು, ನಟಿಯರು ಟ್ವಿಟ್ಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ.


ಬಾಲಿವುಡ್ ನಟ ರಿತೇಶ್ ದೇಶಮುಖ್ ಮೊದಲು ಸುಶಾಂತ್ ಸಿಂಗ್ ಸಾವಿನ ವಿಷಯವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದವರು. ಈ ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಜನರು ಈ ಶಾಕಿಂಗ್ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.



ಖ್ಯಾತ ನಟ ಸೋನು ಸೂದ್ ಕೂಟ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಸುಶಾಂತ್ ಸಿಂಗ್ ಸಾವಿನ ವಿಚಾರ ಕೇಳಿ ಭಾರೀ ಆಘಾತವಾಗಿದೆ. ಮಾತುಗಳೇ ಬರುತ್ತಿಲ್ಲ. ಈ ಸುದ್ದಿ ಸುಳ್ಳಾಗಿರಲಿ ಎಂದು ಈಗಲೂ ದೇವರ ಬಳಿ ಪ್ರಾರ್ಥಿಸುತ್ತಿದ್ದೇನೆ ಎಂದಿದ್ದಾರೆ.


ನೀವು ಖಿನ್ನತೆಗೆ ಒಳಗಾಗಿದ್ದರೆ, ಸಾಯಬೇಕು ಎಂಬ ಯೋಚನೆ ನಿಮ್ಮ ಮನಸಿನಲ್ಲಿ ಬಂದರೆ ದಯವಿಟ್ಟು ಈ ಆತ್ಮಹತ್ಯೆಯನ್ನು ತಡೆಯುವ ಸಹಾಯವಾಣಿಗೆ ಫೋನ್ ಮಾಡಿ. ದಯವಿಟ್ಟು ಯಾರೂ ಅವಸರದ ನಿರ್ಧಾರ ತೆಗದುಕೊಳ್ಳಬೇಡಿ ಎಂದು ಬಾಲಿವುಡ್ ನಟ ಅರ್ಜುನ್ ಕಪೂರ್ ಟ್ವೀಟ್ ಮಾಡಿದ್ದಾರೆ.


ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಟ್ವೀಟ್ ಮಾಡಿದ್ದು, ಸುಶಾಂತ್ ಸಾವಿನ ಸುದ್ದಿ ಕೇಳಿದಾಗಿನಿಂದ ಮಾತೇ ಬಾರದಷ್ಟು ಆಘಾತವಾಗಿದೆ. ಚಿಚ್ಚೋರ್ ಸಿನಿಮಾದಲ್ಲಿ ಸುಶಾಂತ್ ಸಿಂಗ್ ಅಭಿನಯವನ್ನು ನಾನು ನೋಡಿದ್ದೆ. ಆ ಸಿನಿಮಾ ನೋಡಿದ ನಂತರ ನನ್ನ ಸ್ನೇಹಿತ ಸಜೀದ್​ಗೆ ಫೋನ್ ಮಾಡಿ ಆ ಸಿನಿಮಾವನ್ನು ನಾನೆಷ್ಟು ಎಂಜಾಯ್ ಮಾದಿದೆ, ನಾನು ಕೂಡ ಸುಶಾಂತ್​ನಂತಹ ಟ್ಯಾಲೆಂಟೆಡ್ ನಟನ ಜೊತೆ ಅಭಿನಯಿಸಬೇಕಿತ್ತು ಎಂಬ ಆಸೆಯನ್ನು ಹೇಳಿಕೊಂಡಿದ್ದೆ. ಆತನ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ದೇವರು ಆತನ ಕುಟುಂಬಕ್ಕೆ ನೀಡಲಿ ಎಂದು ಹೇಳಿದ್ದಾರೆ.


ಬಾಲಿವುಡ ನಿರ್ದೇಶಕ ಕರಣ್ ಜೋಹರ್, ಸುಶಾಂತ್ ಜೊತೆಗೆ ನನ್ನ ಹತ್ತಾರು ಒಳ್ಳೆಯ ನೆನಪುಗಳಿವೆ. ಈ ಸುದ್ದಿಯನ್ನು ನನಗೆ ನಂಬಲಾಗುತ್ತಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಗೆಳೆಯ.. ಈ ಆಘಾತದ ನಡುವೆಯೂ ನಿನ್ನ ಜೊತೆಗಿದ್ದ ಒಳ್ಳೆಯ ನೆನಪುಗಳು ಸದಾ ನೆನಪಿನಲ್ಲಿ ಉಳಿಯುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.


ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಅತ ಚಿಕ್ಕ ವಯಸ್ಸಿನಲ್ಲಿ, ಯಶಸ್ಸು ಸಿಗುತ್ತಿದೆ ಎನ್ನುವಾಗಲೇ ಆತುರದ ನಿರ್ಧಾರ ತೆಗೆದುಕೊಂಡ ಸುಶಾಂತ್ ಸಿಂಗ್ ಸಾವಿನ ಸುದ್ದಿ ಕೇಳಿ ಬೇಸರವಾಯಿತು. ಆತ ಒಬ್ಬ ಒಳ್ಳೆಯ ಪ್ರತಿಭಾವಂತ ನಟ ಎಂದಿದ್ದಾರೆ.


ಬಾಲಿವುಡ್​ಗೆ ಒಂದರ ಹಿಂದೆ ಒಂದು ಆಘಾತ ಉಂಟಾಗುತ್ತಿದೆ. ಸುಶಾಂತ್ ಕುಟುಂಬಕ್ಕೆ ಈ ಸುದ್ದಿಯನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.


ಕನ್ನಡದ ನಟಿ ಐಂದ್ರಿತಾ ರೇ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಸುಶಾಂತ್​ ರೀತಿಯ ಪ್ರತಿಭಾವಂತ ನಟ ಇಷ್ಟು ಬೇಗ ಸಾವನ್ನಪ್ಪಿದ್ದಾರೆ ಎಂಬುದನ್ನು ನಂಬಲಾಗುತ್ತಿಲ್ಲ ಎಂದಿದ್ದಾರೆ.


ಸ್ಯಾಂಡಲ್​ವುಡ್ ನಿರ್ದೇಶಕ ಸಿಂಪಲ್ ಸುನಿ ಸುಶಾಂತ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿದ್ದು, 2020 ವರ್ಷವಲ್ಲ, ಇದೊಂದು ಸ್ಮಶಾನದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಬಾಲಿವುಡ್ ನಟಿ ಕಾಜಲ್ ಅಗರ್​ವಾಲ್ ಟ್ವೀಟ್ ಮಾಡಿದ್ದು, ಸುಶಾಂತ್ ಸಾವಿನ ಸುದ್ದಿ ಕೇಳಿದಾಗಿನಿಂದ ಮನಸು ಒದ್ದಾಡುತ್ತಿದೆ. ನನ್ನ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.


ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಸುಶಾಂತ್ ಸಾವಿನ ಸುದ್ದಿ ಬಹಳ ಆಘಾತ ಉಂಟುಮಾಡಿದೆ. ಪ್ರತಿಭಾವಂತ, ಉದಯೋನ್ಮುಖ ನಟ ಇಷ್ಟು ಬೇಗ ಹೋಗಬಾರದಿತ್ತು ಎಂದಿದ್ದಾರೆ.


Published by:Sushma Chakre
First published: