ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಸಾವಿನ ನಂತರ ಜನಮನದಿಂದ ದೂರವೇ ಉಳಿದಿದ್ದ ನಟಿ ರಿಯಾ ಚಕ್ರವರ್ತಿ ಮತ್ತೆ ಕಿರುತೆರೆಗೆ ವಾಪಸ್ ಬರುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು, ಜನಪ್ರಿಯ ರಿಯಾಲಿಟಿ ಶೋ (Reality Show) ಎಂಟಿವಿ ರೋಡೀಸ್ ಸೀಸನ್ 19 ರಲ್ಲಿ ರಿಯಾ ಚಕ್ರವರ್ತಿ ಗ್ಯಾಂಗ್ ಲೀಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ರಿಯಾಲಿಟಿ ಶೋನ ಆಡಿಷನ್ ವಿವರಗಳನ್ನು ಪ್ರಕಟಿಸುವ ವಿಡಿಯೋವನ್ನು ರಿಯಾ ಪೋಸ್ಟ್ ಮಾಡಿದ್ದಾರೆ.
ನಾನು ವಾಪಸ್ ಬರುವುದಿಲ್ಲ ಎಂದುಕೊಂಡಿದ್ರಾ?
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ರಿಯಾ ಹಗ್ಗದಿಂದ ಕೆಳಗಿಳಿದು, (“ಆಪ್ಕೋ ಕ್ಯಾ ಲಗಾ, ಮೈ ವಾಪಾಸ್ ನಹೀಂ ಆವುಂಗಿ?") ನಾನು ಹಿಂತಿರುಗುವುದಿಲ್ಲ ಎಂದು ನೀವು ಭಾವಿಸಿದ್ದೀರಾ?) ಹೇಳುತ್ತಿರುವುದನ್ನು ನೋಡಬಹುದು. ಅಲ್ದೇ (ಡರ್ನೆ ಕಿ ಬಾರಿ ಕಿಸಿ ಔರ್ ಕಿ ಹೈ) ಈಗ ಭಯ ಪಡುವ ಸಮಯ ಬೇರೆಯವರದ್ದು ಎಂಬುದಾಗಿ ಹೇಳುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಅವರು ಈ ಸುದ್ದಿಯನ್ನು ಹಂಚಿಕೊಂಡ ಕೂಡಲೇ, ನಟ ಅಪರಶಕ್ತಿ ಖುರಾನಾ ಮತ್ತು ರಿಯಾಲಿಟಿ ಟಿವಿ ಪರ್ಸನಾಲಿಟಿ ಮತ್ತು ಫ್ಯಾಷನ್ ಡಿಸೈನರ್ ಸೀಮಾ ಸಜ್ದೇಹ್ ಅವರಂತಹ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಲುಂಗಿ ಡ್ಯಾನ್ಸ್ ಸಾಂಗ್ ಶಾರುಖ್ಗೆ ಇಷ್ಟವಾಗಿರಲಿಲ್ವಂತೆ; ಆದರೂ ಸೂಪರ್ ಹಿಟ್ ಹೇಗಾಯ್ತು?
ಇನ್ನು ರಿಯಾ ಬಗ್ಗೆ ಪ್ರೇಕ್ಷಕರು ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ಥರದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ “ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಲು ರಿಯಾ ಅವರಿಗಿಂತ ಉತ್ತಮರು ಯಾರು? ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ "ಅರ್ಹವಾದ ಗ್ಯಾಂಗ್ ಲೀಡರ್ ಅಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ ರೋಡೀಸ್‌ನ ಇತ್ತೀಚಿನ ಸೀಸನ್‌ನಲ್ಲಿ ರಿಯಾ ಪ್ರಿನ್ಸ್ ನರುಲಾ ಮತ್ತು ಗೌತಮ್ ಗುಲಾಟಿ ಅವರನ್ನು ಗ್ಯಾಂಗ್ ಲೀಡರ್‌ಗಳಾಗಿ ಸೇರಿಕೊಳ್ಳಲಿದ್ದಾರೆ. ನಟ ಸೋನು ಸೂದ್ ಕಾರ್ಯಕ್ರಮದ ನಿರೂಪಕರಾಗಿ ಮರಳಲಿದ್ದಾರೆ ಎಂದು ಹೇಳಲಾಗಿದೆ.
ರೋಡೀಸ್‌ನಲ್ಲಿ ಭಾಗವಹಿಸಲು ಉತ್ಸುಕಳಾಗಿದ್ದೇನೆ ಎಂದ ರಿಯಾ!
ಎಂಟಿವಿ ರೋಡೀಸ್ ಸೀಸನ್ 19 ರ ಭಾಗವಾಗಿರುವ ಕುರಿತು ರಿಯಾ ಚಕ್ರವರ್ತಿ, “ನಾನು ಎಂಟಿವಿ ರೋಡೀಸ್ ಸೀಸನ್ 19 ರ ಭಾಗವಾಗಲು ರೋಮಾಂಚನಗೊಂಡಿದ್ದೇನೆ.
View this post on Instagram
ಅಂದಹಾಗೆ ರಿಯಾ ಕಿರುತೆರೆಯೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. MTV ಇಂಡಿಯಾದ TVS ಸ್ಕೂಟಿ ಟೀನ್ ದಿವಾದಲ್ಲಿ ನಟಿಸಿದ್ದರು ಮತ್ತು ಮೊದಲ ರನ್ನರ್ ಅಪ್ ಆಗಿದ್ದರು. ನಂತರ, ಅವರು ಪೆಪ್ಸಿ MTV ವಾಸಪ್, ಟಿಕ್‌ಟಾಕ್ ಕಾಲೇಜ್ ಬೀಟ್ ಮತ್ತು MTV ಗಾನ್ ಇನ್ 60 ಸೆಕೆಂಡ್ಸ್‌ನಂತಹ MTV ಶೋಗಳಿಗೆ ನಿರೂಪಕರಾದರು.
2012 ರಲ್ಲಿ, ಅವರು ತೆಲುಗು ಚಿತ್ರ ತೂನೀಗಾ ತೂನೀಗಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ನಂತರ ಮೇರೆ ಡ್ಯಾಡ್ ಕಿ ಮಾರುತಿ ಮೂಲಕ ಬಾಲಿವುಡ್ ಪ್ರವೇಶಿಸಿದರು. ನಂತರ 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಹೆಚ್ಚು ಸುದ್ದಿಗೊಳಗಾಗಿದ್ದರು. ಸುಶಾಂತ್ ಸಿಂಗ್ ಗೆಳತಿಯಾಗಿದ್ದ ರಿಯಾ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿ ವಿಚಾರಣೆ ನಡೆಸಿತ್ತು.
ಸದ್ಯ ವರದಿಗಳ ಪ್ರಕಾರ ಸೀಮಾ ಸಜ್ದೇಹ್ ಅವರ ಸಹೋದರ ಬಂಟಿ ಸಜ್ದೇಹ್ ಜೊತೆ ರಿಯಾ ಚಕ್ರವರ್ತಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ