ಸುಶಾಂತ್ ಸಿಂಗ್ ರಜಪೂತ್ ಅಗಲಿ ಒಂದು ವರ್ಷ ವಾಗುತ್ತಿದೆ. ಜೂನ್ 14, 2020 ರಂದು ಮುಂಬೈನಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ನೆಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಅವರ ದೇಹ ಪತ್ತೆಯಾಗಿತ್ತು. ನಟನ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಮೂಡಿತ್ತು. ಮೊದಲಿಗೆ ಸುಶಾಂತ್ ಅವರದ್ದು ಆತ್ಮಹತ್ಯೆ ಎನ್ನಲಾಗಿತ್ತು. ನಂತರ ಕೊಲೆ ಎಂಬ ಸಂಶಯ ಮೂಡಿತ್ತು. ಇದೆಲ್ಲದರ ನಡುವೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ಇನ್ನೂ ಆ ನೋವಿನಿಂದ ಹೊರ ಬಂದಿಲ್ಲ. ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಆಗಾಗ ತಮ್ಮನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ಈಗಲೂ ಸಹ ಶ್ವೇತಾ ಸಿಂಗ್ ಒಂದು ಪೋಸ್ಟ್ ಮಾಡಿದ್ದಾರೆ.
ಶ್ವೇತಾ ತಮ್ಮ ಸಹೋದರ ಸುಶಾಂತ್ ಅವರ ಒಂದು ವರ್ಷದ ಸ್ಮರಣೆಯನ್ನು ಏಕಾಂತದಲ್ಲಿ ಕಳೆಯಲು ನಿರ್ಧರಿಸಿದ್ದಾರೆ. ಜೂನ್ ತಿಂಗಳಲ್ಲಿ ಏಕಾಂಗಿಯಾಗಿ ಕಳೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ವಿಷಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿರುವ ಶ್ವೇತಾ ತಮ್ಮ ಸಹೋದರನ ನೆನಪುಗಳನ್ನು ಪರ್ವತದಲ್ಲಿ ಏಕಾಂತದಲ್ಲಿ ಮೆಲುಕು ಹಾಕುವ ನಿರ್ಧಾರಕ್ಕೆ ಬಂದಿದ್ದಾರಂತೆ.
'ನಾನು ಜೂನ್ ತಿಂಗಳಿನಲ್ಲಿ ಏಕಾಂತಕ್ಕಾಗಿ ಪರ್ವತಗಳಲ್ಲಿ ಹೋಗುತ್ತಿದ್ದೇನೆ. ಅಲ್ಲಿ ನನಗೆ ಇಂಟರ್ನೆಟ್ ಅಥವಾ ಮೊಬೈಲ್ ಸೇವೆಗಳಿಗೆ ಅವಕಾಶವಿರುವುದಿಲ್ಲ. ಸಹೋದರನ ಒಂದು ವರ್ಷದ ಸ್ಮರಣೆಯನ್ನು, ಅವನೊಟ್ಟಿಗೆ ಕಳೆದ ಕ್ಷಣಗಳನ್ನು ಪರ್ವತದಲ್ಲಿ ಮೌನವಾಗಿ ಮೆಲುಕು ಹಾಕುವುದರೊಂದಿಗೆ ಕಳೆಯುತ್ತೇನೆ' ಎಂದಿದ್ದಾರೆ.
View this post on Instagram
ಅವರ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಹರಿಸಿದ್ದಾರೆ. ಒಬ್ಬ ಅಭಿಮಾನಿ , ದೀದಿ, ನಿಮ್ಮ ಬಗ್ಗೆ ಕಾಳಜಿ ವಹಿಸಿ. ನಾವೆಲ್ಲರೂ ನಿಮ್ಮ ಮತ್ತು ನಿಮ್ಮ ಕುಟುಂಬದ ಜೊತೆಗಿದ್ದೇವೆ. ನಾವೆಲ್ಲರೂ ಕೊನೆಯವರೆಗೂ ಸುಶಾಂತ್‌ಗಾಗಿ ಹೋರಾಡುತ್ತೇವೆ ಮತ್ತು ಅವರಿಗೆ ನ್ಯಾಯ ದೊರಕುತ್ತದೆ ಎಂದು ನಂಬಿಕೆ ಇದೆ. ಹರ ಹರ ಮಹಾದೇವ್ ಎಂದಿದ್ದಾರೆ.
ಇದನ್ನೂ ಓದಿ: ತಮ್ಮೊಂದಿಗೆ ಕಾರಲ್ಲೇ ಕುಳಿತ್ತಿದ್ದ ನಟ ಅಶ್ವತ್ಥ್ಗೆ ಗದರಿಸಿದ್ದ ಅಂಬರೀಷ್: ದಾರಿ ಮಧ್ಯೆ ಇಳಿದು ಬಸ್ ಏರಿದ್ದ ಹಿರಿಯ ನಟ..!
ಇನ್ನೊಬ್ಬರು ನಾನು ಅವರನ್ನು ನಿಜವಾಗಿಯೂ ಅವರು ಇದ್ದರು ಎಂದು ಹೇಳುವುದಿಲ್ಲ.. ಅವರು ನನಗೆ ಈಗಲೂ ಇದ್ದಾರೆ. ಭವಿಷ್ಯದಲ್ಲಿ ಅವರು ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ನನಗಿದೆ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.
ನಮ್ಮ ಸೂಪರ್ಸ್ಟಾರ್ ಅನ್ನು ನೆನಪಿಟ್ಟುಕೊಳ್ಳಲು ಮತ್ತು ಅವರ ನೆನಪುಗಳನ್ನು ಸಂಭ್ರಮಿಸಲು ಅತ್ಯುತ್ತಮ ಮಾರ್ಗ. ಎಸ್ಎಸ್ಆರ್ ಒಂದು ಭಾವನೆ" ಎಂದು ಮೂರನೆಯವರು ಹೇಳಿದ್ದಾರೆ. "ಶ್ವೇತಾ ಸಿಂಗ್ ಕೀರ್ತಿ, ನಿಮಗೆ ಹೆಚ್ಚಿನ ಶಕ್ತಿ ಮತ್ತು ಪ್ರೀತಿ ಕಳಿಸುತ್ತಿದ್ದೇವೆ .. ನಷ್ಟವನ್ನು ಸರಿದೂಗಿಸಲು ಯಾವುದರಿಂದಲೂ ಸಾಧ್ಯವಿಲ್ಲ, ಆದರೂ ಇಲ್ಲಿ ನಿಮ್ಮ ಮಾತುಗಳು ನಿಮ್ಮ ಶಕ್ತಿಯನ್ನು ಪ್ರದರ್ಶಿಸುತ್ತವೆ ಮತ್ತು ಸುಶಾಂತ್ ಅವರ ನಂಬಿಕೆಗಳು ಮತ್ತು ಪ್ರಾಮಾಣಿಕತೆಯ ಪರಂಪರೆಯನ್ನು ಧ್ವನಿಸುತ್ತವೆ. ಅವರನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
View this post on Instagram
ಸುಶಾಂತ್ ಗೆಳತಿ ನಟಿ ರಿಯಾ ಚಕ್ರವರ್ತಿ ಇದು ಆತ್ಮಹತ್ಯೆ ಎಂದಿದ್ದರು. ಸುಶಾಂತ್ ಕುಟುಂಬ ನಿರಾಕರಿಸಿತ್ತು. ಈ ಪ್ರಕರಣವನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ), ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ತನಿಖೆ ನಡೆಸುತ್ತಿವೆ.
ಇದನ್ನೂ ಓದಿ: ಕಾಲೇಜಿನಲ್ಲಿ ಆರತಿಯನ್ನ ಚುಡಾಯಿಸುತ್ತಿದ್ದ ಅಂಬಿ: ನಾಗರಹಾವು ಚಿತ್ರದಲ್ಲಿ ಅದೇ ದೃಶ್ಯಕ್ಕೆ ಸಾಕ್ಷಿಯಾದರು
ಸುಶಾಂತ್ ಅವರ 2019 ರ ಚಲನಚಿತ್ರ ಚಿಚ್ಚೋರೆ ಇತ್ತೀಚೆಗೆ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ (ಹಿಂದಿ) ಪ್ರಶಸ್ತಿಗೆ ಪಾತ್ರವಾಯಿತು. ಚಿತ್ರದ ನಿರ್ಮಾಪಕ ಸಾಜಿದ್ ನಾಡಿಯಾದ್ವಾಲ ಪ್ರಶಸ್ತಿಯನ್ನು ಸುಶಾಂತ್ಗೆ ಸಮರ್ಪಿಸಿದ್ದರು.
ಕಿಸ್ ದೇಶ್ ಮೇ ಹೈ ಮೇರಾ ದಿಲ್ ಧಾರಾವಾಹಿಯಲ್ಲಿ ಸುಶಾಂತ್ ಕಿರುತೆರೆಗೆ ಪಾದರ್ಪಣೆ ಮಾಡಿದ್ದರು. ಅದರ ನಂತರ ಅವರು ಪವಿತ್ರ ರಿಷ್ತ್ತಾದಲ್ಲಿ ಕಾಣಿಸಿಕೊಂಡರು. ಕೈ ಪೋ ಚೆ ಚಿತ್ರದಲ್ಲಿ ಬಾಲಿವುಡ್‌ಗೆ ಬಂದರು. ಶುದ್ಧ ದೇಸಿ ರೋಮ್ಯಾನ್ಸ್, ಎಂ.ಎಸ್. ಧೋನಿ: ದಿ ಅನ್ ಟೋಲ್ಡ್ ಸ್ಟೋರಿ, ಡಿಟೆಕ್ಟಿವ್ ಬ್ಯೂಮ್ಕೇಶ್ ಬಕ್ಷಿ ! ಮತ್ತು ರಾಬ್ತಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ದಿಲ್ ಬೆಚರಾ ಕಡೆ ಚಿತ್ರವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ