Sushant Singh Rajput ನೆನದು 'ಸತ್ಯ ಹೊರಬರಲಿ' ಎಂದ ಸಹೋದರಿ - ಕ್ಷಣಾರ್ಧದಲ್ಲಿ ಪೋಸ್ಟ್ ವೈರಲ್

Sushant Singh Rajput: ಬಾಲಿವುಡ್​ನ ಪ್ರತಿಭಾನ್ವಿತ ನಟ ಸುಶಾಂತ್​ ಸಿಂಗ್​ ಮುಂಬೈನಲ್ಲಿರುವ ಅವರ ಅಪಾರ್ಟ್​ಮೆಂಟ್​ನಲ್ಲಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್​ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳಿಗೂ ನಟನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಮೊದಲಿಗೆ ಸುಶಾಂತ್ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗಿತ್ತು.

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್

  • Share this:
ಬಾಲಿವುಡ್​ (Bollywood)ನಟ ಸುಶಾಂತ್ ಸಿಂಗ್ (Sushanth Singh Rajput)ರಜಪೂತ್ ಕಳೆದ ವರ್ಷ ನಿಧನರಾಗಿದ್ದರು.  ಆದರೆ ಅವರ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅವರ ಸಹೋದರಿ ಶ್ವೇತಾ ಸಿಂಗ್ ಕೃತಿ(Shwetha Singh Kriti) ಯಾವಾಗಲೂ ಅವರನ್ನು ನೆನಪಿಸಿಕೊಂಡು ಅವರ ಥ್ರೋಬ್ಯಾಕ್ ಚಿತ್ರಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಇಂದು, ಅವರು ತನ್ನ ಸಾಮಾಜಿಕ ಜಾಲಾತಾಣದಲ್ಲಿ ನಟನ ಹಳೆಯ ಚಿತ್ರವನ್ನು ಒಂದು ಪೋಸ್ಟ್‌ನೊಂದಿಗೆ ಹಂಚಿಕೊಂಡಿದ್ದು, ತನ್ನ ಪೋಸ್ಟ್‌ನಲ್ಲಿ 'ಸತ್ಯ ಹೊರಬರಲಿ' ಎಂದು  ಬರೆದುಕೊಂಡಿರುವ ಅವರು ತನ್ನ ಸಹೋದರನಿಗಾಗಿ ಪ್ರಾರ್ಥಿಸಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಅವರ ನಿಧನದ ನಂತರ, ಸುಶಾಂತ್ ಸಹೋದರಿಯರು ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 

ನೀವು ಯಾವಾಗಲೂ ನಮ್ಮ ಹೆಮ್ಮೆ. ನೀವು ಪ್ರತಿ ಹೃದಯದಲ್ಲಿ ಎಷ್ಟು ಪ್ರೀತಿಯನ್ನು ಮೂಡಿಸಿದ್ದೀರಿ ನೋಡಿ. ಅವರು ನಿಮಗಾಗಿ ಪಟ್ಟುಬಿಡದೆ ಹೋರಾಡುತ್ತಿದ್ದಾರೆ. ನಾನು ದುರ್ಗಾಮಾತೆಯನ್ನು ಪ್ರಾರ್ಥಿಸುತ್ತೇನೆ. ತಾಯಿ ದಯವಿಟ್ಟು ಸತ್ಯ ಹೊರಬರಲಿ, ದಯವಿಟ್ಟು ನಮ್ಮ ಹೃದಯಗಳು ಸ್ವಲ್ಪ ಶಾಂತಿಯನ್ನು ಕಂಡುಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ.  ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
ಅವರ ಅನೇಕ ಅಭಿಮಾನಿಗಳು ಕಾಮೆಂಟ್‌ಗಳು ಮತ್ತು ಹೃದಯದ ಎಮೋಜಿಗಳನ್ನು ಹಾಕಿದ್ದಾರೆ. ಬಳಕೆದಾರರಲ್ಲಿ ಒಬ್ಬರು ಬರೆದಿದ್ದಾರೆ, "ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ." ಇನ್ನೊಬ್ಬರು  "ಅವರ ಸ್ಮೈಲ್ ನಮ್ಮ ಶಕ್ತಿ" ಎಂದು ಬರೆದಿದ್ದಾರೆ.

ಇದನ್ನೂ ಓದಿ: ಚಿತ್ರತಂಡದ ಸದಸ್ಯರಿಗೆ ಕೊರೊನಾ ಸೋಂಕು ದೃಢ ಹಿನ್ನೆಲೆ- Akshay Kumar- Yami Gautam ಅಭಿನಯದ OMG 2 ಚಿತ್ರದ ಚಿತ್ರೀಕರಣ ಸ್ಥಗಿತ

ಹೆಚ್ಚು ಸದ್ದು ಮಾಡಿದ್ದ ಸುಶಾಂತ್ ಸಾವು

ಬಾಲಿವುಡ್​ನ ಪ್ರತಿಭಾನ್ವಿತ ನಟ ಸುಶಾಂತ್​ ಸಿಂಗ್​ ಮುಂಬೈನಲ್ಲಿರುವ ಅವರ ಅಪಾರ್ಟ್​ಮೆಂಟ್​ನಲ್ಲಿ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್​ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳಿಗೂ ನಟನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಮೊದಲಿಗೆ ಸುಶಾಂತ್ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ ಸುಶಾಂತ್ ಸಾವಿನ ಸುತ್ತ ಘಟಿಸಿದ ಘಟನೆಗಳು ಹಾಗೂ ಹುಟ್ಟಿಕೊಂಡ ಕೆಲವು ಅನುಮಾನಗಳಿಂದ ಅದನ್ನು ಕೊಲೆ ಎಂದು ಹೇಳಾಗುತ್ತಿತ್ತು.

ಸುಶಾಂತ್ ಸಾವನ್ನಪ್ಪಿ ಒಂದು ಕಳೆದರೂ ಇನ್ನೂ ನಟನ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂದು ಸ್ಪಷ್ಟವಾಗಿಲ್ಲ. ಸದ್ಯ ಸಿಬಿಐ ಸುಶಾಂತ್​ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದೆ. ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಕೊಲೆ ಎಂದು ಸುಶಾಂತ್ ಸಿಂಗ್​ ಅವರ ತಂದೆ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು.  

ಸುಶಾಂತ್ ಸಾವಿಗೆ ಕಾರಣ ಬಾಲಿವುಡ್​ನಲ್ಲಿರುವ ನೆಪೋಟಿಸಂ ಕಾರಣ ಎಂದು ಹೇಳಲಾಗುತ್ತಿದ್ದು, ನಟನ ಅಗಲಿಕೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ದೊಡ್ಡ ಅಭಿಯಾನವೇ ನಡೆದಿತ್ತು. ಸ್ಟಾರ್​ ಕಿಡ್ಸ್ ಹಾಗೂ ನೆಪೋಟಿಸಂ ಮಾಡುವ ಆರೋಪ ಎದುರಿಸುತ್ತಿರುವ ಕರಣ್ ಜೋಹರ್​ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದ್ದರು. ಸುಶಾಂತ್ ಸಾವನ್ನಪ್ಪಿದ್ದ ನಂತರ ಬಾಯ್ಕಾಟ್​ ಸ್ಟಾರ್ ಕಿಡ್ಸ್​ ಹಾಗೂ ಕರಣ್​ ಜೋಹರ್​ ವಿರುದ್ಧ ಸಾಕಷ್ಟು ಪೋಸ್ಟ್​ಗಳನ್ನು ಮಾಡಲಾಗಿತ್ತು.

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟನ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಪ್ರಕರಣ ದಾಖಲಿಸಿದ್ದರು. ಪಾಟ್ನಾದಲ್ಲಿ ನಟ ಸುಶಾಂತ್ ಅವರ ತಂದೆ ನೀಡಿರುವ ದೂರನ್ನು ಆಧರಿಸಿ ನಟಿ ರಿಯಾ ಚಕ್ರವರ್ತಿ ವಿರುದ್ಧ 306 (ಆತ್ಮಹತ್ಯೆಗೆ ಪ್ರಚೋದನೆ), 341 (ತಪ್ಪಾದ ಸಂಯಮಕ್ಕಾಗಿ ಶಿಕ್ಷೆ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ), 380 (ವಾಸಿಸುವ ಮನೆಯಲ್ಲೇ ಕಳ್ಳತನ), 406 (ವಿಶ್ವಾಸಾರ್ಹ ಉಲ್ಲಂಘನೆ) ಮತ್ತು 420 (ಮೋಸ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿತ್ತು.

ಇದನ್ನೂ ಓದಿ: ಮದುವೆಗೆ ಮುನ್ನವೇ Divorce ಯಾವಾಗ ಎಂದು ಪ್ರಶ್ನಿಸಿದ ನೆಟ್ಟಿಗನಿಗೆ ಛೀಮಾರಿ ಹಾಕಿದ ನಟಿ ರಿಚಾ ಚಡ್ಡಾ

ಸುಶಾಂತ್‌ ಸಾವಿಗೆ ನಟಿ ರಿಯಾ ಚಕ್ರವರ್ತಿ ಅವರೇ ಕಾರಣ ಎಂದು ಆರೋಪಿಸಿದ್ದ ಅವರ ತಂದೆ ಕೆ.ಕೆ. ಸಿಂಗ್ ಕಳೆದ ವರ್ಷ ಜುಲೈ 28 ರಂದು ಪಾಟ್ನಾದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದರು. ಈ ದೂರಿನಲ್ಲಿ ನಟಿ ರಿಯಾ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ, ಕ್ರಿಮಿನಲ್ ಪಿತೂರಿ ಮತ್ತು ವಂಚನೆಗೆ ಸಂಬಂಧಿಸಿದಂತೆ ಆರೋಪಿಸಿದ್ದರು. ಅಲ್ಲದೆ, ಅಲ್ಪಾವಧಿಯಲ್ಲಿಯೇ ರಿಯಾ ಅವರು ಸುಶಾಂತ್ ಅವರ ಖಾತೆಯಿಂದ 15 ಕೋಟಿ ರೂಪಾಯಿಗಳನ್ನು ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
Published by:Sandhya M
First published: