• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಚಿಚೋರೆ ಚಿತ್ರದಲ್ಲಿ ಸುಶಾಂತ್ ಸಿಂಗ್ ಮಗನಾಗಿ ನಟಿಸಿದ್ದ ಸಮದ್ ನಟನ ಸಾವಿನ ಬಳಿಕ ಏನಂದ್ರು ಗೊತ್ತಾ?

ಚಿಚೋರೆ ಚಿತ್ರದಲ್ಲಿ ಸುಶಾಂತ್ ಸಿಂಗ್ ಮಗನಾಗಿ ನಟಿಸಿದ್ದ ಸಮದ್ ನಟನ ಸಾವಿನ ಬಳಿಕ ಏನಂದ್ರು ಗೊತ್ತಾ?

Sushant singh-Mohammad Samad

Sushant singh-Mohammad Samad

ಸುಶಾಂತ್ ಬಗ್ಗೆ ಸಮದ್ ಏನು ಹೇಳಿದ್ದಾರೆ ಅಂತ ನೀವು ಕೇಳಿದರೆ, ಸುಶಾಂತ್ ಬಗ್ಗೆ ನಿಮಗಿರುವ ಗೌರವ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. ಸುಮದ್ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಮತ್ತು ಸುಶಾಂತ್ ‘ಚಿಚೋರೆ’ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಕಳೆದಂತಹ ಕೆಲವು ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರು ಅನೇಕ ಜನರಿಗೆ ಪ್ರೀತಿಯ ಸಹನಟ ಮತ್ತು ಒಳ್ಳೆಯ ಸ್ನೇಹಿತರಾಗಿದ್ದು, ಅವರ ನೆನಪಿನಲ್ಲಿ ಸುಶಾಂತ್ ಇನ್ನೂ ಜೀವಂತವಾಗಿದ್ದಾರೆ ಎಂದು ಹೇಳಬಹುದು. ಅಂತಹ ಒಬ್ಬ ಸಹನಟ, ಎಂದರೆ ನೀವು ಸುಶಾಂತ್ ಅಭಿನಯದ ಮತ್ತು ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬಂದಂತಹ ‘ಚಿಚೋರೆ’ ಚಿತ್ರ ನೋಡಿದ್ದರೆ, ಆ ಚಿತ್ರದಲ್ಲಿ ಸುಶಾಂತ್ ಮಗನಾಗಿ ತುಂಬಾ ಚೆನ್ನಾಗಿ ನಟಿಸಿದ್ದ ಹುಡುಗನ ಪಾತ್ರದ ಬಗ್ಗೆ ನಿಮಗೆ ಇನ್ನೂ ನೆನಪಿನಲ್ಲಿ ಉಳಿದಿರುತ್ತದೆ.‘ಚಿಚೋರೆ’ ಚಿತ್ರದಲ್ಲಿ ಸುಶಾಂತ್ ಮಗನ ಪಾತ್ರದಲ್ಲಿ ನಟಿಸಿದ್ದವರು ಮೊಹಮ್ಮದ್ ಸಮದ್. ಚಿತ್ರದಲ್ಲಿ ತನ್ನ ತಂದೆಯಾಗಿ ನಟಿಸಿದ್ದಂತಹ ದಿವಂಗತ ನಟ ಸುಶಾಂತ್‌ರನ್ನು ಸಮದ್‌ ನೆನಪು ಮಾಡಿಕೊಂಡಿದ್ದು, ಅವರ ಬಗ್ಗೆ ಮಾತನಾಡಿದ್ದಾರೆ.


ಸುಶಾಂತ್ ಬಗ್ಗೆ ಸಮದ್ ಏನು ಹೇಳಿದ್ದಾರೆ ಅಂತ ನೀವು ಕೇಳಿದರೆ, ಸುಶಾಂತ್ ಬಗ್ಗೆ ನಿಮಗಿರುವ ಗೌರವ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. ಸುಮದ್ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಾವು ಮತ್ತು ಸುಶಾಂತ್ ‘ಚಿಚೋರೆ’ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಕಳೆದಂತಹ ಕೆಲವು ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.


"ನನಗೆ ಅದು ಒಂದು ಸುಂದರವಾದ ಅನುಭವ ಎಂದರೆ ಸುಳ್ಳಲ್ಲ. ಸುಶಾಂತ್ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಸೆಟ್‌ಗಳಲ್ಲಿ ತನ್ನ ಸಮಸ್ಯೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು ಮತ್ತು ನಮ್ಮ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡು ಪರಿಹರಿಸುತ್ತಿದ್ದರು. ಅವರು ನನ್ನನ್ನು ಅನೇಕ ಬಾರಿ ಅವರ ಮನೆಗೆ ಪಾರ್ಟಿಗಳಿಗೆ ಕರೆದುಕೊಂಡು ಹೋಗಿದ್ದಾರೆ. ನನ್ನನ್ನು ನಿಜವಾಗಿಯೂ ಒಬ್ಬ ಮಗನಂತೆ ನೋಡಿಕೊಳ್ಳುತ್ತಿದ್ದರು” ಎಂದು ಸಮದ್ ಹೇಳಿದ್ದಾರೆ.


'ಚಿಚೋರೆ' ಚಿತ್ರದಲ್ಲಿ ಆಸ್ಪತ್ರೆಯ ಐಸಿಯು ದೃಶ್ಯದಲ್ಲಿ, ನನ್ನ ಒಂದು ಕಣ್ಣು ಮುಚ್ಚಲಾಗಿತ್ತು ಮತ್ತು ನನ್ನ ದೇಹದ ಮೇಲೆ ಅನೇಕ ಪೈಪ್‌ಗಳನ್ನು ಅಂಟಿಸಲಾಗಿತ್ತು, ಹಾಗಾಗಿ ಅವರು ನನಗೆ ಏನು ತೊಂದರೆ ಆಗುತ್ತಿಲ್ಲವಲ್ಲ ಎಂದು ಪದೇ ಪದೇ ಕೇಳಿ ಖಚಿತಪಡಿಸಿಕೊಳ್ಳುತ್ತಿದ್ದರು ಮತ್ತು ನನ್ನ ಬಗ್ಗೆ ತುಂಬಾ ಕಾಳಜಿ ಮಾಡುತ್ತಿದ್ದರು. ನಾನು ಅವರನ್ನು ನಿಜವಾಗಿಯೂ ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.


‘ಚಿಚೋರೆ’ ಚಿತ್ರದಲ್ಲಿ ನಟಿಸುವುದಕ್ಕಾಗಿ ನಾನು ಅನೇಕ ಬೇರೆ ಬೇರೆಯ ಕೆಲಸಗಳನ್ನು ತಿರಸ್ಕರಿಸಿದ್ದೆ ಎಂದು ಸಮದ್ ಹೇಳಿಕೊಂಡಿದ್ದಾರೆ. ಈ ಚಿತ್ರದ ಕಥೆಯು ನನಗೆ ಇಷ್ಟವಾಯಿತು ಮತ್ತು ನಾನು 'ಭೂತನಾಥ ರಿಟರ್ನ್ಸ್'ಗಾಗಿ ನಡೆದ ಆಡಿಷನ್ ನಲ್ಲಿ ಆಯ್ಕೆಯಾದ ಮೊದಲ ಐದು ಮಕ್ಕಳಲ್ಲಿ ನಾನೂ ಒಬ್ಬನಾಗಿದ್ದೆ. ನನಗೆ ಧಾರಾವಿ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಹಾಗಾಗಿ ನಾನು ಅದನ್ನು ಮಾಡಲಾಗಲಿಲ್ಲ ಎಂದು ಸಮದ್ ತಮ್ಮ ನೆನಪುಗಳನ್ನು ಹಂಚಿಕೊಂಡರು.


‘ಚಿಚೋರೆ’ ಚಿತ್ರವು ಬಿಡುಗಡೆಯಾದ 9 ತಿಂಗಳ ನಂತರ ಸುಶಾಂತ್ ಜೂನ್ 14, 2020 ರಂದು ತಾವು ವಾಸಮಾಡುತ್ತಿರುವಂತಹ ಮನೆಯಲ್ಲಿ ನಿಧನರಾಗಿದ್ದು ಅವರ ಅಭಿಮಾನಿಗಳಿಗೆ ತುಂಬಾ ನೋವಿನ ಸಂಗತಿಯಾಗಿತ್ತು.


‘ಚಿಚೋರೆ’ ಚಿತ್ರವನ್ನು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹಿಂದಿ ಚಿತ್ರವೆಂದು ಆಯ್ಕೆ ಮಾಡಿದ್ದರು.First published: