ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ವಾಸವಿದ್ದ ಮನೆಗೆ ಕೊನೆಗೂ ಬಾಡಿಗೆದಾರರು ಸಿಕ್ಕಿದ್ದಾರೆ. 2020 ರಲ್ಲಿ ನಟ ಆತ್ಮಹತ್ಯೆ ಮಾಡಿಕೊಂಡ ನಂತರ ಸುಮಾರು ಮೂರು ವರ್ಷಗಳ ನಂತರ ಅವರು ಇದ್ದಂತಹ ಫ್ಲ್ಯಾಟ್ಗೆ (Flat) ಬಾಡಿಗೆದಾರರು ಸಿಕ್ಕಿದ್ದಾರೆ. ಮುಂಬೈನಲ್ಲಿ (Mumbai) ಜನಪ್ರಿಯ ಇನ್ಸ್ಟಾಗ್ರಾಮ್ ಪೇಜ್ ನಡೆಸುತ್ತಿರುವ ರಿಯಲ್ ಎಸ್ಟೇಟ್ (Real-estate) ಬ್ರೋಕರ್ ರಫೀಕ್ ಮರ್ಚಂಟ್ ಅವರು ಕೆಲವು ತಿಂಗಳ ಹಿಂದೆ ಫ್ಲಾಟ್ನ ಮಾಲೀಕರು (Owners) ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಿದ್ದರು. NRI ಮಾಲೀಕರಾಗಿರುವ ಓನರ್ ಹೊಸ ಬಾಡಿಗೆದಾರರನ್ನು ಕಂಡುಕೊಂಡಿದ್ದಾರೆ. ಶೀಘ್ರದಲ್ಲೇ, ಫ್ಲ್ಯಾಟ್ ಬಾಡಿಗೆಗೆ ನೀಡಲಾಗುವುದು. ಜೂನ್ 14, 2020 ರಂದು ಎರಡು ಅಂತಸ್ತಿನ ಫ್ಲ್ಯಾಟ್ನಲ್ಲಿ ಸುಶಾಂತ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಫ್ಲ್ಯಾಟ್ ಖಾಲಿಯಾಗಿರುವುದರಿಂದ ಆಸಕ್ತ ಬಾಡಿಗೆದಾರರು ಅದರ ಬಗ್ಗೆ ಬ್ರೋಕರ್ ಬಳಿ ವಿಚಾರಿಸಲು ಪ್ರಾರಂಭಿಸಿದ್ದರು ಎನ್ನಲಾಗಿದೆ. ಫ್ಲ್ಯಾಟ್ಗೆ ತಿಂಗಳಿಗೆ 5 ಲಕ್ಷ ಬಾಡಿಗೆ ನಿಗದಿ ಮಾಡಲಾಗಿದೆ. ಆರು ತಿಂಗಳ ಬಾಡಿಗೆಗೆ ಸಮಾನವಾಗಿ 30 ಲಕ್ಷ ರೂಪಾಯಿ ಅಡ್ವಾನ್ಸ್ ಠೇವಣಿಯನ್ನೂ ಮಾಲೀಕರು ಪಡೆಯುತ್ತಾರೆ.
ನಮಗೆ ಬಾಡಿಗೆದಾರರು ಸಿಕ್ಕಿದ್ದಾರೆ. ಕುಟುಂಬದೊಂದಿಗೆ ಮಾತುಕತೆಯ ಅಂತಿಮ ಹಂತದಲ್ಲಿದ್ದೇವೆ. ಜನರು ಈಗ ಸುಶಾಂತ್ ಸಾವಿನ ಬಗ್ಗೆ ಭಯಪಡುವುದಿಲ್ಲ. ಮನೆಗೆ ಬರಲು ಒಪ್ಪಿದ್ದಾರೆ ಹೇಳಿದ್ದಾರೆ ಎನ್ನಲಾಗಿದೆ.
ಜನರು ಬಾಡಿಗೆಗೆ ಬರಲು ಹೆದರುತ್ತಿದ್ದಾರೆ ಎಂದು ವ್ಯಾಪಾರಿ ಈ ಹಿಂದೆ ಬಾಲಿವುಡ್ ಹಂಗಾಮಾಗೆ ತಿಳಿಸಿದ್ದರು. ಆದರೆ ನಂತರ ಈ ಬಗ್ಗೆ ಪೋಸ್ಟ್ ಕೂಡಾ ಹಾಕಲಾಗಿತ್ತು. ಆಮೇಲೆ ಹೆಚ್ಚಿನ ಜನರು ಮನೆಗೆ ಭೇಟಿ ನೀಡಲು ಪ್ರಾರಂಭಿಸಿದರು.
ಇತ್ತೀಚಿನ ದಿನಗಳಲ್ಲಿ ಸುಶಾಂತ್ ಸಾವಿನ ಸುದ್ದಿ ಹಳೆಯದಾಗಿದೆ ಎಂಬ ಕಾರಣದಿಂದಾದರೂ ಜನರು ಕನಿಷ್ಠ ಫ್ಲ್ಯಾಟ್ ನೋಡಲು ಭೇಟಿ ನೀಡುತ್ತಿದ್ದಾರೆ. ಆದರೂ ಒಪ್ಪಂದ ಅಂತಿಮಗೊಂಡಿಲ್ಲ ಎಂದು ಬ್ರೋಕರ್ ಇಂಡಿಯಾ ಟುಡೆಗೆ ಹೇಳಿದ್ದಾರೆ.
ಇದನ್ನೂ ಓದಿ: Sushant Singh Rajput: ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಯ್ಲಾಟ್ಗೆ ಜನ ಸಿಕ್ತಿಲ್ಲ! ಎರಡೂವರೆ ವರ್ಷದಿಂದ ಖಾಲಿ
ಮಾಂಟ್ ಬ್ಲಾಂಕ್ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್ ಸಮುದ್ರಕ್ಕೆ ಎದುರಾಗಿರುವ ಡ್ಯೂಪ್ಲೆಕ್ಸ್ 4BHK ಆಗಿದೆ. ಇದು ಸುಮಾರು 2,500 ಚದರ ಅಡಿಗಳಷ್ಟು ವಿಸ್ತಾರ ಹಾಗೂ ಟೆರೇಸ್ ಅನ್ನು ಹೊಂದಿದೆ. ಇದು ಮುಂಬೈನ ಬಾಂದ್ರಾ ಪಶ್ಚಿಮದಲ್ಲಿರುವ ಕಾರ್ಟರ್ ರಸ್ತೆಯಲ್ಲಿದೆ. ಸುಶಾಂತ್ ಅವರು ಡಿಸೆಂಬರ್ 2019 ರಲ್ಲಿ ಅಪಾರ್ಟ್ಮೆಂಟ್ಗೆ ತೆರಳಿದ್ದರು. ಮಾಸಿಕ ಬಾಡಿಗೆ 4.51 ಲಕ್ಷ ರೂ. ನೀಡುತ್ತಿದ್ದರು. ನಟ ತನ್ನ ಫ್ಲಾಟ್ಮೇಟ್ಗಳು ಮತ್ತು ಆಗಿನ ಗೆಳತಿ ರಿಯಾ ಚಕ್ರವರ್ತಿಯೊಂದಿಗೆ ಅಲ್ಲಿ ವಾಸಿಸುತ್ತಿದ್ದರು.
ಬಾಡಿಗೆಗೆ ಜನ ಸಿಗುತ್ತಿಲ್ಲ ಎಂದಿದ್ದ ಮಾಲೀಕ
ಇದೀಗ ನಟನ ಸಾವಿನ ಸಂಬಂಧ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಲ್ಯಾಟ್ನ್ನು ಪಡೆಯಲು ಯಾವುದೇ ಬಾಡಿಗೆದಾರರು ಬರುತ್ತಿಲ್ಲ ಎನ್ನಲಾಗಿದೆ. ಸುಮಾರು ಎರಡೂವರೆ ವರ್ಷದಿಂದಲೂ ಕಟ್ಟಡ ಮಾಲೀಕರು ಈ ವಿಚಾರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು.
ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಪತ್ತೆಯಾದ ಮುಂಬೈನ ಫ್ಲಾಟ್ ಕಳೆದ 2.5 ವರ್ಷಗಳಿಂದ ಖಾಲಿ ಬಿದ್ದಿದೆ. ಬಾಡಿಗೆಗೆ ಕೊಟ್ಟರೂ ಬಂದು ವಾಸವಿರಲು ಜನರು ಸಿಗುತ್ತಿಲ್ಲ. ಅದನ್ನು ತೆಗೆದುಕೊಳ್ಳಲು ಇನ್ನೂ ಯಾರೂ ಮುಂದೆ ಬಂದಿಲ್ಲ. ರಿಯಲ್ ಎಸ್ಟೇಟ್ ಬ್ರೋಕರ್, ರಫೀಕ್ ಮರ್ಚೆಂಟ್, ಇತ್ತೀಚೆಗೆ ಸಿ ಫೇಸ್ಡ್ ಫ್ಲ್ಯಾಟ್ನ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದು, ಫ್ಲಾಟ್ ತಿಂಗಳಿಗೆ ₹ 5 ಲಕ್ಷ ಬಾಡಿಗೆಗೆ ಲಭ್ಯವಿದೆ ಎಂದು ಮಾಹಿತಿ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ