ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವು ಇಂಡಸ್ಟ್ರಿಗೆ ದೊಡ್ಡ ಶಾಕ್ ಆಗಿತ್ತು. ತನ್ನ ಮುಂಬೈ ಫ್ಲ್ಯಾಟ್ನಲ್ಲಿ (Flat) ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾದ ನಟನ (Actor) ಸಾವು ದೊಡ್ಡ ಚರ್ಚೆಯಾಗಿತ್ತು. ನಟನ ಸಾವು ಸಂಭವಿಸಿ ಇಷ್ಟೊಂದು ಸಮಯವಾದರೂ ಈಗಲೂ ನಟನ ಹೆಸರು ಹಲವು ಬಾರಿ ಸೋಷಿಯಲ್ ಮೀಡಿಯಾ ಟ್ರೆಂಡ್ (Trend) ಆಗುತ್ತಿದೆ. ಅವರ ಅಭಿಮಾನಿಗಳು ಈಗಲೂ ನಟನನ್ನು ನೆನಪಿಸಿಕೊಳ್ಳುತ್ತಾರೆ. ಒಬ್ಬ ಒಳ್ಳೆಯ ನಟ ಮಾತ್ರವಲ್ಲದೆ ಜೀನಿಯಸ್ ಆಗಿದ್ದ ಸುಶಾಂತ್ ಚಂದ್ರನಲ್ಲಿಯೂ (Moon) ಜಾಗ ಖರೀದಿಸಿದ್ದರು. ಅದಕ್ಕೆ ಬೇಕಾದ ಅರ್ಹತೆಗಳು ಅವರಲ್ಲಿದ್ದವು. ಆದರೆ ಅವರ ಸಾವು ದೊಡ್ಡ ವಿವಾದವಾಗಿ (Controversy) ಬಾಲಿವುಡ್ (Bollywood) ನೆಪೊಟಿಸಂ (Nepotism) ವಿಚಾರ ಹೈಲೈಟ್ ಆಗಿತ್ತು.
ಇದೀಗ ನಟನ ಸಾವಿನ ಸಂಬಂಧ ಮತ್ತೊಂದು ಸುದ್ದಿ ಮುನ್ನೆಲೆಗೆ ಬಂದಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಲ್ಯಾಟ್ನ್ನು ಪಡೆಯಲು ಯಾವುದೇ ಬಾಡಿಗೆದಾರರು ಬರುತ್ತಿಲ್ಲ ಎನ್ನಲಾಗಿದೆ. ಸುಮಾರು ಎರಡೂವರೆ ವರ್ಷದಿಂದಲೂ ಕಟ್ಟಡ ಮಾಲೀಕರು (Owner) ಈ ವಿಚಾರ ಸಮಸ್ಯೆ ಎದುರಿಸುತ್ತಿದ್ದಾರೆ.
ಬಾಡಿಗೆಗೆ ಜನ ಸಿಗುತ್ತಿಲ್ಲ
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಪತ್ತೆಯಾದ ಮುಂಬೈನ ಫ್ಲಾಟ್ ಕಳೆದ 2.5 ವರ್ಷಗಳಿಂದ ಖಾಲಿ ಬಿದ್ದಿದೆ. ಬಾಡಿಗೆಗೆ ಕೊಟ್ಟರೂ ಬಂದು ವಾಸವಿರಲು ಜನರು ಸಿಗುತ್ತಿಲ್ಲ. ಅದನ್ನು ತೆಗೆದುಕೊಳ್ಳಲು ಇನ್ನೂ ಯಾರೂ ಮುಂದೆ ಬಂದಿಲ್ಲ. ರಿಯಲ್ ಎಸ್ಟೇಟ್ ಬ್ರೋಕರ್, ರಫೀಕ್ ಮರ್ಚೆಂಟ್, ಇತ್ತೀಚೆಗೆ ಸಿ ಫೇಸ್ಡ್ ಫ್ಲ್ಯಾಟ್ನ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದು, ಫ್ಲಾಟ್ ತಿಂಗಳಿಗೆ ₹ 5 ಲಕ್ಷ ಬಾಡಿಗೆಗೆ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಲಿವುಡ್ಗೆ ಸೆಲೆಬ್ರಿಟಿಗಳಿಗೆ ಇನ್ನು ಫ್ಲ್ಯಾಟ್ ಕೊಡಲ್ಲ
ಎನ್ಆರ್ಐ ಆಗಿರುವ ಫ್ಲಾಟ್ನ ಮಾಲೀಕರು ತಮ್ಮ ಫ್ಲಾಟ್ ಅನ್ನು ಇನ್ನು ಮುಂದೆ ಬಾಲಿವುಡ್ ಸೆಲೆಬ್ರಿಟಿಗಳಿಗೆ ನೀಡುವುದಿಲ್ಲ ಎಂದು ಅವರ ಬ್ರೋಕರ್ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಅವರು ಬಾಡಿಗೆದಾರರಾಗಿ ಕಾರ್ಪೊರೇಟ್ ಸಂಬಂಧ ಕೆಲಸ ಮಾಡುವವರನ್ನು ಹುಡುಕುತ್ತಿದ್ದಾರೆ. ಜೂನ್ 14, 2020 ರಂದು, ಸುಶಾಂತ್ ಸಿಂಗ್ ರಜಪೂತ್ ಅಪಾರ್ಟ್ಮೆಂಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮುಂಬೈ ಪೊಲೀಸರು ಆರಂಭದಲ್ಲಿ ಇದನ್ನು ಆತ್ಮಹತ್ಯೆ ಎಂದು ತೀರ್ಪು ನೀಡಿದರು.
ಇದನ್ನೂ ಓದಿ: Avatar 2: ಅವತಾರ್ 2 ಭರ್ಜರಿ ಟಿಕೆಟ್ ಮಾರಾಟ, ವೀಕೆಂಡ್ 16 ಕೋಟಿ ಕಲೆಕ್ಷನ್
ಫ್ಲಾಟ್ನಲ್ಲಿ ಹೊಸ ಬಾಡಿಗೆದಾರರು ಏಕೆ ಇಲ್ಲ ಎಂಬುದರ ಕುರಿತು ಮಾತನಾಡಿದ ರಫೀಕ್, ಬಾಲಿವುಡ್ ಹಂಗಾಮಾಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜನರು ಈ ಫ್ಲಾಟ್ಗೆ ಹೋಗಲು ಹೆದರುತ್ತಾರೆ. ನಿರೀಕ್ಷಿತ ಬಾಡಿಗೆದಾರರು ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟ ಅದೇ ಅಪಾರ್ಟ್ಮೆಂಟ್ ಎಂದು ಕೇಳಿದಾಗ, ಅವರು ಫ್ಲ್ಯಾಟ್ಗೆ ಭೇಟಿ ನೀಡುವುದಿಲ್ಲ ಎಂದಿದ್ದಾರೆ.
Sea Facing Duplex 4BHK with a Terrace Mont Blanc
5 lakhs Rent
Carter Road, Bandra West. RAFIQUE MERCHANT 9892232060, 8928364794 pic.twitter.com/YTcjIRiSrw
— Rafique Merchant (@RafiqueMerchant) December 9, 2022
ವರದಿಯ ಪ್ರಕಾರ, ಸುಶಾಂತ್ ಅವರು ಡಿಸೆಂಬರ್ 2019 ರಿಂದ ತಿಂಗಳಿಗೆ ಸುಮಾರು ₹ 4.5 ಲಕ್ಷಕ್ಕೆ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಅವರು ತಮ್ಮ ಫ್ಲ್ಯಾಟ್ ಅನ್ನು ಇತರ ಸ್ನೇಹಿತರು ಹಾಗೂ COVID-19 ಲಾಕ್ಡೌನ್ ಸಮಯದಲ್ಲಿ ಅವರೊಂದಿಗೆ ವಾಸಿಸುತ್ತಿದ್ದ ಅವರ ಗೆಳತಿ-ನಟಿ ರಿಯಾ ಚಕ್ರವರ್ತಿ ಅವರೊಂದಿಗೆ ಶೇರ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ