ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಮಾದರಿ ಹೋಲುವ ವ್ಯಕ್ತಿಯ ವಿಡಿಯೋ

ಉತ್ತರ ಪ್ರದೇಶದ ಸಚಿನ್​ ತಿವಾರಿ ನೋಡಲು ಸುಂಶಾಂತ್​ ಸಿಂಗ್​ರಂತೆ ಇದ್ದು, ಅವರ ನಟನೆಯ ಕೆಲವು ಸಿನಿಮಾಗಳ ಹಾಡಿಗೆ ಟಿಕ್​ಟಾಕ್​ ಮಾಡಿದ್ದರು. ಇದೀಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ. ಸಚಿನ್​ ತಿವಾರಿ ಅವರು ಸುಶಾಂತ್​ ಸಿಂಗ್​ರಂತೆ ಕೂದಲು ಕೂಡ ಬಿಟ್ಟಿದ್ದು, ಅವರ ನಗು, ನಟನೆಯೆಲ್ಲವು ಸುಶಾಂತ್​ ಸಿಂಗ್​ ಅವರ ಹೋಲಿಕೆಯಂತಿದೆ.

news18-kannada
Updated:July 8, 2020, 2:15 PM IST
ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಮಾದರಿ ಹೋಲುವ ವ್ಯಕ್ತಿಯ ವಿಡಿಯೋ
ಸುಶಾಂತ್ ಸಿಂಗ್- ಸಚಿನ್​ ತಿವಾರಿ
  • Share this:
ಬಾಲಿವುಡ್ ನಟ ಸುಶಾಂತ್​ ರಜಪೂತ್​ ಜೂನ್​ 14 ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡುವ ಮೂಲಕ ಸಾವನದನಪ್ಪಿದ್ದರು. ಪ್ರತಿಭಾನ್ವಿತ ನಟನ ಸಾವು ಕೇವಲ ಬಾಲಿವುಡ್​ ಮಂದಿಗೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ಆಘಾತ ನೀಡಿತ್ತು. ಅನೇಕರು ಸುಶಾಂತ್​ ಸಾವಿಗೆ ಕಣ್ಣೀರು ಹಾಕಿದರು. ಸಾಮಾಜಿಕ ಜಾಲತಾಣದಲ್ಲಂತೂ ಸುಶಾಂತ್​ ಸಿಂಗ್​ ಫೋಟೋ, ಅವರ ಮಾತು, ಅವರು ನಟಿಸಿರುವ ಸಿನಿಮಾದ ಕೆಲವು ವಿಡಿಯೋಗಳು ಈಗಲೂ ಹರಿದಾಡುತ್ತಿವೆ.

ಸದ್ಯ ಸುಶಾಂತ್​ ಸಿಂಗ್​ ಅವರಂತೆ ಹೋಲಿಕೆಯಿರುವ ವ್ಯಕ್ತಿಯೊಬ್ಬನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಗುತ್ತಿದೆ. ಅನೇಕರು ಈ ಯುವಕನ ವಿಡಿಯೋ, ಹಾವಭಾವಗಳನ್ನು ಕಂಡು ಜ್ಯೂನಿಯರ್​​ ಸುಶಾಂತ್​ ಸಿಂಗ್​ ಎಂದು ಕರೆಯುತ್ತಿದ್ದಾರೆ.

ಉತ್ತರ ಪ್ರದೇಶದ ಸಚಿನ್​ ತಿವಾರಿ ನೋಡಲು ಸುಂಶಾಂತ್​ ಸಿಂಗ್​ರಂತೆ ಇದ್ದು, ಅವರ ನಟನೆಯ ಕೆಲವು ಸಿನಿಮಾಗಳ ಹಾಡಿಗೆ ಟಿಕ್​ಟಾಕ್​ ಮಾಡಿದ್ದರು. ಇದೀಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ. ಸಚಿನ್​ ತಿವಾರಿ ಅವರು ಸುಶಾಂತ್​ ಸಿಂಗ್​ರಂತೆ ಕೂದಲು ಕೂಡ ಬಿಟ್ಟಿದ್ದು, ಅವರ ನಗು, ನಟನೆಯೆಲ್ಲವು ಸುಶಾಂತ್​ ಸಿಂಗ್​ ಅವರ ಹೋಲಿಕೆಯಂತಿದೆ.

View this post on Instagram

A post shared by Sachin Tiwari (@officialtiwarisachin) on

ಸಚಿನ್​ ತಿವಾರಿ ಅವರ ಅನೇಕ ವಿಡಿಯೋಗಳು ಇನ್​ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಸುಶಾಂತ್​ ಸಿಂಗ್​ 2013ರಲ್ಲಿ ನಟಿಸಿದ ‘ಶುದ್ಧ್​ ದೇಸಿ ರೊಮ್ಯಾನ್ಸ್​’​​ ಸಿನಿಮಾದ ಹಾಡಿಗೆ ಸಚಿನ್​ ಹೆಜ್ಜೆ ಹಾಕಿರುವ ವಿಡಿಯೋ ಕಂಡು ಅನೇಕರು ಬಗೆ ಬಗೆಯ ಕಾಮೆಂಟ್​ ಬರೆಯುತ್ತದ್ದಾರೆ. ಅದರಲ್ಲೊಬ್ಬರು, ‘ಓಹ್​ ದೇವರೆ, ಸುಶಾಂತ್​ ಸಿಂಗ್​​ ನೆನಪಾಗುತ್ತಿದ್ದಾರೆ’ ಎಂದು ಕಾಮೆಂಟ್​ ಬರೆದರೆ, ಮತ್ತೊಬ್ಬರು ‘ನೀವು ಬಾಲಿವುಡ್​ಗೆ ಪ್ರಯತ್ನಿಸಿ’ ಎಂದು ಹೇಳಿದ್ದಾರೆ. 
View this post on Instagram
 
😍😍😍😍

A post shared by Sachin Tiwari (@officialtiwarisachin) on
 
View this post on Instagram

A post shared by Sachin Tiwari (@officialtiwarisachin) on

ಸುಶಾಂತ್​ ಸಿಂಗ್​ ಸಾಕಷ್ಟು ಕನಸನ್ನು ಹೊತ್ತುಕೊಂಡಿದ್ದ ನಟರಾಗಿದ್ದರು. ಅಭಿಮಾನಿಗಳಿಗೆ ತೀರಾ ಹತ್ತಿರವಾಗಿದ್ದರು. ವಿಶೇಷವಾಗಿ ಎಲ್ಲರ ಜೊತೆ ಬೆರತುಕೊಂಡು ಅವರ ಕಷ್ಟಗಳಿಗೆ ಸ್ಪಂದಿಸುತ್ತಾ, ಧೈರ್ಯ ತುಂಬುತ್ತಾ, ಸಪೋರ್ಟ್​ ಮಾಡುತ್ತಿದ್ದರು. ಆದರೆ, ಜೂನ್​ 14 ರಂದು ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕು ಮುಗಿಸಿದ್ದಾರೆ.

ಅನೇಕರು ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದು ಕೊಲೆ ಎಂದು ಹೇಳಿದ್ದರು. ಆದರೆ, ಅಂತಿಮ ಮರಣೋತ್ತರ ಪರೀಕ್ಷೆಯ ಫಲಿತಾಂಶ ಹೊರಬಿದ್ದ ನಂತರ ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published by: Harshith AS
First published: July 8, 2020, 2:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading