Anitha EAnitha E
|
news18-kannada Updated:July 25, 2020, 10:13 AM IST
ದಿಲ್ ಬೆಚಾರ ಸಿನಿಮಾದಲ್ಲಿ ಸುಶಾಂತ್ ಸಿಂಗ್
ದಿಲ್ ಬೆಚಾರ.... ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ. ನಿನ್ನೆ ಅಂದರೆ ಜುಲೈ 24ರಂದು ಸಂಜೆ 7.30ಕ್ಕೆ ಈ ಚಿತ್ರ ರಿಲೀಸ್ ಆಯಿತು. ಈ ಸಿನಿಮಾವನ್ನು ನೋಡಲು ಕಾತರರಾಗಿದ್ದ ಅಭಿಮಾನಿಗಳು ದಿಲ್ ಬೆಚಾರ ಚಿತ್ರವನ್ನು ನೋಡಿ, ಅದನ್ನು ಬ್ಲಾಕ್ಬಸ್ಟರ್ ಮಾಡುವ ಪಣ ತೊಟ್ಟಿದ್ದರು.
ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ
ಸುಶಾಂತ್ ಹಾಗೂ ಸಂಜನಾ ಸಂಘಿ ಅವರ ಅಭಿನಯಕ್ಕೆ ಮುಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಲು ಆರಂಭಿಸಿದ್ದರು ನೆಟ್ಟಿಗರು. ಎ.ಆರ್. ರೆಹಮಾನ್ ಸಂಗೀತ ಸಿನಿಪ್ರಿಯರ ಮನಮುಟ್ಟಿದೆ.

ದಿಲ್ ಬೆಚಾರ ಸಿನಿಮಾಗೆ ಸಿಕ್ಕ ಐಎಂಡಿಬಿ ರೇಟಿಂಗ್
ಇನ್ನು ಐಎಂಡಿಬಿಯನಲ್ಲಿ ಸುಶಾಂತ್ ಅಭಿನಯದ ಈ ಚಿತ್ರಕ್ಕೆ 10/10 ರೇಟಿಂಗ್ ಸಿಕ್ಕಿದೆ. ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳ ಸಾಲಿನಲ್ಲಿ ಸುಶಾಂತ್ ಚಿತ್ರ ಸಹ ಜಾಗ ಗಿಟ್ಟಿಸಿಕೊಂಡಿದೆ. ಸದ್ಯಕ್ಕೆ ಐಎಂಡಿಬಿಯಲ್ಲಿ ಅತಿಹೆಚ್ಚು ರೇಟಿಂಗ್ ಪದೆಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ದಿಲ್ ಬೆಚಾರ.
ಐಎಂಡಿಬಿ ಹಾಗೂ ಈ ವಿಷಯ ಸದ್ಯ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಈ ಸಿನಿಮಾವನ್ನುಅತಿ ಹೆಚ್ಚು ರೇಟಿಂಗ್ ಪಡೆದ ಚಿತ್ರವನ್ನಾಗಿಸಲು ನೆಟ್ಟಿಗರು ಶ್ರಮಪಡುತ್ತಿದ್ದಾರೆ. ಐಎಂಡಿಬಿಯಲ್ಲಿ ಈ ರೇಟಿಂಗ್ ಸಿಕ್ಕ ನಂತರವಂತೂ ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಈ ಚಿತ್ರದಲ್ಲಿ ಸುಶಾಂತ್ ಮ್ಯಾನಿ ಪಾತ್ರದಲ್ಲಿ ಹಾಗೂ ಸಂಜನಾ ಕಿಝಿ ಬಸು ಆಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರ ಲವ್ಸ್ಟೋರಿ ಟ್ರಾಜಿಕ್ ಆದರೂ ಅದರಲ್ಲೂ ಒಂದು ಒಳ್ಳೆಯ ಸಂದೇಶವಿದೆ.
ಇದನ್ನೂ ಓದಿ: Pawan Kalyan: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಪವನ್ ಕಲ್ಯಾಣ್: ವೈರಲ್ ಆಗುತ್ತಿದೆ ಫೋಟೋ..!
ಇನ್ನು ಐಎಂಡಿಬಿ ರೇಟಿಂಗ್ ಸರ್ವರ್ ಕ್ರ್ಯಾಶ್ ಆಗಿತ್ತು. ಈ ಮಟ್ಟಕ್ಕೆ ನೆಟ್ಟಿಗರು ಸುಶಾಂತ್ ಸಿನಿಮಾವನ್ನು ಹಿಟ್ ಮಾಡಲು ಶ್ರಮಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಐಎಂಡಿಬಿ ಇಂಡಿಯನ್ ಸರ್ವರ್ ಕ್ರ್ಯಾಶ್ ಆಗಿರಬೇಕು ಎನ್ನಲಾಗುತ್ತಿದೆ.
ಇದನ್ನೂ ಓದಿ: ಹೊಟ್ಟೆಪಾಡಿಗಾಗಿ ರಸ್ತೆಗಿಳಿದ ವಾರಿಯರ್ ಅಜ್ಜಿ: ನೆರವಿಗೆ ಮುಂದಾದ ಸೋನು ಸೂದ್-ರಿತೇಶ್..!
Published by:
Anitha E
First published:
July 25, 2020, 10:07 AM IST