Gehraiyaan Updates: ಗೆಹರಾಯಿಯಾ ಸೋಲು ಸಂಭ್ರಮಿಸಿದ ಸುಶಾಂತ್ ಫ್ಯಾನ್ಸ್

ದೀಪಿಕಾ ಪಡುಕೋಣೆ ಅಭಿನಯದ ಗೆಹೆರಿಯಾ OTT ನಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅನೇಕರು ಸಿನಿಮಾವನ್ನು ಟೈಂ ವೇಸ್ಟ್ ಎಂದು ಕರೆಯುತ್ತಿದ್ದರೆ, ಇತರರು ಅದನ್ನು ರಿಲೇಟಬಲ್ ವಾಚ್ ಎಂದು ಕರೆಯುವ ಮೂಲಕ ಪ್ರಶಂಸಿಸುತ್ತಿದ್ದಾರೆ

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ಗೆಹರಾಯಿಯಾ (Gehraiyaan) ಸಿನಿಮಾ ಬಗ್ಗೆ ವ್ಯಾಪಕ ವಿಮರ್ಶೆ ಕೇಳಿ ಬರುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಸಿನಿಮಾ ಕಥೆ ಆಧುನಿಕ ಸಂಬಂಧ, ಅಕ್ರಮ ಸಂಬಂಧ, ಸಂಬಂಧಗಳ ಬಲಹೀನತೆಯ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ ಫ್ಲಾಪ್ ಆಗಿದೆ. ಇದಕ್ಕೂ ಮುನ್ನ ರಣವೀರ್ ಸಿಂಗ್ ಜೊತೆಗೆ 86ನಲ್ಲಿ ಕಾಣಿಸಿಕೊಂಡಿದ್ದರು ದೀಪಿಕಾ. ಆ ಸಿನಿಮಾ ಕೂಡಾ ಅಷ್ಟಾಗಿ ಹಿಟ್ ಅಗಿಲ್ಲ. ಈಗ ಅದರ ಹಿಂದೆಯೇ ಮತ್ತೊಂದು ಸಿನಿಮಾ ಫ್ಲಾಪ್ ಆಗಿದೆ. ಭಿನ್ನ ಕಥಾಹಂದರವನ್ನು ಹೊಂದಿದ್ದರೂ ಈ ಸಿನಿಮಾ ಭಾರತೀಯ ಸಮಾಜಕ್ಕೆ ಅಷ್ಟಾಗಿ ಒಗ್ಗುವುದಿಲ್ಲ. ತಪ್ಪು ಸಂದೇಶ ನೀಡುವಂತಿರುವ ಸಿನಿಮಾ ಮೊದಲ ನೋಟಕ್ಕೆ ಭಾರತೀಯರಿಗೆ ಇಷ್ಟವಾಗಿಲ್ಲ. ಸಿನಿಮಾದ ಆಳದಲ್ಲಿ ಹುರುಳಿದ್ದರೂ ಇದು ಸಮಾನ್ಯವಾಗಿ ಬಹುತೇಕ ವೀಕ್ಷಕರಿಗೆ ಸರಿಯಾಗಿ ತಲುಪುವಲ್ಲಿ ವಿಫಲವಾಗಿದೆ.

ಈಗಾಗಲೇ ಸಿನಿಮಾ ಬಗ್ಗೆ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ. ಸಿನಿಮಾವನ್ನು ಕಸಕ್ಕೆ ಹೋಲಿಸಿದ್ದಾರೆ. ಇದೀಗ ಸಿನಿಮಾ (Cinema) ಬಗ್ಗೆ ಭಾರೀ ನೆಗೆಟಿವ್ ರಿವ್ಯೂ ವ್ಯಕ್ತವಾಗುತ್ತಿದೆ. ಬಹಳಷ್ಟು ಜನ ಇದು ಫ್ಲಾಪ್ ಮೂವಿ (Flop Movie) ಎಂದು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಸಿನಿಮಾ ಫ್ಲಾಪ್ ಅಗಿರುವುದನ್ನು ಸಂಭ್ರಮಿಸಿದ್ದಾರೆ.

ಮಿಶ್ರ ಪ್ರತಿಕ್ರಿಯೆ

ದೀಪಿಕಾ ಪಡುಕೋಣೆ ಅಭಿನಯದ ಗೆಹರಾಯಿಯಾ OTT ನಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅನೇಕರು ಸಿನಿಮಾವನ್ನು ಟೈಂ ವೇಸ್ಟ್ ಎಂದು ಕರೆಯುತ್ತಿದ್ದರೆ, ಇತರರು ಅದನ್ನು ರಿಲೇಟಬಲ್ ವಾಚ್ ಎಂದು ಕರೆಯುವ ಮೂಲಕ ಪ್ರಶಂಸಿಸುತ್ತಿದ್ದಾರೆ. ಚರ್ಚೆಯ ನಡುವೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಗೆಹೆರಿಯಾ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ದೀಪಿಕಾ ಸಿನಿಮಾ ಕೆಟ್ಟದಾಗಿದೆ ಎಂದ ಕಂಗನಾ, ಮೈ ತೋರಿಸಿದ್ರೂ ಸಿನಿಮಾ ಬಚಾವಾಗ್ಲಿಲ್ಲ ಎಂದ ಕ್ವೀನ್

ಸೋಲನ್ನು ಸಂಭ್ರಮಿಸಿದ ಸುಶಾಂತ್ ಅಭಿಮಾನಿಗಳು

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಯ್ಕಾಟ್ ಬಾಲಿವುಡ್ ಎಂಬ ಈ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ಅವರ ಅಭಿಮಾನಿಗಳು ಚಿತ್ರದ ಬಗ್ಗೆ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ಅನ್ನು ಬಹಿಷ್ಕರಿಸಲು ಒತ್ತಾಯಿಸುತ್ತಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಅಭಿನಯದ ಗೆಹೆರಿಯಾ ಅವರ ಅಭಿಯಾನಕ್ಕೆ ಗುರಿಯಾಗಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ ದಿವಂಗತ ನಟನ ಅಭಿಮಾನಿಗಳು ಈಗಾಗಲೇ ಚಿತ್ರ ಫ್ಲಾಪ್ ಎಂದು ಘೋಷಿಸಿ ಸೋಲಿನ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ: Kangana Ranaut: ದೀಪಿಕಾ ಹೆಸರು ಹೇಳಿದ ಪತ್ರಕರ್ತನ ಜೊತೆ ಕಂಗನಾ ಜಗಳ, ಆಗಿದ್ದೇನು ?

ರಿಯಾ ಚಕ್ರವರ್ತಇ ಮೇಲೆ ಟ್ವೀಟ್ ವಾರ್

ಸುಶಾಂತ್ ಅಭಿಮಾನಿಗಳು ದೀಪಿಕಾ ಪಡುಕೋಣೆ ಅವರ ಚಲನಚಿತ್ರವನ್ನು ಗುರಿಯಾಗಿಸಿಕೊಂಡಿದ್ದು ಮಾತ್ರವಲ್ಲದೆ ಸೋನಮ್ ಕಪೂರ್ ಅವರನ್ನು ಕೂಡಾ ಟೀಕಿಸಿದ್ದಾರೆ. ನಟನ ಸಾವಿನ ಎರಡು ವರ್ಷಗಳ ನಂತರ ಕೆಲಸಕ್ಕೆ ಮರಳಿರುವ ರಿಯಾ ಚಕ್ರವರ್ತಿಯನ್ನು ಬಂಧಿಸುವಂತೆ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.ಕಂಗನಾ ರಿವ್ಯೂ

ಗೆಹೆರಿಯಾ ಬಗ್ಗೆ ಕಂಗನಾ ಕಂಗನಾ, ನಾನಿನ್ನೂ ಸಹಸ್ರಮಾನದವಳು. ಆದರೆ ನಾನು ಈ ರೀತಿಯ ಪ್ರಣಯವನ್ನು ಗುರುತಿಸಿದ್ದೇನೆ. ಅರ್ಥಮಾಡಿಕೊಂಡಿದ್ದೇನೆ. ಸಾವಿರವರ್ಷ ಹಳೆಯದು/ಹೊಸಯುಗ/ನಗರದ ಸಿನಿಮಾ ಎಂಬ ಹೆಸರಿನಲ್ಲಿ ಕಸವನ್ನು ಮಾರಾಟ ಮಾಡಬೇಡಿ ಪ್ಲೀಸ್.. ದೇಹ ಪ್ರದರ್ಶನ(Skin Show) ಅಥವಾ ಅಶ್ಲೀಲತೆ ಕೂಡಾ ಕೆಟ್ಟ ಸಿನಿಮಾಗಳನ್ನು ಉಳಿಸಲು ಸಾಧ್ಯವಿಲ್ಲ. ಇದು ಸತ್ಯ, ಗೆಹರಿಯಾ ಕುರಿತ ಮಾತಲ್ಲ ಎಂದಿದ್ದಾರೆ. ಇದೀಗ ಸಿನಿಮಾ ಕುರಿತು ಎಲ್ಲೆಡೆಯಿಂದ ನೆಗೆಟಿವ್ ರಿವ್ಯೂ ಕೇಳಿಬರುತ್ತಿದೆ.
Published by:Divya D
First published: