• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Chhichhore Movie: ಮೂರು ವರ್ಷ ಪೂರೈಸಿದ ಸುಶಾಂತ್ ಸಿಂಗ್ ನಟನೆಯ ಚಿತ್ರ, ಅವನಿರಬೇಕಿತ್ತು ಅನ್ಸೋಕೆ ಮತ್ತಷ್ಟು ಕಾರಣಗಳು

Chhichhore Movie: ಮೂರು ವರ್ಷ ಪೂರೈಸಿದ ಸುಶಾಂತ್ ಸಿಂಗ್ ನಟನೆಯ ಚಿತ್ರ, ಅವನಿರಬೇಕಿತ್ತು ಅನ್ಸೋಕೆ ಮತ್ತಷ್ಟು ಕಾರಣಗಳು

ಸುಶಾಂತ್ ಸುಶಾಂತ್ ಸಿಂಗ್ ಮತ್ತು ತಾಹಿರ್ ರಾಜ್ ಭಾಸಿನ್

ಸುಶಾಂತ್ ಸುಶಾಂತ್ ಸಿಂಗ್ ಮತ್ತು ತಾಹಿರ್ ರಾಜ್ ಭಾಸಿನ್

ಛಿಚೋರೆ ಚಿತ್ರ ಬಿಡುಗಡೆಯಾಗಿ ಮೂರು ವರ್ಷವಾಯ್ತು ನೋಡಿ. ಈಗಲೂ ಈ ಚಿತ್ರದ ಸಹ ನಟರು ಸುಶಾಂತ್ ಸಿಂಗ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ನಟಿಸಿದ್ದ ಇನ್ನೊಬ್ಬ ನಟ ತಾಹಿರ್ ರಾಜ್ ಭಾಸಿನ್ ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ನೀವು ಹಿಂದಿ ಚಿತ್ರ ‘ಛಿಚೋರೆ’ (Chhichhore) ಹೆಸರು ಕೇಳಿದ ತಕ್ಷಣವೇ ನಿಮಗೆ ಮೊದಲು ನೆನಪಾಗುವುದೇ ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput). ಈ ಚಿತ್ರ ಬಿಡುಗಡೆಯಾಗಿ ಮೂರು ವರ್ಷವಾಯ್ತು ನೋಡಿ. ಈಗಲೂ ಈ ಚಿತ್ರದ ಸಹ ನಟರು ಸುಶಾಂತ್ ಸಿಂಗ್ ಅವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ನಟಿಸಿದ್ದ ಇನ್ನೊಬ್ಬ ನಟ ತಾಹಿರ್ ರಾಜ್ ಭಾಸಿನ್ (Tahir Raj Bhasin) ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ತಾಹಿರ್ ಅವರು ಸುಶಾಂತ್ ಅವರೊಂದಿಗಿನ ಥ್ರೋಬ್ಯಾಕ್ ಫೋಟೋವನ್ನು (Photo) ಹಂಚಿಕೊಂಡಿದ್ದಾರೆ ಮತ್ತು ಅವರಿಲ್ಲದೆ ಈ 'ಕಥೆಯನ್ನು ಎಂದಿಗೂ ಹೇಳುತ್ತಿರಲಿಲ್ಲ' ಎಂದು ಹೇಳಿದ್ದಾರೆ.


‘ಛಿಚೋರೆ’ ಚಿತ್ರೀಕರಣದ ವೇಳೆ ತೆಗೆದ ಫೋಟೋ ಶೇರ್ 
ತಾಹಿರ್ ರಾಜ್ ಭಾಸಿನ್ ಅವರು ಈ ‘ಛಿಚೋರೆ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸೆಟ್ ಗಳಲ್ಲಿ ತೆರೆಮರೆಯಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ, ಸ್ಕ್ರಿಪ್ಟ್ ನ ಒಂದು ಇಣುಕು ನೋಟ ಮತ್ತು ಅವರು ಈ ಚಿತ್ರಕ್ಕಾಗಿ ಹೇಗೆ ತಯಾರಿ ನಡೆಸಿದರು, ಚಿತ್ರದ ಸ್ಟಿಲ್ ಮತ್ತು ಪಾತ್ರ ವರ್ಗದೊಂದಿಗಿನ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.




ತಾಹಿರ್ ಮತ್ತು ಸುಶಾಂತ್ ಅವರು ಈ ಚಿತ್ರದ ಸೆಟ್ ಗಳಲ್ಲಿ ಕ್ಲಿಕ್ಕಿಸಿದ ಸೆಲ್ಫಿಗಾಗಿ ಕಣ್ಣು ಮಿಟುಕಿಸುತ್ತಿದ್ದಂತೆ ವಿಜಯದ ಚಿಹ್ನೆಯನ್ನು ತೋರಿಸಿದ್ದರು. ಅವರು ಒಂದೇ ರೀತಿಯ ಉಡುಪುಗಳನ್ನು ಧರಿಸಿರುವುದು ಕಂಡು ಬಂದಿದೆ. ಮತ್ತೊಂದು ಚಿತ್ರದಲ್ಲಿ, ತಾಹಿರ್ ಚಿತ್ರದಲ್ಲಿನ ತನ್ನ ಸಹ ನಟರಾದ ಶ್ರದ್ಧಾ ಕಪೂರ್, ವರುಣ್ ಶರ್ಮಾ ಮತ್ತು ನವೀನ್ ಪೊಲಿಶೆಟ್ಟಿ ಮುಗುಳ್ನಗುವುದರೊಂದಿಗೆ ವಿಭಿನ್ನ ಭಂಗಿಗಳಲ್ಲಿ ಪೋಸ್ ನೀಡಿದ್ದು ಸಹ ಇಲ್ಲಿ ನೋಡಬಹುದು. ಮತ್ತೊಂದು ಫೋಟೋದಲ್ಲಿ ಪ್ರತೀಕ್ ಬಬ್ಬರ್ ಮತ್ತು ವರುಣ್ ಅವರೊಂದಿಗೆ ತಾಹಿರ್ ಫೋಟೋಗೆ ಪೋಸ್ ನೀಡಿದ್ದಾರೆ.




ಒಂದು ಚಿತ್ರದಲ್ಲಿ, ತಾಹಿರ್ ಕೋಣೆಯೊಳಗಿನ ಮೇಜಿನ ಬಳಿ ಕುಳಿತು ಸ್ಕ್ರಿಪ್ಟ್ ಓದುತ್ತಿರುವುದನ್ನು ಸಹ ನಾವು ನೋಡಬಹುದು. ಅವರು ‘ಛಿಚೋರೆ’ ಚಿತ್ರದ ನಿರ್ದೇಶಕರಾದ ನಿತೇಶ್ ತಿವಾರಿ ಅವರೊಂದಿಗೆ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡಿದ್ದನ್ನು ಸಹ ನಾವು ಇಲ್ಲಿ ನೋಡಬಹುದು. ಈ ಎಲ್ಲಾ ಫೋಟೋಗಳನ್ನು ಹಂಚಿಕೊಂಡಿರುವ ತಾಹಿರ್ "ಇಂದು ‘ಛಿಚೋರೆ’ ಚಿತ್ರ ತಂಡವು ಬಿಡುಗಡೆಯಾಗಿ ಮೂರು ವರ್ಷಗಳನ್ನು ಕಳೆದ ಆಚರಣೆಯಲ್ಲಿದೆ. ಡೆರೆಕ್ ಪಾತ್ರದಲ್ಲಿ ಕಾಲೇಜು ಕ್ಯಾಂಪಸ್ ಜೀವನವನ್ನು ನಟಿಸುವುದು ತುಂಬಾನೇ ಮಜವಾಗಿತ್ತು. ನಿತೇಶ್ ತಿವಾರಿ ಅವರ ‘ಛಿಚೋರೆ’ ಚಿತ್ರದ ಸೆಟ್ ಗಳಿಂದ ಕೆಲವು ಬಿಟಿಎಸ್ ತುಣುಕುಗಳು ಇಲ್ಲಿವೆ" ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.


ಇದನ್ನೂ ಓದಿ: Urvashi Rautela: ಪಂತ್ ಆಯ್ತು, ಈಗ ಪಾಕ್ ಆಟಗಾರನೇ ಬೇಕಂತೆ! ಬಾಲಿವುಡ್​ ನಟಿ ರೀಲ್ಸ್​ ವಿಡಿಯೋ ವೈರಲ್​


ಸುಶಾಂತ್ ಸಿಂಗ್ ಅವರನ್ನು ನೆನೆಸಿಕೊಂಡ ತಾಹಿರ್ ರಾಜ್ ಭಾಸಿನ್ 
"ಚಿತ್ರದ ಇಡೀ ಪಾತ್ರ ವರ್ಗಕ್ಕೆ ಮತ್ತು ಸಿಬ್ಬಂದಿಗೆ ದೊಡ್ಡದೊಂದು ಹಾಯ್, ಅವರು ಈ ಚಿತ್ರಕ್ಕಾಗಿ ಎಲ್ಲವನ್ನೂ ನೀಡಿದರು ಮತ್ತು ಇಂತಹ ಒಂದು ಚಲನಚಿತ್ರ ಹೊರತರಲು ಸಾಧ್ಯವಾಯಿತು. ಸುಶಾಂತ್ ತುಂಬಾ ನೆನಪಾಗುತ್ತಾರೆ, ಅವರಿಲ್ಲದೆ ಈ ಕಥೆಯನ್ನು ಎಂದಿಗೂ ಹೇಳುತ್ತಿರಲಿಲ್ಲ ಮತ್ತು ಪರದೆಯ ಮೇಲೆ ತೋರಿಸುತ್ತಿರಲಿಲ್ಲ" ಎಂದು ಬರೆದಿದ್ದಾರೆ.




ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ನದಿಯಾದ್ವಾಲಾ "ಈ ಚಿತ್ರಗಳಿಗೆ ಕೇವಲ ಒಂದು ಪದ ಹೇಳಬೇಕು ಎಂದರೆ ಅದು ‘ನಾಸ್ಟಾಲ್ಜಿಯಾ’ ಅಂತ ಹೇಳಬಹುದು. ಛಿಚೋರೆ ಚಿತ್ರದ ಖುಷಿಯ 3 ವರ್ಷಗಳು ಡೆರೆಕ್" ಎಂದು ಬರೆದಿದ್ದಾರೆ.


ಇದನ್ನೂ ಓದಿ:  Samantha: 2ನೇ ಮದುವೆಗೆ ಸಮಂತಾ ರೆಡಿ!? ಬಾಲಿವುಡ್ ನಟನಿಗೆ ಮನಸೋತ್ರಾ ಸ್ಯಾಮ್!?


ಸುಶಾಂತ್ 2020 ರಲ್ಲಿ ಮುಂಬೈನ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆಗ ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವರು ನಿತೇಶ್ ತಿವಾರಿ ನಿರ್ದೇಶನದ ಛಿಚೋರೆ (2019) ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್, ವರುಣ್ ಶರ್ಮಾ, ನವೀನ್, ತುಷಾರ್ ಪಾಂಡೆ, ಸಹರ್ಶ್ ಕುಮಾರ್ ಶುಕ್ಲಾ, ಶಿಶಿರ್ ಶರ್ಮಾ ಮತ್ತು ಮೊಹಮ್ಮದ್ ಸಮದ್ ನಟಿಸಿದ್ದರು.

top videos
    First published: