ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟು ನಿನ್ನೆಗೆ (ಜೂ.14) ಒಂದು ವರ್ಷ ಕಳೆದಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟನನ್ನು ಸ್ಮರಿಸಿದ್ದಾರೆ. ವರ್ಷ ಕಳೆದರೂ ಸುಶಾಂತ್ ಸಾವಿನ ಸುತ್ತ ಇನ್ನೂ ನಿಗೂಢತೆ ಮರೆಯಾಗಿಲ್ಲ. ಕಳೆದ ವರ್ಷ ಜೂ.14ರಂದು ಮುಂಬೈನ ಮಾಂಟ್ ಬ್ಲಾಂಕ್ ಅಪಾರ್ಟ್ಮೆಂಟ್ನ ಪ್ಲ್ಯಾನ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಮೃತದೇಹ ಸಿಕ್ಕಿತ್ತು. ತದನಂತರ ಪೊಲೀಸರು ತನಿಖೆ ಕೈಗೊಂಡು ಹಲವು ಬಾಲಿವುಡ್ ನಟನಟಿಯರನ್ನು ವಿಚಾರಣೆಗೆ ಒಳಪಡಿಸಿದ್ದರು. ನಟನ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಕ್ಯಾಂಪೇನ್ಗಳ ನಡೆದಿದ್ದವು.
ನಟ ಸುಶಾಂತ್ ಸಿಂಗ್ ಬದುಕಿದ್ದರೆ 2022ರ ಡಿಸೆಂಬರ್ವರೆಗೆ ಮಾಂಟ್ ಬ್ಲಾಂಕ್ ಅಪಾರ್ಟ್ಮೆಂಟ್ನ ಪ್ಲ್ಯಾನ್ ನೆಲೆಸಿರುತ್ತಿದ್ದರು. 2019ರಲ್ಲಿ 3 ವರ್ಷಗಳ ಕಾಲಕ್ಕೆ ಮನೆಯನ್ನು ಸುಶಾಂತ್ ಬಾಡಿಗೆಗೆ ಪಡೆದಿದ್ದರು. ಆದರೆ ಅಕಾಲಿ ಸಾವಿನಿಂದ ಒಡೆಯನಿಲ್ಲದೇ ಇಡೀ ಮನೆ ಬಿಕೋ ಎನ್ನುತ್ತಿತ್ತು. ಸುಶಾಂತ್ ಸಾವಿನ ಬಳಿಕ ಇಡೀ ಮನೆಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಸಾಕ್ಷ್ಯ ನಾಶ ಭೀತಿಯಲ್ಲಿ ಕೆಲವೊಂದಷ್ಟು ದಿನ ಮನೆಯೊಳಗೆ ಯಾರಿಗೂ ಪ್ರವೇಶವಿರಲಿಲ್ಲ. ಈಗ ಸುಶಾಂತ್ ಕುಟುಂಬಸ್ಥರು ಮನೆಯ ಬಾಡಿಗೆಯನ್ನು ಅಂತ್ಯಗೊಳಿಸಿದ್ದಾರೆ
ಸದ್ಯ ಸುಶಾಂತ್ ನೆಲೆಸಿದ್ದ, ಅವರ ಮೃತದೇಹ ದೊರೆತಿದ್ದ ಮನೆ ಖಾಲಿಯಾಗಿದೆ. ಮಾಲೀಕರು ಪ್ಲ್ಯಾಟ್ನ ಮತ್ತೆ ಬಾಡಿಗೆಗೆ ಕೊಡಲು ಮುಂದಾಗಿದ್ದಾರೆ. ಸುಶಾಂತ್ ಪ್ರತಿ ತಿಂಗಳು ಈ ಪ್ಲ್ಯಾಟ್ಗೆ 4.5 ಲಕ್ಷ ಬಾಡಿಗೆ ಕಟ್ಟುತ್ತಿದ್ದರು. ಆದರೆ ಈಗ ಮಾಲೀಕರು 4 ಲಕ್ಷಕ್ಕೆ ಬಾಡಿಗೆ ನೀಡಲು ಮುಂದಾಗಿದ್ದಾರೆ. ಬಾಡಿಕೆದಾರರು ಮನೆಯ ಬಗ್ಗೆ ವಿಚಾರಿಸಿ, ಸುಶಾಂತ್ ಸಿಂಗ್ ಈ ಮನೆಯಲ್ಲಿ ಹೇಗಿದ್ದರು ಎಂದು ತಿಳಿದುಕೊಳ್ಳಲು ಉತ್ಸಾಹ ತೋರುತ್ತಾರಂತೆ. ಆದರೆ ಎಲ್ಲವನ್ನೂ ತಿಳಿದುಕೊಂಡ ಬಳಿಕ ಯಾರೂ ಮನೆಗೆ ಬರುತ್ತಿಲ್ಲವಂತೆ.
ಇದನ್ನೂ ಓದಿ: Sanchari Vijay Mistake: ಕೊನೆ ಕ್ಷಣದಲ್ಲಿ ಸಂಚಾರಿ ವಿಜಯ್ ಅದೊಂದು ತಪ್ಪು ಮಾಡದಿದ್ದರೆ ಅನಾಹುತ ತಪ್ಪುತ್ತಿತ್ತು!
ಮನೆಯ ಬೆಡ್ ರೂಂನಲ್ಲೇ ಸುಶಾಂತ್ ಸಿಂಗ್ ಮೃತದೇಹ ಸಿಕ್ಕಿದ್ದರಿಂದ ಹಲವರು ಹೆದರುತ್ತಿದ್ದಾರಂತೆ. ಆದರೆ ನಟ ನೆಲೆಸಿದ್ದ ಮನೆಯನ್ನು ನೋಡಲು, ಆ ಬಗ್ಗೆ ತಿಳಿದುಕೊಳ್ಳಲು ಮಾತ್ರ ಇಷ್ಟಪಡುತ್ತಿದ್ದಾರಂತೆ. ಮನೆಯಿಂದಲೇ ಸಮುದ್ರ ಕಾಣುವ ಈ ಪ್ಲ್ಯಾಟ್ ಎಂತವರಿಗಾದರೂ ಇಷ್ಟವಾಗುತ್ತೆ. ಆದರೆ ಯಾರೊಬ್ಬರು ಬಾಡಿಗೆಗೆ ಬರದೇ ಇರುವುದು ಬೇಸರ ತರಿಸಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಮನೆಯನ್ನು ಸುಶಾಂತ್ ತಮಗೆ ಬೇಕಾದಂತೆ ಕಾಲಾತ್ಮಕವಾಗಿ ಇಂಟಿರಿಯರ್ ಡಿಸೈನ್ ಮಾಡಿಕೊಂಡಿದ್ದರು. ರೂಂ ಮೇಟ್ ಪಿಟಾನಿ ಹಾಗೂ ಗರ್ಲ್ಫ್ರೆಂಡ್ ರಿಯಾ ಚಕ್ರವರ್ತಿ ಜೊತೆ ಮನೆಯಲ್ಲಿ ನೆಲೆಸಿದ್ದರು. ಅಡುಗೆ ಮಾಡುವವರು, ಮನೆ ಕೆಲಸದವರು ಇವರೊಂದಿಗೆ ಇರುತ್ತಿದ್ದರಂತೆ. ಸುಶಾಂತ್ ಮೃತಪಟ್ಟ ವೇಳೆ ಮನೆಯಲ್ಲಿ ಇಬ್ಬರು ಕೆಲಸಗಾರರು ಇದ್ದರು. ಕೆಲ ದಿನಗಳ ಹಿಂದೆಯಷ್ಟೇ ಗರ್ಲ್ಫ್ರೆಂಡ್ ರಿಯಾ ಮನೆ ತೊರೆದಿದ್ದರು. ಸದ್ಯ ಈ ಮನೆ ಖಾಲಿಯಾಗಿದ್ದು, ಯಾರೂ ಬಾಡಿಗೆ ಬರಲು ಮುಂದಾಗುತ್ತಿಲ್ಲ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಮೂಢನಂಬಿಕೆಗಳನ್ನು ನಂಬುವವರು ಇರುವುದರಿಂದ ಮನೆ ಖಾಲಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ