Sushant Singh Rajput suicide: ಹೊರಬಿತ್ತು ಸುಶಾಂತ್​ ಸಿಂಗ್​ ಅಂತಿಮ ಮರಣೋತ್ತರ ಪರೀಕ್ಷಾ ವರದಿ; ವರದಿಯಲ್ಲೇನಿದೆ?

Sushant Singh Rajput: ಆತ್ಮಹ್ಯತೆ ಮೂಲಕ ಬದುಕು ಮುಗಿಸಿದ ಸುಶಾಂತ್​ ಸಿಂಗ್​ ದೇಹದಲ್ಲಿ ಯಾವುದೇ ಗುರುತುಗಳು ಅಥವಾ ಗಾಯಗಳು ಕಂಡುಬಂದಿಲ್ಲ. ಅವರ ಉಗುರುಗಳು ಸ್ವಚ್ಛವಾಗಿದ್ದವು. ಹಾಗಾಗಿ ಇದು ಆತ್ಮಹತ್ಯೆ ಎಂಬುದು ಸ್ಪಷ್ಟವಾಗಿದೆ.

ಸುಶಾಂತ್​ ಸಿಂಗ್​ ರಜಪೂತ್

ಸುಶಾಂತ್​ ಸಿಂಗ್​ ರಜಪೂತ್

  • Share this:
    ಬಾಲಿವುಡ್​ ಪ್ರತಿಭಾನ್ವಿತ ನಟ ಸುಶಾಂತ್​ ಸಿಂಗ್​ ರಜಪೂತ್​ ಜೂ. 14ರಂದು ತಮ್ಮ ಮುಂಬೈನಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವು ಬಾಲಿವುಡ್​ ಚಿತ್ರರಂಗಕ್ಕೆ, ಕಲಾವಿದರಿಗೆ ಹಾಗೂ ಆಭಿಮಾನಿಗಳಿಗೆ ದೊಡ್ಡ ಶಾಕ್​ ನೀಡಿತ್ತು. ಎಲ್ಲರಿಗೂ ಪ್ರೋತ್ಸಾಹ ನೀಡುತ್ತಿದ್ದ ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಸುಶಾಂತ್​ ಸಿಂಗ್​ ಮನೆಯವರು ಕೂಡ ಇದು ಆತ್ಯಹತ್ಯೆಯಲ್ಲ, ಕೊಲೆ ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಹೇಳಿದ್ದರು. ಇದೀಗ ಸುಶಾಂತ್​ ಸಿಂಗ್​ ಅವರ ಅಂತಿಮ ಮರಣೋತ್ತರ ಪರೀಕ್ಷೆ ವರದಿ ​ಹೊರಬಿದ್ದಿದೆ.

    ಸುಶಾಂತ್​ ಸಿಂಗ್​​ ಮರಣೋತ್ತರ ಪರೀಕ್ಷೆಯ ವರದಿಯನ್ನು ಪೋಲಿಸರು ಪ್ರಕಟಿಸಿದ್ದಾರೆ. ಸುಶಾಂತ್​ ನೇಣು ಹಾಕಿಕೊಂಡ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅವರ ದೇಹವನ್ನು ರಾಸಾಯನಿಕ ವಿಶ್ಲೇಷನೆಗೆ ಕಳುಹಿಸಲಾಗಿತ್ತು.  ತಾತ್ಕಾಲಿಕ ಮರಣೋತ್ತರ ಪರೀಕ್ಷೆಗೆ ಮೂವರು ವೈದ್ಯರು ಸಹಿ ಹಾಕಿದ್ದಾರೆ. ಅಂತಿಮ ವರದಿಯ ವಿವರವಾದ ವಿಶ್ಲೇಷನೆಗೆ ಐದು ವೈದ್ಯರು ಸಹಿಹಾಕಿದ್ದಾರೆ.

    ಆತ್ಮಹ್ಯತೆ ಮೂಲಕ ಬದುಕು ಮುಗಿಸಿದ ಸುಶಾಂತ್​ ಸಿಂಗ್​ ದೇಹದಲ್ಲಿ ಯಾವುದೇ ಗುರುತುಗಳು ಅಥವಾ ಗಾಯಗಳು ಕಂಡುಬಂದಿಲ್ಲ. ಅವರ ಉಗುರುಗಳು ಸ್ವಚ್ಛವಾಗಿದ್ದವು. ಹಾಗಾಗಿ ಇದು ಆತ್ಮಹತ್ಯೆ ಎಂಬುದು ಸ್ಪಷ್ಟವಾಗಿದೆ.

    ಸುಶಾಂತ್​ ಸಿಂಗ್​​


    ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ಈವರೆಗೆ ಒಟ್ಟು 23 ಜನರ ಹೇಳಿಕೆಯನ್ನು ದಾಖಲಿಸಲಾಗಿದೆ. ಅವರ ಚಾರ್ಟರ್ಡ್​​​​​ ಅಕೌಂಟೆಂಟ್​​​​​ ಸಂಜಯ್​​ ಶ್ರೀಧರ್​​ ಅವರನ್ನು ಈ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ. ಇದರ ಜೊತೆಗೆ ಸುಶಾಂತ್​ ಸಿಂಗ್​ ತಂದೆ, ಮೂವರು ಸಹೋದರಿಯರು, ಸ್ನೇಹಿತ ಸಿದ್ಧಾರ್ಥ್​​​​ ಪಿತಾನಿ, ಮನೆ ಅಡುಗೆ ಕೆಲಸ ಮಾಡುತ್ತಿದ್ದ ಕೇಶವ, ಮೊಹ್ಮಮದ್​ ಶೇಖ್​, ಶಕೀಲ್​  ಹುಸೇನ್​, ಬ್ಯುಸಿನೆಸ್​ ಮ್ಯಾನೇಜರ್​​ ಉದಯ್​​​ ಸಿಂಗ್​ ಗೌರಿ, ಸುಶಾಂತ್​ ಸಿಂಗ್​ ಮೊದಲ ಧಾರವಾಹಿಯ ನಿರ್ದೇಶಕ ಮತ್ತು ಮ್ಯಾನೇಜರ್​ರನ್ನು ಸಂಪರ್ಕಿಸಿ ವಿಚಾರಿಸಲಾಗಿದೆ. ಸುಶಾಂತ್ ಸಿಂಗ್​ ಮುಂಬೈನಲ್ಲಿರುವ ಮನೆಯ ಸಿಸಿ ಟಿವಿಯನ್ನು ಪರೀಕ್ಷಿಸಿದ್ದಾರೆ. ಆದರೆ ಇದು ಕೊಲೆಯಲ್ಲ ಆತ್ಮಹತ್ಯೆ ಎಂಬುದು ಧೃಢವಾಗಿದೆ.

    ಸುಶಾಂತ್​ ಸಿಂಗ್​​ ರಜಪೂತ್​​ ಅವರು ಯಶ್​ ರಾಜ್​​ ಫಿಲ್ಮ್​​​​ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ವೈಆರ್​ಎಫ್​​ ಸಂಸ್ಥೆ ಅವರ ಒಪ್ಪಂದದ ಪ್ರತಿಗಳನ್ನು ಬಾಂದ್ರಾ ಪೊಲೀಸರಿಗೆ ಪೊಲೀಸರು ಪರೀಕ್ಷಿಸಿದ್ದಾರೆ. 2012ರಲ್ಲಿ ಯಶ್​ ರಾಜ್​​ ಫಿಲ್ಮ್ ಜೊತೆಗೆ ಸುಶಾಂತ್​​ ಸಹಿ ಮಾಡಿಕೊಂಡಿದ್ದರು.

    ಈ ರೆಸ್ಟೋರೆಂಟ್​ ಮೆನುವಿನಲ್ಲಿ ಸಿಗೋದು ಕೋಬ್ರಾ ವೈನ್​, ಸ್ನೇಕ್ ಬಿರಿಯಾನಿ!

    ಗೋಲ್ಡನ್​ ಸ್ಟಾರ್​​ ಗಣೇಶ್​​​ ಹುಟ್ಟಹಬ್ಬಕ್ಕೆ ‘ಸಖತ್‘​ ಗಿಫ್ಟ್​​ ನೀಡಲು ಮುಂದಾದ ಸಿಂಪಲ್​ ಸುನಿ ತಂಡ
    First published: