Sushant Singh: ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಸತ್ಯ ಮುಚ್ಚಿಡುತ್ತಿದ್ದಾನಾ ದಿಶಾ ಪ್ರಿಯತಮ?

ದಿಶಾ ಸಾಲಿಯಾನ್ ತಮ್ಮ ಅಪಾರ್ಟ್ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಅವರ ಲಿವಿನ್ ಪಾರ್ಟ್ನರ್ ರೋಹನ್ ರೈ ಕೂಡ ಮನೆಯಲ್ಲೇ ಇದ್ದರು. ಆದರೂ ಅವರು ಕೆಳಗಿಳಿದು ಬಂದು ದಿಶಾ ಸಾಲಿಯಾನ್ ನೋಡಲು 20ರಿಂದ 25 ನಿಮಿಷಗಳು ಬೇಕಾಗಿತ್ತು.

ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

  • Share this:
ಬಾಲಿವುಡ್ ಸ್ಟಾರ್ ಸುಶಾಂತ್ ಸಿಂಗ್ ರಜಪುತ್ ಹಾಗೂ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಗಳಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಹೊಸ ಹೊಸ ಸಾಕ್ಷಿಗಳು ಬೆಳಕಿಗೆ ಬರುತ್ತಿರುವಂತೆಯೇ ಹೊಸ ಹೊಸ ಟರ್ನ್​ಗಳೂ ಸಿಗುತ್ತಿವೆ. ಜೂನ್ 8ರಂದು ದಿಶಾ ಸಾಲಿಯಾನ್ ಆತ್ಮಹತ್ಯೆಗೆ ಶರಣಾಗಿದ್ದರು. ಅದಾದ ಆರೇ ದಿನಗಳಲ್ಲಿ ಅರ್ಥಾತ್ ಜೂನ್ 14ರಂದು ಸುಶಾಂತ್ ಸಿಂಗ್ ರಜಪುತ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ಈ ಎರಡೂ ಸಾವುಗಳು ಆತ್ಮಹತ್ಯೆಯಲ್ಲ ಬದಲಾಗಿ, ಕೊಲೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟ ಭುಗಿಲೆದ್ದ ಕಾರಣ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಹಾಗೂ ಬಿಹಾರ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಸಿಬಿಐ ಕೂಡ ಇನ್ವೆಸ್ಟಿಗೇಷನ್ ಮಾಡುತ್ತಿದೆ.

ಈಗಾಗಲೇ ಸುಶಾಂತ್ ಸಿಂಗ್ ರಜಪುತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಜಾಲದ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಬಾಲಿವುಡ್ ಮಾತ್ರವಲ್ಲ ಸ್ಯಾಂಡಲ್​ವುಡ್​ನಲ್ಲೂ ನಾರ್ಕೋಟಿಕ್ಸ್ ಬ್ಯೂರೋ, ವಿಚಾರಣೆ ಹಾಗೂ ತನಿಖೆ ನಡೆಸುತ್ತಿದೆ.

ಹೊಸ ಕಾರು ಖರೀದಿಸಿದ ರಿಯಲ್ ಸ್ಟಾರ್: ಉಪ್ಪಿ ಗ್ಯಾರೇಜ್ ಸೇರಿತು ಬ್ಲ್ಯಾಕ್ ಬ್ಯೂಟಿ..!

ಜೊತೆಗೆ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌವಿಕ್​ನ ಅನ್ನು ಬಂಧಿಸಲಾಗಿದೆ. ಜೊತೆಗೆ ದಿಶಾ ಸಾಲಿಯಾನ್ ಮತ್ತು ಸುಶಾಂತ್ ಸಿಂಗ್ ಆತ್ಮಹತ್ಯೆಗಳ ನಡುವೆ ಏನೋ ಲಿಂಕ್ ಇದೆ ಎಂಬುದರ ಬಗ್ಗೆಯೂ ತನಿಖೆ ಚುರುಕುಗೊಂಡಿದೆ.

ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ಶಾಸಕ ನಿತೇಶ್ ನಾರಾಯಣ್ ರಾಣೆ, ಕೇಂದ್ರ ಗೃಹಮಂತ್ರಿ ಅಮಿತ್ ಶಾರವರಿಗೆ ಪತ್ರ ಬರೆದಿದ್ದಾರೆ. ಹಲವು ಅನುಮಾನಾಸ್ಪದ ವಿಷಯಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ, ತನಿಖೆ ದಿಶಾ ಮತ್ತು ಸುಶಾಂತ್ ಇಬ್ಬರ ಆತ್ಮಹತ್ಯೆಗಳ ನಡುವೆ ಏನೋ ಸಂಬಂಧವಿದೆ ಎಂಬ ಅನುಮಾನವನ್ನೂ ಹೊರಹಾಕಿದ್ದಾರೆ.

Hema Malini: ಬಾಲಿವುಡ್​ ಬಗ್ಗೆ ಟೀಕಿಸಿದರೆ ಸಹಿಸಲು ಅಸಾಧ್ಯ; ಪರೋಕ್ಷವಾಗಿ ಕಂಗನಾ ನಡೆ ಖಂಡಿಸಿದ ಹೇಮಾ ಮಾಲಿನಿ

ಹೌದು, ದಿಶಾ ಸಾಲಿಯಾನ್ ತಮ್ಮ ಅಪಾರ್ಟ್ಮೆಂಟ್ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಅವರ ಲಿವಿನ್ ಪಾರ್ಟ್ನರ್ ರೋಹನ್ ರೈ ಕೂಡ ಮನೆಯಲ್ಲೇ ಇದ್ದರು. ಆದರೂ ಅವರು ಕೆಳಗಿಳಿದು ಬಂದು ದಿಶಾ ಸಾಲಿಯಾನ್ ನೋಡಲು 20ರಿಂದ 25 ನಿಮಿಷಗಳು ಬೇಕಾಗಿತ್ತು. ಅಷ್ಟು ತಡವಾಗಿ ಬರಲು ಕಾರಣವೇನು? ಆದರೆ, ಇದುವರೆಗೂ ರೋಹನ್ಅನ್ನು ಮುಂಬೈ ಪೊಲೀಸರು ಯಾಕೆ ಪ್ರಶ್ನಿಸಿಲ್ಲ? ದಿಶಾ ಆತ್ಮಹತ್ಯೆಯಾದ ಬಳಿಕ ರೋಹನ್, ಮುಂಬೈನಿಂದ ಕಾಲ್ಕಿತ್ತಿರುವುದು ಯಾಕೆ? ಎಂದು ರಾಣೆ ಪ್ರಶ್ನಿಸಿದ್ದಾರೆ.

ಜೊತೆಗೆ ಯಾರೋ ಪ್ರಭಾವಿಗಳ ಭಯದಿಂದಾಗಿ ರೋಹನ್ ಈ ಬಗ್ಗೆ ಮಾತನಾಡುತ್ತಿಲ್ಲ, ಮುಂಬೈಗೆ ವಾಪಸ್ ಕೂಡ ಬರುತ್ತಿಲ್ಲ. ಹೀಗಾಗಿಯೇ ಆತನಿಗೆ ಸೆಕ್ಯುರಿಟಿ ನೀಡಬೇಕು, ಮುಂಬೈಗೆ ವಾಪಸ್ ಕರೆತಂದು, ಸಿಬಿಐನಿಂದ ವಿಚಾರಣೆಗೆ ಒಳಪಡಿಸಬೇಕು ಎಂದು ಶಾಸಕ ನಿತೇಶ್ ರಾಣೆ ಒತ್ತಾಯಿಸಿದ್ದಾರೆ. ಹಾಗಾದಲ್ಲಿ ಮಾತ್ರ ದಿಶಾ, ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಹಲವು ಸತ್ಯಗಳು ಹೊರಬರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
Published by:Vinay Bhat
First published: