HOME » NEWS » Entertainment » SUSHANT SINGH RAJPUT STARRER LAST MOVIE DIL BECHARA IS RELEASED AND HERE IS THE FANS REACTION AE

Dil Bechara: ರಿಲೀಸ್​ ಆಯ್ತು ಸುಶಾಂತ್​ ಸಿಂಗ್​ ಅಭಿನಯದ ಕೊನೆಯ ಸಿನಿಮಾ ದಿಲ್​ ಬೆಚಾರ: ಸಂಭ್ರಮದಲ್ಲಿ ಅಭಿಮಾನಿಗಳು..!

Sushant Singh Rajput-Dil Bechara Day: ಅಭಿಮಾನಿಗಳು ಸುಶಾಂತ್​ ಸಿಂಗ್​ ನಟನೆಯ ಈ ಚಿತ್ರವನ್ನು ದೊಡ್ಡ ಬ್ಲಾಕ್​ಬಸ್ಟರ್​ ಮಾಡಲು ಪಣ ತೊಟ್ಟಿದ್ದಾರೆ. ಅದ್ಕಕಾಗಿಯೇ ಸಿನಿಮಾ ಬಿಡುಗಡೆಯಾದ ದಿನವನ್ನು ದಿಲ್​ ಬೆಚಾರ​ ಡೇ ಎಂದು ಟ್ವಿಟರ್​ನಲ್ಲಿ ಹ್ಯಾಶ್​ಟ್ಯಾಗ್​ ಹಾಕಿ ಪೋಸ್ಟ್​ ಮಾಡುತ್ತಿದ್ದಾರೆ.

Anitha E | news18-kannada
Updated:July 24, 2020, 9:48 PM IST
Dil Bechara: ರಿಲೀಸ್​ ಆಯ್ತು ಸುಶಾಂತ್​ ಸಿಂಗ್​ ಅಭಿನಯದ ಕೊನೆಯ ಸಿನಿಮಾ ದಿಲ್​ ಬೆಚಾರ: ಸಂಭ್ರಮದಲ್ಲಿ ಅಭಿಮಾನಿಗಳು..!
ದಿಲ್​ ಬೆಚಾರ ಸಿನಿಮಾದಲ್ಲಿ ಸುಶಾಂತ್​ ಸಿಂಗ್​ ರಜಪೂತ್​
  • Share this:
ಸುಶಾಂತ್​ ಸಿಂಗ್​ ಅಭಿನಯದ ಕೊನೆಯ ಸಿನಿಮಾ 'ದಿಲ್ ಬೆಚಾರ' ರಿಲೀಸ್​ ಆಗಿದೆ. ಸುಶಾಂತ್​ ಅಭಿಮಾನಿಗಳು ಈ ಸಿನಿಮಾ ನೋಡಲು ಕಾತರರಾಗಿ ಕಾಯುತ್ತಿದ್ದರು. ಇಂದು ಸಂಜೆ 7.30ಕ್ಕೆ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆ ಮಾಡಲಾಗಿದೆ. 

ಈ ಸಿನಿಮಾದ  ರಿಲೀಸ್​ ಆಗುವ ಮುನ್ನ ಅಂದರೆ ಸಂಜೆಯಿಂದಲೇ ಅಭಿಮಾನಿಗಳು ಟ್ವಿಟರ್​ನಲ್ಲಿ ದಿಲ್​ ಬೆಚಾರ ಹಾಗೂ ಸುಶಾಂತ್ ಕುರಿತಾಗಿ ಟ್ವೀಟ್​ ಮಾಡಲು ಆರಂಭಿಸಿದ್ದರು. ಇನ್ನು ಈಗ ಸಿನಿಮಾ ನೋಡುತ್ತಿರುವವರು ತಮ್ಮ ಮೊಬೈಲ್​ ಹಾಗೂ ಲ್ಯಾಪ್​ಟಾಪ್​ನ ಫೋಟೋ ತೆಗೆದು ಪೋಸ್ಟ್​ ಮಾಡುತ್ತಿದ್ದಾರೆ.


ಅಭಿಮಾನಿಗಳು ಸುಶಾಂತ್​ ಸಿಂಗ್​ ನಟನೆಯ ಈ ಚಿತ್ರವನ್ನು ದೊಡ್ಡ ಬ್ಲಾಕ್​ಬಸ್ಟರ್​ ಮಾಡಲು ಪಣ ತೊಟ್ಟಿದ್ದಾರೆ. ಅದ್ಕಕಾಗಿಯೇ ಸಿನಿಮಾ ಬಿಡುಗಡೆಯಾದ ದಿನವನ್ನು ದಿಲ್​ ಬೆಚಾರ​ ಡೇ ಎಂದು ಟ್ವಿಟರ್​ನಲ್ಲಿ ಹ್ಯಾಶ್​ಟ್ಯಾಗ್​ ಹಾಕಿ ಪೋಸ್ಟ್​ ಮಾಡುತ್ತಿದ್ದಾರೆ.ಸುಶಾಂತ್ ಸಿಂಗ್​ ರಜಪೂತ್ ಅವರ ದಿಲ್​ ಬೆಚಾರ ಸಿನಿಮಾ ಕುರಿತಾಗಿ ಕಂಗನಾ ಸಹೋದರಿ ರಂಗೋಲಿ ಹಾಗೂ ಸುಶಾಂತ್​ ಅವರ ಗರ್ಲ್​ಫ್ರೆಂಡ್​ ರಿಯಾ ಚಕ್ರವರ್ತಿ ಪೋಸ್ಟ್​ ಮಾಡಿದ್ದಾರೆ.

#KanganaRanaut is so right here. #SushantSinghRajpoot murder has left a huge huge void in Indian cinema it will be very difficult to find a genius dude and a rare individual like him again.#DilBecharaDayhttps://t.co/6hWx8JV3dO pic.twitter.com/LSQCqFA9bkರಿಯಾ ಭಾವುಕರಾಗಿ ಪೋಸ್ಟ್​ ಮಾಡಿದ್ದು, 'ನನ್ನ ಕಣ ಕಣದಲ್ಲಿರುವ ಶಕ್ತಿಯನ್ನು ಒಟ್ಟುಗೂಡಿಸಿ, ನಿನ್ನ ಸಿನಿಮಾ ನೋಡುತ್ತೇನೆ. ನೀನು ನನ್ನೊಂದಿಗೆ ಇದ್ದೀಯಾ. ನಾನು ನಿನ್ನನ್ನು ಹಾಗೂ ನಿನ್ನ ಪ್ರೀತಿಯನ್ನು ಸಂಭ್ರಮಿಸುತ್ತೇನೆ. ನನ್ನ ಜೀವನದ ಹೀರೋ ನೀನು. ನೀನೂ ನಮ್ಮೊಂದಿಗೆ ಇದನ್ನು ನೋಡುತ್ತೀದಿಯಾ' ಎಂದು ಬರೆದಿದ್ದಾರೆ.

ಇದನ್ನೂ ಓದಿ: Sonu Sood-Warrior Aaji: ಹೊಟ್ಟೆಪಾಡಿಗಾಗಿ ರಸ್ತೆಗಿಳಿದ ವಾರಿಯರ್​ ಅಜ್ಜಿ: ನೆರವಿಗೆ ಮುಂದಾದ ಸೋನು ಸೂದ್-ರಿತೇಶ್​​..!
Published by: Anitha E
First published: July 24, 2020, 9:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories