ಸುಶಾಂತ್ ಸಿಂಗ್ ರಜಪೂತ್ ಸಾವಿನ ಆಘಾತದಿಂದ ಅತ್ತಿಗೆ ನಿಧನ!

ಸುಶಾಂತ್ ಸಿಂಗ್ ಸಾವಿನ ಆಘಾತದಿಂದ ಹೊರಬರಲಾಗದೆ ಬಿಹಾರದ ಪಾಟ್ನಾದಲ್ಲಿದ್ದ ಸುಶಾಂತ್ ಸಿಂಗ್ ಅವರ ಅಣ್ಣನ (ಕಸಿನ್) ಹೆಂಡತಿ ಸುಧಾ ದೇವಿ ನಿನ್ನೆ ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:June 16, 2020, 10:09 AM IST
ಸುಶಾಂತ್ ಸಿಂಗ್ ರಜಪೂತ್ ಸಾವಿನ ಆಘಾತದಿಂದ ಅತ್ತಿಗೆ ನಿಧನ!
ನಟ ಸುಶಾಂತ್ ಸಿಂಗ್ ರಜಪೂತ್
  • Share this:
ಕಳೆದ ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಎಲ್ಲರನ್ನೂ ಆಘಾತಕ್ಕೀಡುಮಾಡಿತ್ತು. ಕೇವಲ 34ನೇ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡ ಸುಶಾಂತ್ ಸಿಂಗ್ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಯಾರೂ ಊಹಿಸಿರಲಿಲ್ಲ. ಈ ಘಟನೆಯಿಂದಾಗಿ ಆತನ ಕುಟುಂಬಕ್ಕೆ ತೀರಾ ಆಘಾತವಾಗಿದ್ದು, ಈ ಆಘಾತವನ್ನು ಭರಿಸಲಾರದೆ ಸುಶಾಂತ್ ಸಿಂಗ್ ಅತ್ತಿಗೆ ಸಾವನ್ನಪ್ಪಿದ್ದಾರೆ.

'ಪವಿತ್ರ ರಿಶ್ತಾ' ಎಂಬ ಧಾರಾವಾಹಿಯಿಂದ ನಟನಾರಂಗಕ್ಕೆ ಬಂದ ಸುಶಾಂತ್ ಸಿಂಗ್ ರಜಪೂತ್ ಭಾನುವಾರ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. 34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗ್ಗೆ ಅವರ ಮನೆಯ ಕೆಲಸದಾಕೆ ಬಂದಾಗ ಈ ವಿಷಯ ಗೊತ್ತಾಗಿದೆ. ಬೆಡ್​ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ಕಳೆದ 6 ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸುಶಾಂತ್ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದರು. ಅದಾದ ಬಳಿಕ ಸುಶಾಂತ್ ಫೋನ್ ಕರೆಗಳು, ವೈಯಕ್ತಿಕ ಸಂಬಂಧಗಳ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.

ಇದನ್ನೂ ಓದಿ: 12 ಗಂಟೆ, 4 ಫೋನ್ ಕಾಲ್, ಬೀಗ ಹಾಕಿದ ರೂಂ; ನರಕ ಯಾತನೆಯಾಗಿತ್ತು ಸುಶಾಂತ್ ಕೊನೆಯ ಕ್ಷಣಗಳು

ಸುಶಾಂತ್ ಸಿಂಗ್ ಸಾವಿನ ಸುದ್ದಿ ತಿಳಿದು ಅವರ ಅಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಮಾತನಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅವರು ಇದೀಗ ಚೇತರಿಸಿಕೊಂಡಿದ್ದಾರೆ. ಆದರೆ, ಈ ಆಘಾತದಿಂದ ಹೊರಬರಲಾಗದೆ ಬಿಹಾರದ ಪಾಟ್ನಾದಲ್ಲಿದ್ದ ಸುಶಾಂತ್ ಸಿಂಗ್ ಅಣ್ಣನ (ಕಸಿನ್) ಹೆಂಡತಿ ಸುಧಾ ದೇವಿ ನಿನ್ನೆ ಸಾವನ್ನಪ್ಪಿದ್ದಾರೆ. ಸುಶಾಂತ್ ಸಾವಿನ ಸುದ್ದಿ ತಿಳಿದ ದಿನದಿಂದ ಅವರು ಅನ್ನ, ನೀರು ಸೇವಿಸಿರಲಿಲ್ಲ. ನಿನ್ನೆ ಮುಂಬೈನಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆಯುವಾಗಲೇ ಸುಧಾ ದೇವಿ ಕೊನೆಯುಸಿರೆಳೆದಿದ್ದಾರೆ.

ಕಿರುತೆರೆ ಮೂಲಕ ನಟನಾ ರಂಗಕ್ಕೆ ಬಂದ ಸುಶಾಂತ್ ಸಿಂಗ್ ರಜಪೂತ್ ಇದುವರೆಗೂ 11 ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್, ಸಿನಿಮಾ ತಾರೆಯರು, ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದರು. ಸುಶಾಂತ್ ಛಿಚ್ಚೋರೆ ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.
First published: June 16, 2020, 9:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading