Sushant Singh: ಸುಶಾಂತ್​ ಸಿಂಗ್​ ನಟನೆಯ ಕೊನೆಯ ಸಿನಿಮಾ ‘ದಿಲ್​ ಬೆಚಾರ‘ ಟ್ರೇಲರ್​ ಬಿಡುಗಡೆಗೆ ಡೇಟ್​ ಫಿಕ್ಸ್​​!

Dil Bechara: ಚಿತ್ರತಂಡ ‘ದಿಲ್​ ಬೆಚಾರ‘ ಸಿನಿಮಾವನ್ನು ಹಾಟ್​+ಡಿಸ್ನಿಯಲ್ಲಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಸಿನಿಮಾದ ಬಿಡುಗಡೆಗೆ ಬಾಲಿವುಡ್​ನ ಅನೇಕ ನಟ-ನಟಿಯರು ಸಾಥ್​ ಕೊಟ್ಟಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ‘ದಿಲ್​ ಬೆಚಾರ’ ಸಿನಿಮಾ ಪೋಸ್ಟರ್​ ಹಾಕುವ ಮೂಲಕ ಪ್ರಚಾರ​ ಮಾಡಿದ್ದಾರೆ.


Updated:July 5, 2020, 7:23 PM IST
Sushant Singh: ಸುಶಾಂತ್​ ಸಿಂಗ್​ ನಟನೆಯ ಕೊನೆಯ ಸಿನಿಮಾ ‘ದಿಲ್​ ಬೆಚಾರ‘ ಟ್ರೇಲರ್​ ಬಿಡುಗಡೆಗೆ ಡೇಟ್​ ಫಿಕ್ಸ್​​!
ದಿಲ್​ ಬೆಚಾರ
  • Share this:
ಬಾಲಿವುಡ್​ ನಟ ಸುಶಾಂತ್​ ಸಿಂಗ್​  ರಜಪೂತ್​ ಅವರ ಕೊನೆಯ ಸಿನಿಮಾ ‘ದಿಲ್​ ಬೆಚಾರ’.  ಈ ಸಿನಿಮಾ 2014ರಲ್ಲಿ ಹಾಲಿವುಡ್​ನಲ್ಲಿ ತೆರೆಕಂಡ ‘ದಿ ಫಾಲ್ಡ್​​ ಇನ್​ ಅವರ್​ ಸ್ಟಾರ್‘​ ಚಿತ್ರದ ರಿಮೇಕ್​. ಬಾಲಿವುಡ್​ನಲ್ಲಿ ಈ ಸಿನಿಮಾವನ್ನು ಮುಖೇಶ್​ ಚಾಬ್ರಾ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಮೇ 8 ರಂದು ಸಿನಿಮಾ ರಿಲೀಸ್​ ಮಾಡುವುದಾಗಿ ಚಿತ್ರತಂಡ ಚಿಂತನೆ ಕೂಡ ನಡೆಸಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಯಿತು. ಸುಶಾಂತ್​​ ಸಾವಿನ ನಂತರ ಚಿತ್ರತಂಡ ಒಟಿಟಿಯಲ್ಲಿ ಬಿಡುಗಡೆ ಮಾಡಲು ಪ್ಲಾನ್​ ಮಾಡಿಕೊಂಡಿದೆ. ಅದರಂತೆ ಈ ಸಿನಿಮಾ ಟ್ರೇಲರ್​ ಬಿಡುಗಡೆಗೆ ಸಿದ್ಧವಾಗಿದ್ದು, ನಾಳೆ (ಜೂನ್​ 6 ರಂದು) ಬಿಡುಗಡೆಯಾಗುತ್ತಿದೆ.

ಚಿತ್ರತಂಡ ‘ದಿಲ್​ ಬೆಚಾರ‘ ಸಿನಿಮಾವನ್ನು ಹಾಟ್​+ಡಿಸ್ನಿಯಲ್ಲಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಸಿನಿಮಾದ ಬಿಡುಗಡೆಗೆ ಬಾಲಿವುಡ್​ನ ಅನೇಕ ನಟ-ನಟಿಯರು ಸಾಥ್​ ಕೊಟ್ಟಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ‘ದಿಲ್​ ಬೆಚಾರ’ ಸಿನಿಮಾ ಪೋಸ್ಟರ್​ ಹಾಕುವ ಮೂಲಕ ಪ್ರಚಾರ​ ಮಾಡಿದ್ದಾರೆ.

ಇನ್ನು ‘ದಿಲ್​ ಬೆಚಾರ’ ಸಿನಿಮಾದಲ್ಲಿ ಸುಶಾಂತ್​ಗೆ ನಾಯಕಿಯಾಗಿ ಸಂಜನಾ ಸಂಘಿ ನಟಿಸುತ್ತಿದ್ದಾರೆ. ಆ ಮೂಲಕ ಬಾಲಿವುಡ್​ಗೆ ಮೊದಲ ಕಾಲಿಡುತ್ತಿದ್ದಾರೆ ಸಂಜನಾ. ಇನ್ನು ಈ ಸಿನಿಮಾದಲ್ಲಿ ನಟ ಸೈಫ್​ ಆಲಿ ಖಾನ್​ ಕೂಡ ನಟಿಸಿದ್ದಾರೆ.

 


ಇದೇ ತಿಂಗಳು ಸಿನಮಾ ಬಿಡುಗಡೆ;

ಸುಶಾಂತ್​ ಸಿಂಗ್​ ರಜಪೂತ್​​ ಜೂನ್​ 14 ರಂದು ತಮ್ಮ ಮುಂಬೈನಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದರು. ಅನೇಕ ಸಿನಿಮಾದಲ್ಲಿ ನಟಿಸಿದ್ದರು ಸುಶಾಂತ್​ ಅಭಿಮಾನಿಗಳಿಗೆ ತೀರಾ ಹತ್ತಿರವಾಗಿದ್ದರು. ಅವರ ನಟನೆಯ ಕೊನೆಯ ಸಿನಿಮಾ ‘ದಿಲ್​ ಬೆಚಾರ’. ಇದೀಗ ಈ ಸಿನಿಮಾವನ್ನು ಜುಲೈ 24 ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ. ಸುಶಾಂತ್​ ಸಿಂಗ್​ಗೆ ಗೌರವ ಸೂಚಿಸುವ ಸಲುವಾಗಿ ಉಚಿತವಾಗಿ ಸಿನಿಮಾ ವೀಕ್ಷಿಸುವ ಅವಕಾಶ ನೀಡಿದೆ.

PUBG: ಲಾಕ್​ಡೌನ್​ ವೇಳೆ ಆನ್​ಲೈನ್​ ಗೇಮ್​ ಪಬ್​ಜಿ ಗಳಿಸಿದ ಆದಾಯವೆಷ್ಟು ಗೊತ್ತಾ?

ಫೇಸ್​ಬುಕ್​ ಪಾಸ್​ವರ್ಡ್​ ಹ್ಯಾಕ್​; ಪ್ಲೇ ಸ್ಟೋರ್​ನಿಂದ 25 ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್!
Published by: Harshith AS
First published: July 5, 2020, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading