HOME » NEWS » Entertainment » SUSHANT SINGH RAJPUT GETS A ROAD NAMED AFTER HIM IN HIS HOMETOWN PURNE IN BIHAR HG

Sushant Singh Rajput: ರಸ್ತೆಯೊಂದಕ್ಕೆ ನಟ ಸುಶಾಂತ್​ ಸಿಂಗ್​ ರಜಪೂತ್​ ಹೆಸರಿಟ್ಟ ಜನರು!

Sushant Singh Rajput: ಸುಶಾಂತ್​ ಸಿಂಗ್​ ರಜಪೂತ್​ ಬಿಹಾರದ ಪೂರ್ನಿಯಾದವರು. ತಮ್ಮ ಊರಿನ ಬಹುಮುಖ ಪ್ರತಿಭೆ ಸುಶಾಂತ್​ ಸಿಂಗ್​ರನ್ನು ಕಳೆದುಕೊಂಡ ದುಃಖದಲ್ಲಿ ಅಲ್ಲಿನ ರಸ್ತೆಗೆ ಅವರನ್ನು ಹೆಸರನ್ನಿಡುವ ಮೂಲಕ ಜನರು ಗೌರವ ಸೂಚಿಸಿದ್ದಾರೆ. ಈ ಹಿಂದೆ ಫೋರ್ಡ್ ಕಂಪೆನಿ ಚೌಕ ಎಂದು ರಸ್ತೆಗೆ ಹೆಸರಿತ್ತು. ಇದೀಗ ಈ ರಸ್ತೆಗೆ ಸುಶಾಂತ್​ ಸಿಂಗ್ ರಜಪೂತ್​​​ ಎಂದು ಮರುನಾಮಕರಣ ಮಾಡಲಾಗಿದೆ.

news18-kannada
Updated:July 11, 2020, 8:33 PM IST
Sushant Singh Rajput: ರಸ್ತೆಯೊಂದಕ್ಕೆ ನಟ ಸುಶಾಂತ್​ ಸಿಂಗ್​ ರಜಪೂತ್​ ಹೆಸರಿಟ್ಟ ಜನರು!
ನಟ ಸುಶಾಂತ್​ ಸಿಂಗ್​ ರಜಪೂತ್
  • Share this:
ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​​​ ಜೂನ್​ 14ರಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು. ಇವರ ಸಾವು ಅಭಿಮಾನಿಗಳಿಗೆ ನೋವು ತರಿಸಿತ್ತು. ಎಲ್ಲರಿಗೂ ಧೈರ್ಯ ತುಂಬುತ್ತಿದ್ದ ನಟ ಇದ್ದಕ್ಕಿದ್ದಂತೆಯೇ ಆತ್ಯಹತ್ಯೆ ಮಾಡಿಕೊಂಡಿರುವ ವಿಚಾರ ಅಭಿಮಾನಿಗಳಿಗೆ ನುಂಗಲಾದರ ತುತ್ತಾಯಿತು. ಇದೀಗ ಸುಶಾಂತ್​ ಸಿಂಗ್​ ಅವರು ಸದಾ ನೆನಪಿನಲ್ಲಿರುವಂತೆ ಮಾಡಲು ಬಿಹಾರದ ಜನರು ಅಲ್ಲಿನ ರಸ್ತೆಯೊಂದಕ್ಕೆಅವರ ಹೆಸರನ್ನಿಟ್ಟಿದ್ದಾರೆ.

ಸುಶಾಂತ್​ ಸಿಂಗ್​ ರಜಪೂತ್​ ಬಿಹಾರದ ಪೂರ್ನಿಯಾದವರು. ತಮ್ಮ ಊರಿನ ಬಹುಮುಖ ಪ್ರತಿಭೆ ಸುಶಾಂತ್​ ಸಿಂಗ್​ರನ್ನು ಕಳೆದುಕೊಂಡ ದುಃಖದಲ್ಲಿ ಅಲ್ಲಿನ ರಸ್ತೆಗೆ ಅವರನ್ನು ಹೆಸರನ್ನಿಡುವ ಮೂಲಕ ಜನರು ಗೌರವ ಸೂಚಿಸಿದ್ದಾರೆ. ಈ ಹಿಂದೆ ಫೋರ್ಡ್ ಕಂಪೆನಿ ಚೌಕ ಎಂದು ರಸ್ತೆಗೆ ಹೆಸರಿತ್ತು. ಇದೀಗ ಈ ರಸ್ತೆಗೆ ಸುಶಾಂತ್​ ಸಿಂಗ್ ರಜಪೂತ್​​​ ಎಂದು ಮರುನಾಮಕರಣ ಮಾಡಲಾಗಿದೆ.

ಅಭಿಮಾನಿಗಳು ರಸ್ತೆಗೆ ಸುಶಾಂತ್​ ಸಿಂಗ್​ ಎಂದು ಮರುನಾಮಕರಣಗೊಂಡ ನಂತರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದಾರೆ. ಇನ್ನು ಕೆಲವರು ವಿಡಿಯೋ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದಾರೆ.
ಸುಶಾಂತ್​ ಸಿಂಗ್​ ನಟನೆಯ ‘ದಿಲ್​ ಬೆಚಾರ’ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. ಜುಲೈ 10 ಈ ಸಿನಿಮಾದ ಟ್ರೈಟಲ್​ ಟ್ರಾಕ್​ ಕೂಡ ರಿಲೀಸ್​ ಆಗಿತ್ತು. ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ಬಂದಿತ್ತು. ಸುಶಾಂತ್​ ಸಿಂಗ್​ ನಟನೆಯ ಕೊನೆಯ ಸಿನಿಮಾ ‘ದಿಲ್​ ಬೇಚಾರ’. ಈ ಸಿನಿಮಾ 2014ರಲ್ಲಿ ಹಾಲಿವುಡ್​ನಲ್ಲಿ ತೆರೆಕಂಡ ‘ದಿ ಫಾಲ್ಡ್​​ ಇನ್​ ಅವರ್​ ಸ್ಟಾರ್‘​ ಚಿತ್ರದ ರಿಮೇಕ್​. ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಹಿಂದಿಯಲ್ಲಿ ಮುಖೇಶ್​ ಛಾಬ್ರಾ ಅವರು ಸುಶಾಂತ್​ ಸಿಂಗ್​ ಮತ್ತು ಸಂಜನಾ ಸಾಂಘಿಯನ್ನು ಹಾಕಿಕೊಂಡು ಈ ಸಿನಿಮಾಗೆ ನಿರ್ದೆಶನ ಮಾಡಿದ್ದಾರೆ.  ಸಂಜನಾ ಸಾಂಘಿ ‘ದಿಲ್​ ಬೆಚಾರ’ ಸಿನಿಮಾದ ಮೂಲಕ ಬಾಲಿವುಡ್​ಗೆ ಮೊದಲ ಪಾದಾರ್ಪಾಣೆ ಮಾಡುತ್ತಿದ್ದಾರೆ. ನಟ ಸೈಫ್​ ಆಲಿ ಖಾನ್ ಕೂಡ ಇದರಲ್ಲಿ ನಟಿಸಿದ್ದಾರೆ.

ಚಿತ್ರತಂಡ ‘ದಿಲ್​ ಬೆಚಾರ‘ ಸಿನಿಮಾವನ್ನು ಹಾಟ್​+ಡಿಸ್ನಿಯಲ್ಲಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಈ ಸಿನಿಮಾದ ಬಿಡುಗಡೆಗೆ ಬಾಲಿವುಡ್​ನ ಅನೇಕ ನಟ-ನಟಿಯರು ಸಾಥ್​ ಕೊಟ್ಟಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ‘ದಿಲ್​ ಬೆಚಾರ’ ಸಿನಿಮಾ ಪೋಸ್ಟರ್​ ಹಾಕುವ ಮೂಲಕ ಪ್ರಚಾರ​ ಮಾಡುತ್ತಿದ್ದಾರೆ.

ಜುಲೈ 24 ರಂದು ‘ದಿಲ್​ ಬೆಚಾರ’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ. ಸುಶಾಂತ್​ ಸಿಂಗ್​ಗೆ ಗೌರವ ಸೂಚಿಸುವ ಸಲುವಾಗಿ ಉಚಿತವಾಗಿ ಸಿನಿಮಾ ವೀಕ್ಷಿಸುವ ಅವಕಾಶ ನೀಡಿದೆ.

ಜೂಟಾಟ ಆಡುತ್ತಿದ್ದಾರೆ ಅನಿತಾ ಭಟ್!; ಗ್ಲಾಮರಸ್​ ರೋಲ್​ನಲ್ಲಿ ಸೈಕೋ ಸುಂದರಿ

Amazon: ಉದ್ಯೋಗಿಗಳಿಗೆ ಟಿಕ್​ಟಾಕ್ ಬಳಸದಂತೆ ಸೂಚನೆ ನೀಡಿದ ಅಮೆಜಾನ್; ಕೆಲವೇ ಗಂಟೆಗಳಲ್ಲಿ ನಿರ್ಧಾರ ಹಿಂತೆಗೆತ!

Joker Malware: 11 ಆ್ಯಪ್​ಗಳನ್ನ ಕಿತ್ತೆಸೆದ ಗೂಗಲ್​​ ಪ್ಲೇ ಸ್ಟೋರ್​; ನಿಮ್ಮ ಸ್ಮಾರ್ಟ್​ಫೋನ್​ನಲ್ಲೂ ಇದೆಯಾ?
Published by: Harshith AS
First published: July 11, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories