HOME » NEWS » Entertainment » SUSHANT SINGH RAJPUT FATHER KK SINGH PHOTO FROM HOSPITAL GOES VIRAL FANS WISH HIM A SPEEDY RECOVERY HG

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಶಾಂತ್​ ಸಿಂಗ್​ ತಂದೆ!

ತಂದೆಯ ಆರೋಗ್ಯವನ್ನು ಸುಶಾಂತ್​ ಸಿಂಗ್​ ಸಹೋದರಿಯಾದ ಪ್ರಿಯಾಂಕಾ ಮತ್ತು ಮೀತು ಸಿಂಗ್​​ ನೋಡಿಕೊಳ್ಳುತ್ತಿದ್ದಾರೆ.

news18-kannada
Updated:December 20, 2020, 8:13 PM IST
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಶಾಂತ್​ ಸಿಂಗ್​ ತಂದೆ!
ತಂದೆ ಕೆ.ಕೆ ಸಿಂಗ್- ಸುಶಾಂತ್​ ಸಿಂಗ್ ರಜಪೂತ್
  • Share this:
ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​​ ಸಾವನ್ನಪ್ಪಿ ಆರು​ ತಿಂಗಳಾಗಿದ್ದು, ಆತ್ಮಹತ್ಯೆ ಮೂಲಕ ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಅನೇಕರ ಮಾತಿನಂತೆ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ. ಯಾರೊ ಕೊಲೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸಿ ಸುಶಾಂತ್​ ಸಾವನ್ನಪ್ಪಿದ್ದಾರೆ ಎಂಬುದನ್ನು ಮನದಟ್ಟುಮಾಡಿದ್ದಾರೆ.

ಆದರೀಗ ಮಗನ ಸಾವಿನಿಂದ ನೊಂದ ಅವರ ತಂದೆ ಕೆ.ಕೆ ಸಿಂಗ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಸಲುತ್ತಿದ್ದ ಅವರು ಹರಿಯಾಣದ ಫರಿದಾಬಾದ್​​ನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನು ತಂದೆಯ ಆರೋಗ್ಯವನ್ನು ಸುಶಾಂತ್​ ಸಿಂಗ್​ ಸಹೋದರಿಯಾದ ಪ್ರಿಯಾಂಕಾ ಮತ್ತು ಮೀತು ಸಿಂಗ್​​ ನೋಡಿಕೊಳ್ಳುತ್ತಿದ್ದಾರೆ.

ಕೆ.ಕೆ ಸಿಂಗ್​ ಆಸ್ಪತ್ರೆಗೆ ದಾಖಲಾಗುತ್ತಿರುವ ವಿಚಾರ ವೈರಲ್​ ಆದಂತೆ ಅಭಿಮಾನಿಗಳು ಬೇಗ ಹುಷಾರಾಗಿ ಎಂದು ಹಾರೈಸುತ್ತಿದ್ದಾರೆ. ಬೇಗನೆ ಚೇತರಿಸಿಕೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕುತ್ತಿದ್ದಾರೆ. ಸದ್ಯ ಮಾಹಿತಿಯ ಪ್ರಕಾರ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಸುಶಾಂತ್​ ಸಿಂಗ್​ ಸಾವು ಅನೇಕ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಮುಂಬೈ ಅಪಾರ್ಟ್​ಮೆಂಟ್​ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್​ ಸಿಂಗ್​ ದೇಹ ಪತ್ತೆಯಾಗಿತ್ತು. ಇವರ ಸಾವಿನ ನಂತರ ಬಾಲಿವುಡ್​ ಡ್ರಗ್ಸ್​​ ಪ್ರಕರಣ ತೆರೆದುಕೊಂಡಿತು.
Published by: Harshith AS
First published: December 20, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories