news18-kannada Updated:August 27, 2020, 7:59 AM IST
ಸುಶಾಂತ್ ಸಿಂಗ್ ರಜಪೂತ್-ರಿಯಾ
ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಬೇರೆ ಬೇರೆ ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚರ್ಕವರ್ತಿ ನಟನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಈಗ ರಿಯಾ ಬ್ಯಾನ್ ಮಾಡಲಾಗಿರುವ ಡ್ರಗ್ಸ್ಗಳನ್ನು ತೆಗೆದುಕೊಳ್ಳುತ್ತಿದ್ದರೇ ಎನ್ನುವ ಅನುಮಾನಗಳು ಮೂಡಿವೆ.
ಸುಶಾಂತ್ ಸಿಂಗ್ ಮೃತಪಡಲು ಖಿನ್ನತೆಯೇ ಕಾರಣ ಎನ್ನಲಾಗಿತ್ತು. ಇದರ ಜಾಡು ಹಿಡಿದು ಹೋದಾಗ ಬಾಲಿವುಡ್ನ ದಿಗ್ಗಜ್ಜರು ಸುಶಾಂತ್ಗೆ ಸಿನಿಮಾ ಆಫರ್ಗಳು ಬರದಂತೆ ಮಾಡಿದ್ದರು ಎನ್ನುವ ಮಾಹಿತಿ ಹೊರ ಬಿದ್ದಿತ್ತು. ಇನ್ನು, ಆತ್ಮಹತ್ಯೆ ಪ್ರಕರಣದಲ್ಲಿ ರಿಯಾ ಹಸ್ತಕ್ಷೇಪ ಕೂಡ ಇದೆ ಎನ್ನಲಾಗಿತ್ತು. ಈ ವಿಚಾರ ಚರ್ಚೆಯಲ್ಲಿರುವಾಗಲೇ ದೊಡ್ಡ ಮೊತ್ತದ ಹಣ ಸುಶಾಂತ್ ಖಾತಯಿಂದ ರಿಯಾ ಖಾತೆಗೆ ವರ್ಗಾವಣೆ ಆಗಿದೆ ಎಂದು ಸುಶಾಂತ್ ತಂದೆ ದೂರಿದ್ದರು. ಈ ದೂರಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದೂರು ದಾಖಲು ಮಾಡಿಕೊಂಡಿದ್ದರು.
ಕಳೆದ ಕೆಲ ದಿನಗಳಿಂದ ರಿಯಾ ಹಾಗೂ ಅವರ ಕುಟುಂಬವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೆಲ ವಾಟ್ಸ್ಆಪ್ ಮೆಸೇಜ್ಗಳನ್ನು ಡಿಲೀಟ್ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಡ್ರಗ್ ಡೀಲರ್ಗಳಿಗೆ ಕಳುಹಿಸಲಾದ ಮೆಸೇಜ್ ಎಂದು ಹೇಳಲಾಗಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ನಡೆಸುವಂತೆ ಇಡಿ ಮಾದಕವಸ್ತು ನಿಯಂತ್ರಣ ದಳಕ್ಕೆ (ಎನ್ಸಿಬಿ) ಪತ್ರ ಬರೆದಿತ್ತು. ಅಧಿಕೃತವಾಗಿ ಪತ್ರ ದೊರೆತ ನಂತರದಲ್ಲಿ ರಿಯಾ ವಿರುದ್ಧ ಎನ್ಸಿಬಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಿಕೊಂಡಿದೆ.
ಇದನ್ನೂ ಓದಿ: SPB Health Update : ಎಸ್ ಬಿಪಿ ಆರೋಗ್ಯದಲ್ಲಿ ಚೇತರಿಕೆ ; ಆಸ್ಪತ್ರೆಯಿಂದ ಪ್ರಕಟಣೆ
ಇನ್ನು ರಿಯಾಪರ ವಕೀಲರು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ರಿಯಾ ಜೀವನದಲ್ಲಿ ಎಂದಿಗೂ ಡ್ರಗ್ಸ್ ತೆಗೆದುಕೊಂಡವರಲ್ಲ. ಈಗ ಹರಡುತ್ತಿರುವ ಸುದ್ದು ಸುಳ್ಳು. ರಿಯಾ ರಕ್ತ ಪರೀಕ್ಷೆಗೂ ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಸುಶಾಂತ್ ಸಿಂಗ್ ರಜಪೂತ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸದ್ಯ, ಸಿಬಿಐ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಡ್ರಗ್ಸ್ ವಿಚಾರವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಿಬಿಐಗೂ ಪತ್ರ ಬರೆದಿದ್ದಾರೆ.
Published by:
Rajesh Duggumane
First published:
August 27, 2020, 7:59 AM IST