HOME » NEWS » Entertainment » SUSHANT SINGH RAJPUT DEATH CASE EXCLUSIVE DON CHHOTA SHAKEEL DENIED ANY UNDERWORLD CONNECTIONS WITH RHEA SAYS BOLLYWOOD AE

Chhota Shakeel Exclusive: ರಿಯಾಗೆ ಭೂಗತ ಜಗತ್ತಿನ ಜೊತೆಗೆ ನಂಟಿರುವ ಕುರಿತು ಮಾತನಾಡಿರುವ ಛೋಟಾ ಶಕೀಲ್​ ..!

Chhota Shakeel Exclusive: ನ್ಯೂಸ್​ 18 ಇಂಡಿಯಾ ಎಕ್ಸ್​ಕ್ಲೂಸಿವ್​ ಮಾತುಕತೆಯಲ್ಲಿ ಭೂಗತಲೋಕದ ದೊರೆ ಛೋಟಾ ಶಕೀಲ್​ ಸಾಕಷ್ಟು ಮಾಹಿತಿ ನೀಡಿದ್ದಾರೆ. ರಿಯಾಗೆ ಭೂಗತ ಲೋಕದ ಜೊತೆ ನಂಟಿರಬಹುದು ಎನ್ನಲಾಗುತ್ತಿರುವ ಕುರಿತಾಗಿಯೂ ಮಾತನಾಡಿದ್ದಾರೆ ಛೋಟಾ ಶಕೀಲ್​.

Anitha E | news18-kannada
Updated:August 28, 2020, 10:51 AM IST
Chhota Shakeel Exclusive: ರಿಯಾಗೆ ಭೂಗತ ಜಗತ್ತಿನ ಜೊತೆಗೆ ನಂಟಿರುವ ಕುರಿತು ಮಾತನಾಡಿರುವ ಛೋಟಾ ಶಕೀಲ್​ ..!
ಸುಶಾಂತ್​ ಹಾಗೂ ರಿಯಾ ಚಕ್ರವರ್ತಿ
  • Share this:
ಆನಂದ್​ ತಿವಾರಿ,

ಸುಶಾಂತ್​ ಸಿಂಗ್​ ರಜಪೂತ್ ಅವರ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿಬಿಐ ತನಿಖೆ ನಡೆಸುತ್ತಿದ್ದು, ರಿಯಾ ಚಕ್ರವರ್ತಿ ಹಾಗೂ ಸುಶಾಂತ್ ಅವರ ಸ್ನೇಹಿತರು ಎನ್ನಲಾಗುತ್ತಿರುವವ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ ರಿಯಾಗೆ ಭೂಗತಲೋಕದ ಜೊತೆ ಹಾಗೂ ಡ್ರಗ್​ ಡೀಲರ್ಸ್​ ಜೊತೆ ಲಿಂಕ್​ ಇರುವ ಬಗ್ಗೆ ವಿಷಯಗಳು ಹರಿದಾಡುತ್ತಿವೆ. 

ನ್ಯೂಸ್​ 18 ಇಂಡಿಯಾ ಎಕ್ಸ್​ಕ್ಲೂಸಿವ್​ ಮಾತುಕತೆಯಲ್ಲಿ ಭೂಗತಲೋಕದ ದೊರೆ ಛೋಟಾ ಶಕೀಲ್​ ಸಾಕಷ್ಟು ಮಾಹಿತಿ ನೀಡಿದ್ದಾರೆ. ರಿಯಾಗೆ ಭೂಗತಲೋಕದ ಜೊತೆ ನಂಟಿರಬಹುದು ಎನ್ನಲಾಗುತ್ತಿರುವ ಕುರಿತಾಗಿಯೂ ಮಾತನಾಡಿದ್ದಾರೆ ಛೋಟಾ ಶಕೀಲ್​.

Sushant Singh Rajput Death Case: NCB Files Criminal Case Against Rhea Chakraborty,
ಸುಶಾಂತ್​ ಸಿಂಗ್​ ರಜಪೂತ್​-ರಿಯಾ


ಈಗಲೂ ಸಹ ಬಾಲಿವುಡ್​ ಸಿನಿಮಾಗಳ ಮೇಲೆ ಭೂಗತಲೋಕದ ಹಿಡಿತ ಇದೆ. ಬಿ-ಟೌನ್​ ಸಿನಿಮಾಗಳಲ್ಲಿ ಈಗಲೂ ನಾವು ಹಣ  ಹೂಡುತ್ತೇವೆ. ಆದರೆ ರಿಯಾಗೆ ಭೂಗತಲೋಕದ ಜೊತೆ ನಂಟಿದೆ ಎಂದು ಹೇಳಲಾಗುತ್ತಿರುವ ವಿಷಯವನ್ನು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ:ಮದರ್​ ಇಂಡಿಯಾಗೆ ಹುಟ್ಟುಹಬ್ಬದ ಶುಭ ಕೋರಿದ ದರ್ಶನ್​..!

ಆದರೆ, ಸುಶಾಂತ್​ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐಗೆ, ರಿಯಾ ಚಕ್ರವರ್ತಿ ಅವರಿಗೆ ಭೂಗತಲೋಕದೊಂದಿಗೆ ನಂಟಿರುವ ಬಗ್ಗೆ ಸಾಕ್ಷಿ ಸಿಕ್ಕಿದೆ ಎನ್ನಲಾಗುತ್ತಿದೆ. ಸಿಬಿಐ ಸುಶಾಂತ್​ ಸಾವಿನ ಕುರಿತಾಗಿ ಸಾಕಷ್ಟು ಮಂದಿಯ ವಿಚಾರಣೆ ನಡೆಸುತ್ತಿದ್ದು, ಬೇಗನೆ ಸತ್ಯ ಎಲ್ಲರ ಮುಂದೆ ಬರಲಿದೆ ಎಂದು ಛೋಟಾ ಶಕೀಲ್​ ಹೇಳಿದ್ದಾರೆ.

ಸುಶಾಂತ್​ ಪ್ರಕರಣದಲ್ಲಿ ಈಗಾಗಲೇ ಕೇಳಿ ಬರುತ್ತಿರುವ ಹೆಸರು ಗೌರವ್​ ಆರ್ಯ. ಗೌರವ್​ ಆರ್ಯ​ ಅವರಿಗೆ ಅಂಡರ್​ವರ್ಲ್ಡ್​ ಜೊತೆ ಲಿಂಕ್​ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತಾಗಿ ನ್ಯೂಸ್​ 18 ಇಂಡಿಯಾ ಜೊತೆ ಮಾತನಾಡಿರುವ ಡಾನ್​ ಛೋಟಾ ಶಕೀಲ್​, ಗೌರವ್​ ಆರ್ಯ ಹೆಸರು ಕೇಳಿಯೇ ಇಲ್ಲ. ರಿಯಾ ಹಾಗೂ ಗೌರವ್​ ಆರ್ಯ ಅವರಿಗೆ ಭೂಗತಲೋಕದ ಜೊತೆ ನಂಟಿದೆ ಎಂದು ಹೇಳಲಾಗುತ್ತಿರುವುದೆಲ್ಲ ಕಟ್ಟುಕತೆ ಎಂದು ಛೋಟಾ ಶಕೀಲ್​ ಸ್ಪಷ್ಟಪಡಿಸಿದ್ದಾರೆ.
Published by: Anitha E
First published: August 28, 2020, 10:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories