HOME » NEWS » Entertainment » SUSHANT SINGH RAJPUT CASE NO PROOF OF MURDER YET SAYS CBI SOURCE RMD

ಸುಶಾಂತ್​ ಸಿಂಗ್ ಸಾವನ್ನು​ ಕೊಲೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ; ಸಿಬಿಐ ಮೂಲಗಳಿಂದ ಮಾಹಿತಿ

ಸುಶಾಂತ್​ ಸಿಂಗ್​ ಜೂನ್​ 14ರಂದು ಮೃತಪಟ್ಟಿದ್ದರು. ಅವರು ಮೃತಪಟ್ಟ ನಂತರದಲ್ಲಿ ಅನೇಕರು ಇದು ಕೊಲೆ ಎಂದು ಬಣ್ಣಿಸಿದ್ದರು.  ಇದೇ ವೇಳೆ ಸುಶಾಂತ್​ ಮಾಜಿ ಪ್ರೇಯಸಿ ರಿಯಾ ಹೆಸರು ಕೂಡ ಥಳಕು ಹಾಕಿಕೊಂಡಿತ್ತು.

news18-kannada
Updated:September 2, 2020, 2:07 PM IST
ಸುಶಾಂತ್​ ಸಿಂಗ್ ಸಾವನ್ನು​ ಕೊಲೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ; ಸಿಬಿಐ ಮೂಲಗಳಿಂದ ಮಾಹಿತಿ
ಸುಶಾಂತ್​ ಸಿಂಗ್​
  • Share this:
ಮುಂಬೈ (ಸೆಪ್ಟೆಂಬರ್ 2): ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡು ಎರಡುವರೆ ತಿಂಗಳೇ ಕಳೆದಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಕೆಲವರ ವಾದ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಗಳು ಕೇಳಿ ಬಂದಿತ್ತು. ಅಂತೆಯೇ ಸುಪ್ರೀಂಕೋರ್ಟ್​ ಆದೇಶದಂತೆ ಪ್ರಕರಣವನ್ನು ಮುಂಬೈ ಪೊಲೀಸರು ಕೇಂದ್ರ ತನಿಖಾ ದಳಕ್ಕೆ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಕೆಲ ದಿನಗಳಿಂದ ಪ್ರಕರಣವನ್ನು ಸಿಬಿಐ ವಿಚಾರ ಮಾಡುತ್ತಿದೆ. ಆದರೆ, ಇಲ್ಲಿವರೆಗಿನ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಿಚಾರಗಳು ಬೆಳಕಿಗೆ ಬಂದಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸುಶಾಂತ್​ ಸಿಂಗ್​ ಜೂನ್​ 14ರಂದು ಮೃತಪಟ್ಟಿದ್ದರು. ಅವರು ಮೃತಪಟ್ಟ ನಂತರದಲ್ಲಿ ಅನೇಕರು ಇದು ಕೊಲೆ ಎಂದು ಬಣ್ಣಿಸಿದ್ದರು.  ಇದೇ ವೇಳೆ ಸುಶಾಂತ್​ ಮಾಜಿ ಪ್ರೇಯಸಿ ರಿಯಾ ಹೆಸರು ಕೂಡ ಥಳಕು ಹಾಕಿಕೊಂಡಿತ್ತು. ಈ ಎಲ್ಲ ಕಾರಣಕ್ಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು.

ಸುಶಾಂತ್​ ಸಿಂಗ್​ ಸಾವಿನ ಪ್ರಕರಣದಲ್ಲಿ ಕೇವಲ ಕೊಲೆ ಮಾತ್ರವಲ್ಲದೆ ಸಿಬಿಐ ಎಲ್ಲ ಆಯಾಮಗಳಲ್ಲೂ ತನಿಖೆಯನ್ನು ಆರಂಭಿಸಿದೆ. ಈ ಮೂಲಕ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದೆ. ಮೂಲಗಳು ಹೇಳುವ ಪ್ರಕಾರ, ಸುಶಾಂತ್​ ಹತ್ಯೆಗೆ ಒಳಗಾಗಿದ್ದಾರೆ ಎನ್ನುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.


ಸುಶಾಂತ್​ ಸಿಂಗ್​ ಪ್ರಕರಣವನ್ನು ಈ ಮೊದಲು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದರು.
Published by: Rajesh Duggumane
First published: September 2, 2020, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories