• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sushant Singh Rajput: ಸುಶಾಂತ್‌ ಸಿಂಗ್ ಸಾವನ್ನಪ್ಪಿ 1 ವರ್ಷ ಕಳೆದರೂ ಮುಗಿದಿಲ್ಲ CBI ತನಿಖೆ; ನಿಗೂಢವಾಗಿದೆ ಸಾವಿನ ರಹಸ್ಯ!

Sushant Singh Rajput: ಸುಶಾಂತ್‌ ಸಿಂಗ್ ಸಾವನ್ನಪ್ಪಿ 1 ವರ್ಷ ಕಳೆದರೂ ಮುಗಿದಿಲ್ಲ CBI ತನಿಖೆ; ನಿಗೂಢವಾಗಿದೆ ಸಾವಿನ ರಹಸ್ಯ!

ಸುಶಾಂತ್ ಸಿಂಗ್ ರಜಪೂತ್

ಸುಶಾಂತ್ ಸಿಂಗ್ ರಜಪೂತ್

Sushant Singh Death Case: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಒಂದು ವರ್ಷವೇ ಕಳೆದರೂ ಅವರ ಸಾವಿನ ರಹಸ್ಯ ಬಗೆಹರಿದಿಲ್ಲ. ಸಿಬಿಐ ತನಿಖೆ ನಡೆಸುತ್ತಿದ್ದರೂ ಅದು ಕೊಲೆಯಾ? ಆತ್ಮಹತ್ಯೆಯಾ? ಎಂಬ ಗೊಂದಲ ಇನ್ನೂ ಹಾಗೇ ಉಳಿದಿದೆ.

  • Share this:

ಮುಂಬೈ (ಜೂನ್ 14): ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೀಡಾಗಿ ಇಂದಿಗೆ ಒಂದು ವರ್ಷವಾಗಿದೆ. ಜೂನ್ 14,2020 ರಂದು ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಳೆದ ವರ್ಷ ಬಿಹಾರ ಪೊಲೀಸರು ದಾಖಲಿಸಿದ್ದ ಕೊಲೆ ಪ್ರಕರಣವನ್ನು ವಹಿಸಿಕೊಂಡ ಸಿಬಿಐ ಇದುವರೆಗೆ ತನ್ನ ತನಿಖೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಹಾರ ಪೊಲೀಸರು ಪ್ರಕರಣವನ್ನು ವಹಿಸಿಕೊಂಡ ಕೂಡಲೇ ಸಿಬಿಐ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದರೂ, ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ. ನಟನ ಒಳಾಂಗ ಮತ್ತು ಶವಪರೀಕ್ಷೆಯ ವರದಿಗಳನ್ನು ಸಂಗ್ರಹಿಸಿದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ವೈದ್ಯರ ಸಮಿತಿಯು ಅಕ್ಟೋಬರ್‌ನಲ್ಲಿ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ, ಅವರು ಕೊಲೆಯಾಗಿಲ್ಲ ಎಂದು ಕೇಂದ್ರ ಸಂಸ್ಥೆಗೆ ಮಾಹಿತಿ ನೀಡಿದ್ದರು.


ನಿಖರವಾಗಿ ಒಂದು ವರ್ಷದ ಹಿಂದೆ ಜೂನ್ 14 ರಂದು ರಜಪೂತ್ ಅವರ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯ ಬಾಂದ್ರಾ ಪೊಲೀಸರು ಆಕಸ್ಮಿಕ ಸಾವಿನ ವರದಿಯನ್ನು (ಎಡಿಆರ್) ಲಗತ್ತಿಸಿ, ಚಲನಚಿತ್ರ ತಾರೆಯರು ಮತ್ತು ನಿರ್ಮಾಪಕರು ಸೇರಿದಂತೆ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದ್ದರು. ಮರಣೋತ್ತರ ವರದಿಯು ಸಹ ಆತ್ಮಹತ್ಯೆಯ ಬಗ್ಗೆ ಸೂಚಿಸಿತ್ತು.

ಆದರೆ, ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ನಟನ ಮರಣದ ಒಂದು ತಿಂಗಳ ನಂತರ, ಸುಶಾಂತ್​ ಸಿಂಗ್​ನನ್ನು ಹತ್ಯೆಗೈದ ಬಗ್ಗೆ ಹಲವಾರು ಸಿದ್ಧಾಂತಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಆರಂಭವಾದವು. ಕಳೆದ ವರ್ಷ ಜೂನ್ 8 ರಂದು ನಿಧನರಾದ ನಟ ಮತ್ತು ಅವರ ಮಾಜಿ ಸಹಾಯಕಿ ದಿಶಾ ಸಾಲಿಯನ್ ಅವರ ಸಾವಿಗೆ ಸಂಬಂಧವಿದೆ ಮತ್ತು ಇವರಿಬ್ಬರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಯಿತು.


ಇದನ್ನೂ ಓದಿ: Sushanth Singh: ಸುಶಾಂತ್ ಸಿಂಗ್​ ರಜಪೂತ್​ ಮೊದಲ ವರ್ಷದ ಪುಣ್ಯ ಸ್ಮರಣೆ: ನಟನನ್ನು ಸ್ಮರಿಸಿದ ಅಭಿಮಾನಿಗಳು-ಸೆಲೆಬ್ರಿಟಿಗಳು


ಅಂತಿಮವಾಗಿ, ರಜಪೂತರ ತಂದೆಯ ಹೇಳಿಕೆಯ ಆಧಾರದ ಮೇಲೆ, ಬಿಹಾರ ಪೊಲೀಸರು ರಜಪೂತರ ಗೆಳತಿ ರಿಯಾ ಚಕ್ರವರ್ತಿ, ಅವರ ಕುಟುಂಬ ಸದಸ್ಯರು ಮತ್ತು ರಜಪೂತ್ ಅವರ ನಿವಾಸದಲ್ಲಿ ಕೆಲಸ ಮಾಡಲು ಸಹಾಯ ಮಾಡುವವರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ನಂತರ ಸಿಬಿಐ ಕೊಲೆ ಪ್ರಕರಣವನ್ನು ವಹಿಸಿಕೊಂಡು ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವಾರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದೆ.


ಆತ್ಮಹತ್ಯೆಯಿಂದಾಗಿ ಸಾವು ಸಂಭವಿಸಿದೆ ಎಂದು ಏಮ್ಸ್ ವರದಿ ತಿಳಿಸಿದ ನಂತರ ಸಿಬಿಐ ತನಿಖೆ ಮಕಾಡೆ ಮಲಗಿಕೊಂಡಿತು. ಆದರೆ, ಮತ್ತೊಂದು ಕೇಂದ್ರ ಸಂಸ್ಥೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ರಿಯಾ ಚಕ್ರವರ್ತಿಯ ಫೋನ್‌ನಿಂದ ಮರುಪಡೆಯಲಾದ ಚಾಟ್‌ಗಳ ಆಧಾರದ ಮೇಲೆ,ಆಕೆ, ಆಕೆಯ ಸಹೋದರ ಹಾಗೂ ಇತರರ ವಿರುದ್ಧ ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ಗೆ ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು.


ಇದನ್ನೂ ಓದಿ: Sanchari Vijay Passes Away: ಹೋಟೆಲ್​ ಕೆಲಸದಿಂದ ರಾಷ್ಟ್ರ ಪ್ರಶಸ್ತಿವರೆಗೆ!; ಸಂಚಾರಿ ವಿಜಯ್ ಸಿನಿ ಪಯಣ ಹೀಗಿತ್ತು...

ಈ ಪ್ರಕರಣದ ಮೂಲಕ, ಎನ್‌ಸಿಬಿ ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಸೇವನೆಯ ಬಗ್ಗೆ ತನಿಖೆ ಚುರುಕುಗೊಳಿಸಿತು. ಮತ್ತು ದೀಪಿಕಾ ಪಡುಕೋಣೆಯಂತಹ ಟಾಪ್‌ ನಟ - ನಟಿಯರನ್ನು ಪ್ರಶ್ನೆ ಮಾಡಲು ಕಚೇರಿಗೆ ಕರೆದಿತ್ತು. ಅಂತಿಮವಾಗಿ, ಎನ್‌ಸಿಬಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರನನ್ನು ಇತರರೊಂದಿಗೆ ಬಂಧಿಸಿ ಪ್ರಕರಣದಲ್ಲಿ 33 ಜನರ ವಿರುದ್ಧ ಈ ವರ್ಷ ಚಾರ್ಜ್‌ಶೀಟ್ ದಾಖಲಿಸಿತ್ತು. ಎನ್‌ಸಿಬಿ ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದೆ.


"ಸಿಬಿಐ ಪ್ರಕರಣದ ಬಗ್ಗೆ ಯಾವ ಮಾಹಿತಿ ಗೊತ್ತಾಗದಿದ್ದರೂ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಹಲವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ" ಎಂದು ಮೂಲವೊಂದು ತಿಳಿಸಿದೆ. ಇತ್ತೀಚೆಗೆ, ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ರಜಪೂತಿನ ಫ್ಲಾಟ್‌ಮೇಟ್ ಸಿದ್ಧಾರ್ಥ್ ಪಿಥಾನಿಯನ್ನು ಕೇಂದ್ರ ಸಂಸ್ಥೆ ಬಂಧಿಸಿತ್ತು.

ಇನ್ನೊಂದೆಡೆ, ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಯ ಸ್ಥಿತಿಯನ್ನು ಸಿಬಿಐ ಒದಗಿಸುವಂತೆ ಕೋರಿ ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್‌ ಈ ಪ್ರಕರಣವನ್ನು ಪುರಸ್ಕಾರ ಮಾಡಲಿಲ್ಲ. ಅಲ್ಲದೆ, ಅರ್ಜಿದಾರರಿಗೆ ಹೈಕೋರ್ಟ್‌ಗೆ ಹೋಗುವಂತೆಯೂ ಸುಪ್ರೀಂಕೋರ್ಟ್‌ ಸೂಚನೆ ನೀಡಿತು.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು