HOME » NEWS » Entertainment » SUSHANT RAJPUT SUICIDE CASE BIHAR COURT BINS PLEA AGAINST SALMAN KHAN KARAN JOHAR AND EKTA KAPOOR AE

ಸುಶಾಂತ್​ ಆತ್ಮಹತ್ಯೆ ಪ್ರಕರಣ: ಕರಣ್​ ಜೋಹರ್, ಏಕ್ತಾ ಕಪೂರ್​, ಸಲ್ಮಾನ್​ ಖಾನ್​ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಿಹಾರದ ಕೋರ್ಟ್​..!

Sushant Rajput Suicide Case: ಸುಶಾಂತ್ ಸಾವಿನ ಪ್ರಕರಣಕ್ಕೆ ಕುರಿತಂತೆ ಕರಣ್ ಜೋಹರ್, ಸಲ್ಮಾನ್​ ಖಾನ್​, ಏಕ್ತಾ ಕಪೂರ್​, ಸಂಜಯ್​ ಲೀಲಾ ಬನ್ಸಾಲಿ ಅವರ ವಿರುದ್ಧ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಬಿಹಾರದ ವಕೀಲರಾದ ಸುಧೀರ್​ ಕುಮಾರ್​ ಓಝಾ ಪ್ರಕರಣ ದಾಖಲಿಸಿದ್ದರು.

Anitha E | news18-kannada
Updated:July 9, 2020, 1:36 PM IST
ಸುಶಾಂತ್​ ಆತ್ಮಹತ್ಯೆ ಪ್ರಕರಣ: ಕರಣ್​ ಜೋಹರ್, ಏಕ್ತಾ ಕಪೂರ್​, ಸಲ್ಮಾನ್​ ಖಾನ್​ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಿಹಾರದ ಕೋರ್ಟ್​..!
ಸುಶಾಂತ್​, ಸಲ್ಮಾನ್​ ಖಾನ್​ ಹಾಗೂ ಕರಣ್ ಜೋಹರ್
  • Share this:
ಸುಶಾಂತ್ ಸಿಂಗ್​ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿ-ಟೌನ್​ನ ದಿಗ್ಗಜರ ವಿರುದ್ಧ ನೆಟ್ಟಿಗರು ತಿರುಗಿ ಬಿದ್ದಿದರು. ಸ್ವಜನಪಕ್ಷಪಾತ ಹಾಗೂ ಹೊರಗಿನಿಂದ ಬಂದವರು ಎಂದು ನಿರ್ಲಕ್ಷಿಸಿ, ಸುಶಾಂತ್​ ಕೈಯಲ್ಲಿದ್ದ ಸಿನಿಮಾಗಳನ್ನು ಕಸಿದುಕೊಂಡು, ಸುಶಾಂತ್ ಸಾವಿಗೆ ಪರೋಕ್ಷವಾಗಿ ಪ್ರಚೋದನೆ ನೀಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. 

ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್, ಸಲ್ಮಾನ್​ ಖಾನ್​, ಏಕ್ತಾ ಕಪೂರ್​, ಸಂಜಯ್​ ಲೀಲಾ ಬನ್ಸಾಲಿ ಅವರ ವಿರುದ್ಧ ಮುಜಾಫರ್​ಪುರ್​ ಕೋರ್ಟ್​ನಲ್ಲಿ ಬಿಹಾರದ ವಕೀಲರಾದ ಸುಧೀರ್​ ಕುಮಾರ್​ ಓಝಾ ಪ್ರಕರಣ ದಾಖಲಿಸಿದ್ದರು.

Sushant Rajput Suicide Case Bihar Court Bins Plea Against Salman Khan Karan Johar and Ekta Kapoor
ಕರಣ್​ ಜೋಹರ್ ಹಾಗೂ ಸಲ್ಮಾನ್ ಖಾನ್​


ಈ ಅರ್ಜಿಯ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್​ ಕೋರ್ಟ್, ಈ ಪ್ರಕರಣ ನ್ಯಾಯಾಲಯದ ಸುಪರ್ದಿಗೆ ಬರುವುದಿಲ್ಲ ಎಂದು ತಳ್ಳಿ ಹಾಕಿದೆ. ಸದ್ಯಕ್ಕೆ ಕರಣ್​ ಜೋಹರ್​, ಸಲ್ಮಾನ್​ ಖಾನ್, ಸಂಜಯ್​ ಲೀಲಾ ಬನ್ಸಾಲಿ ಹಾಗೂ ಏಕ್ತಾ ಕಪೂರ್ ನಿರಾಳರಾಗಿದ್ದಾರೆ.

ಇದನ್ನೂ ಓದಿ: ತನ್ನ ಫೋಟೋಶೂಟ್​ ಅನ್ನು ತಾನೇ ಶೂಟ್ ಮಾಡಿದ ಬಹುಮುಖ ಪ್ರತಿಭೆ ಶ್ರುತಿ ಹಾಸನ್​..!

ಸುಧೀರ್ ಕುಮಾರ್ ಅವರು ಈ ಪ್ರಕರಣ ದಾಖಲಿಸಿದಾಗ ಏಕ್ತಾ ಕಪೂರ್​ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಸುಶಾಂತ್ ಅವರನ್ನು ಬಣ್ಣದ ಲೋಕಕ್ಕೆ ಧಾರಾವಾಹಿಯ ಮೂಲಕ ಪರಿಚಯಿಸಿದ್ದೇ ನಾನು. ಮೊದಲ ಬ್ರೇಕ್​ ಕೊಟ್ಟ ನನ್ನ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ನೊಂದು ಪೋಸ್ಟ್​ ಮಾಡಿದ್ದರು.

Jagdeep Passes Away: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯದ ಹೊಳೆ ಹರಿಸಿದ್ದ ನಟ ಇನ್ನಿಲ್ಲ..!

 

ಇದನ್ನೂ ಓದಿ: Susheel Gowda Suicide: ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್​: ಭಾವುಕರಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ದುನಿಯಾ ವಿಜಿ..!
Published by: Anitha E
First published: July 9, 2020, 1:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories