Casting Couch: ಈ ನಟಿಗೆ ನಿನ್ನ ಸೊಂಟ, ಎದೆ ಸೈಜ್ ಎಷ್ಟಿದೆ ಅಂತ​ ಕೇಳಿದ್ರಂತೆ ಸೌತ್​ ಡೈರೆಕ್ಟರ್ಸ್​!

ಸೌತ್​ ಇಂಡಿಯನ್​ ಇಂಡಸ್ಟ್ರಿಯಿಂದ ನನಗೆ ಸಾಕಷ್ಟು ಕಾಸ್ಟಿಂಗ್​ ಕೌಚ್​ ಅನುಭವಗಳು ಆಗಿದೆ ಎಂದು ಸುರ್ವೀನ್​ ಚಾವ್ಲಾ ಆರೋಪಿಸಿದ್ದಾರೆ. ಮೊದಲ ಸಿನಿಮಾ ಮಾತುಕತೆ ವೇಳೆ ಸುರ್ವೀನ್​ ದೇಹ(Body)ದ ಬಗ್ಗೆ ಚರ್ಚೆ ಮಾಡಲಾಗಿತ್ತಂತೆ.

ನಟಿ ಸುರ್ವೀನ್​ ಚಾವ್ಲಾ

ನಟಿ ಸುರ್ವೀನ್​ ಚಾವ್ಲಾ

  • Share this:
ಸಿನಿಮಾ ರಂಗದಲ್ಲಿ ಮೊದಲಿನಿಂದಲೂ ಕಾಸ್ಟಿಂಗ್​ ಕೌಚ್ (Casting Couch)​ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಕಾಸ್ಟಿಂಗ್​ ಕೌಚ್ ಆರೋಪ ಮಾಡಿರುವ ನಟಿಯರ ದೊಡ್ಡ ಪಟ್ಟಿಯ ಇದೆ. ಸಿನಿಮಾದಲ್ಲಿ ನಟಿಸಲು ಚಾನ್ಸ್(Chance)​ ಸಿಗಬೇಕು ಎಂದರೆ, ನಿರ್ಮಾಪಕರು (Producers), ನಿರ್ದೇದಶಕರು (Directors) ಸಹಕರಿಸುವಂತೆ ಕೇಳುತ್ತಾರೆ ಅಂತ ಹಲವು ನಟಿಯರು ಆರೋಪಿಸಿದ್ದಾರೆ. ಇದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಅಲ್ಲ, ಕೆಲ ನಟರಿಗೆ ನಿರ್ದೇಶಕಿ, ನಿರ್ಮಾಪಕಿಯಿಂದ ಈ ರೀತಿಯ ಡಿಮ್ಯಾಂಡ್​ (Demand) ಮಾಡಿರುವ ಆರೋಪಗಳು ಕೇಳಿಬಂದಿವೆ. ಬಾಲಿವುಡ್​ನಲ್ಲಿ ಸದಾ ಈ ಕಾಸ್ಟಿಂಗ್​ ಕೌಚ್​ ಸದ್ದು ಮಾಡುತ್ತಿರುತ್ತೆ. ಆದರೆ, ನಟಿ ಸುರ್ವೀನ್​ ಚಾವ್ಲಾ (Surveen Chawla) ಇದೀಗ ಕೊಟ್ಟಿರುವ ಹೇಳಿಕೆಯೊಂದು ಸಾಕಷ್ಟು ವೈರಲ್​ ಆಗುತ್ತಿದೆ. ದಕ್ಷಿಣ ಭಾರತ ಚಿತ್ರರಂಗ (South Indian Film Industry)ದಲ್ಲೂ ಕಾಸ್ಟಿಂಗ್​ ಕೌಚ್​ ನಡೆಯುತ್ತಾ ಎಂಬ ಚರ್ಚೆಗಳು ಶುರುವಾಗಿದೆ. ಸೌತ್​ ಇಂಡಿಯನ್​ ಇಂಡಸ್ಟ್ರಿಯಿಂದ ನನಗೆ ಸಾಕಷ್ಟು ಕಾಸ್ಟಿಂಗ್​ ಕೌಚ್​ ಅನುಭವಗಳು ಆಗಿದೆ ಎಂದು ಸುರ್ವೀನ್​ ಚಾವ್ಲಾ ಆರೋಪಿಸಿದ್ದಾರೆ. ಮೊದಲ ಸಿನಿಮಾ ಮಾತುಕತೆ ವೇಳೆ ಸುರ್ವೀನ್​ ದೇಹ (Body)ದ ಬಗ್ಗೆ ಚರ್ಚೆ ಮಾಡಲಾಗಿತ್ತಂತೆ. ಆಗ ಸುರ್ವೀನ್​ 56 ಕೆಜೆ ತೂಕವಿದ್ದರಂತೆ. ಹೀಗೆ ಇದ್ದರೆ ನಿಮಗೆ ಪಾತ್ರಗಳ ಅವಕಾಶ ಸಿಗುವುದಿಲ್ಲ ಎಂದು ಹೇಳಿದ್ದರೆಂದು ಸುರ್ವೀನ್​ ಚಾವ್ಲಾ ಹೇಳಿದ್ದಾರೆ.

ಸುರ್ವೀನ್​ ಚಾವ್ಲಾ 2003ರಲ್ಲಿ ‘ಕಹಿನ್​ ತೊ ಹೋಗಾ’ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರಯ. ಇದಾದ ಬಳಿಕ 2004ರಲ್ಲಿ ‘ಕಸೌತಿ ಜಿಂದಗಿ ಕೇ’ ಹಾಗೂ 2006ರಲ್ಲಿ ‘ಕಾಜ್ಮಲ್​’ನಲ್ಲಿ ಕಾಣಿಸಿಕೊಂಡಿದ್ದರು. 2008ರಲ್ಲಿ ಡ್ಯಾನ್ಸ್​ ರಿಯಾಲಿಟಿ ಶೋ ಏಕ್​ ಕಿಲಾಡಿ ಏಕ್​ ಹಸೀನಾದಲ್ಲಿ ಕಾಣಿಸಿಕೊಂಡರು, ಇದಾದ ಬಳಿಕ ‘ಕಾಮಿಡಿ ಸರ್ಕಸ್​ ಕೆ ಸೂಪರ್’​ಸ್ಟಾರ್​ ಕಾರ್ಯಕ್ರಮವನ್ನು ಹೋಸ್ಟ್ ಆಗಿ ನಡೆಸಿಕೊಟ್ಟಿದ್ದರು. ಹಲವಾರು ಸಿನಿಮಾಗಳಲ್ಲೂ ಸುರ್ವೀನ್​ ಚಾವ್ಲಾ ನಟಿಸಿದ್ದಾರೆ.

ಸೊಂಟ, ಎದೆ ಸೈಜ್ ಕೇಳಿದ್ರಂತೆ ನಿರ್ದೇಶಕರು

ಇತ್ತೀಚೆಗೆ ಆರ್​ಜೆ ಸಿದ್ಧಾಥ್​ ಕಣ್ಣನ್​ ಅವರೊಂದಿಗೆ ಸಂದರ್ಶನದಲ್ಲಿ ಸುರ್ವೀನ್​ ಚಾವ್ಲಾ ಭಾಗಿಯಾಗಿದ್ದರು. ಇದೇ ವೇಳೆ ನಿಮಗೆ ಎಂದಾದರೂ ಕಾಸ್ಟಿಂಗ್​ ಕೌಚ್​ ಅನುಭವ ಆಗಿದೆಯಾ? ನಿಮ್ಮ ದೇಹದ ಬಗ್ಗೆ ಮಾತನಾಡಿದ್ದಾರಾ? ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸುರ್ವೀನ್​ ಮುಂಬೈನಲ್ಲಿ ಮೊದಲಸ ಸಿನಿಮಾ ಆಡಿಷನ್​ಗೆ ಹೋಗಿದ್ದೆ. ಅಲ್ಲಿಗೆ ಬಂದಿದ್ದ ಎಲ್ಲ ಮಹಿಳೆಯರಿಗೂ ಅವರ ಸೊಂಟ ಹಾಗೂ ಎದೆ ಸೈಜ್​ ಕೇಳುತ್ತಿದ್ದರು. ನನಗೂ ಕೇಳಿದರೂ ಎಂದು ಸುರ್ವೀನ್​ ಚಾವ್ಲಾ ಉತ್ತರಿಸಿದ್ದಾರೆ. ನೀವು ಇದೇ ತೂಕ ಇದ್ದರೆ ನಿಮಗೆ ಕಂಡಿತ ಚಾನ್ಸ್​ ಸಿಗುವುದು ಕಷ್ಟ ಎಂದು ಹೇಳಿದ್ದರು ಅಂತ ಅವರು ಹೇಳಿದ್ದಾರೆ.

ಇದನ್ನು ಓದಿ : ಮಾಡರ್ನ್ ಲುಕ್‍ನಲ್ಲಿ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ನಟಿ ರಶ್ಮಿಕಾ ಮಂದಣ್ಣಪರಮೇಶಿ ಪಾನವಾಲ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ!

ಕನ್ನಡ ಸಿನಿಮಾ ಮೂಲಕವೇ ಸುರ್ವೀನ್​ ಚಾವ್ಲಾ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದರು. ಕಿರುತೆರೆಯಲ್ಲಿ ಮಿಂಚಿದ್ದ ಸುರ್ವೀನ್​ ಅವರಿಗೆ ಸಿನಿಮಾದಲ್ಲಿ ನಟಿಸಿಸುವ ಅವಕಾಶಗಳು ಸಿಕ್ಕಿರಲಿಲ್ಲ. ಸೌತ್​ ಇಂಡಿಯಾ ಸಿನಿಮಾ ಮಾಡಲು ಆಸೆ ಹೊಂದಿದ್ದರು. ಹೀಗಾಗಿ ಎಲ್ಲ ಆಡಿಷನ್​ಗಳಿಗೆ ಸುರ್ವೀನ್​ ಚಾವ್ಲಾ ತೆರಳುತ್ತಿದ್ದರು. ಈ ವೇಳೆ ಎಲ್ಲರೂ ಈಕೆಯ ಸೊಂಟ ಹಾಗೂ ಎದೆ ಸೈಜ್​ ಕೇಳುತ್ತಿದ್ದರು. ಇದು ಯಾಕೆ ಎಂದು ನನಗೆ ತಿಳಿಯಲಿಲ್ಲ ಎಂದು ಸುರ್ವೀನ್​ ಚಾವ್ಲಾ ಹೇಳಿದ್ದಾರೆ.

ಇದನ್ನು ಓದಿ : ಬ್ಯೂಟಿ ಉದ್ಯಮಕ್ಕೆ ಕಾಲಿಟ್ಟ ನಯನತಾರಾ: ನಿಮ್ಮ ತುಟಿ ಕಾಂತಿ ಹೆಚ್ಚಿಸ್ತಾರೆ ಲೇಡಿ ಸೂಪರ್​ಸ್ಟಾರ್​!

ಇದಾದ ಬಳಿಕ ಹೇಟ್ ಸ್ಟೋರಿ 2 (2014), ಅಗ್ಲಿ (2013), ಮತ್ತು ಪಾರ್ಚೆಡ್ (2015) ನಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. 2018 ರಲ್ಲಿ, ಅವರು ವೆಬ್ ಸರಣಿ ಹಕ್ ಸೆ ಮತ್ತು ಸೇಕ್ರೆಡ್ ಗೇಮ್ಸ್‌ನಲ್ಲಿ ಕಾಣಿಸಿಕೊಂಡರು. ತಮಿಳು ನಟ ಮಾಧವನ್​ ಜೊತೆ ಸುರ್ವೀನ್​ ನಟಿಸಿರುವ ಡಿಕೌಪ್ಲ್ಡ್ ವೆಬ್​ ಸೀರೀಸ್​ ಡಿಸೆಂಬರ್​ 17ರಂದು ರಿಲೀಸ್​ ಆಗಲಿದೆ.
Published by:Vasudeva M
First published: