Surprise Kannada Movie| ದಸರಾಗೆ Surprise ಕೊಟ್ಟ ಸರ್ಪ್ರೈಸ್ ಚಿತ್ರ ತಂಡ; ಹೊಸ ಪೋಸ್ಟರ್​ ರಿಲೀಸ್!

ಸರ್ಪ್ರೈಸ್ ಅನ್ನೋ ವಿಭಿನ್ನ ರೀತಿಯ ಟೈಟಲ್ ನೊಂದಿಗೆ ಚಿತ್ರ ತಂಡ ಮ್ಯಾಜಿಕಲ್ ರಿಯಲಿಸಂ ಕಥೆ ಹೇಳಲು ಹೊರಟಿದೆ. ' ಸರ್ಪ್ರೈಸ್ ' ಶೀರ್ಷಿಕೆಯೇ ಹೇಳುವಂತೆ ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿರುವ ಚಿತ್ರ.

ಸರ್ಪ್ರೈಸ್ ಚಿತ್ರದ ಪೋಸ್ಟರ್.

ಸರ್ಪ್ರೈಸ್ ಚಿತ್ರದ ಪೋಸ್ಟರ್.

  • Share this:
    ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಭಿನ್ನ-ವಿಭಿನ್ನ ರೀತಿಯ ಕಥಾ ಹಂದರ ಮತ್ತು ಟೈಟಲ್​ಗಳಿರುವ ಸಿನಿಮಾಗಳ ಸಂಖ್ಯೆ ಅಧಿಕವಾಗುತ್ತಿದೆ. ಅಲ್ಲದೆ, ಈ ಪೈಕಿ ಅನೇಕ ಹೊಸ ಚಿತ್ರಗಳು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದು, ಯಶಸ್ವಿಯೂ ಆಗಿದೆ. ಎಂದಿನ ಮಾಮೂಲಿ ಟೆಂಪ್ಲೆಟ್​ ಚಿತ್ರಗಳಿಗಿಂತ ವಿಭಿನ್ನ ಚಿತ್ರಗಳನ್ನು ನೋಡಲು ಕನ್ನಡ ಸಿನಿಮಾ ಪ್ರೇಕ್ಷಕ ಉತ್ಸುಕನಾಗಿದ್ದಾನೆ. ಇದೇ ಕಾರಣಕ್ಕೆ ಈಗ ಸ್ಯಾಂಡಲ್​ವುಡ್​ನಲ್ಲಿ (Sandalwood) ಅನೇಕ ವಿಭಿನ್ನ ಚಿತ್ರಗಳು ಸಿದ್ಧವಾಗುತ್ತಿವೆ. ಈ ಪೈಕಿ "ಸರ್ಪ್ರೈಸ್​​" (Surprise Kannada Movie) ಎಂಬ ಚಿತ್ರವೂ ಆ ಸಾಲಿನಲ್ಲಿ ನಿಲ್ಲುತ್ತದೆ. ಈ ಚಿತ್ರದ ಟೈಟಲ್ಲೆ ವಿಭಿನ್ನವಾಗಿದ್ದು, ಸಿನಿಮಾ ಮತ್ತಷ್ಟು ಕ್ರಿಯೇಟಿವ್ (Creative) ಆಗಿರಲಿದೆ ಎಂಬುದು ಚಿತ್ರ ತಂಡದ ಅಂಬೋಣ.

    "ಸರ್ಪ್ರೈಸ್" ಅನ್ನೋ ವಿಭಿನ್ನ ರೀತಿಯ ಟೈಟಲ್ ನೊಂದಿಗೆ ಚಿತ್ರ ತಂಡ ಮ್ಯಾಜಿಕಲ್ ರಿಯಲಿಸಂ ಕಥೆ ಹೇಳಲು ಹೊರಟಿದೆ. ' ಸರ್ಪ್ರೈಸ್ ' ಶೀರ್ಷಿಕೆಯೇ ಹೇಳುವಂತೆ ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿರುವ ಚಿತ್ರ. ಚಿತ್ರದ ಕಥೆ ಏನು? ಎಂಬುದನ್ನು ಬಹಿರಂಗಪಡಿಸಲು ಮುಂದಾಗದ ಚಿತ್ರ ತಂಡ ಈ ಚಿತ್ರ ಖಂಡಿತ ಸಿನಿಮಾ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ ಎಂದು ಆಶ್ವಾಸನೆ ನೀಡಿದೆ.

    ಸರ್ಪ್ರೈಸ್ ಚಿತ್ರ ತಂಡ.


    ಕನ್ನಡದಲ್ಲಿ ಈಗಾಗಲೇ ನೈಜ ಸನ್ನಿವೇಶಗಳು ಮತ್ತು ಘಟನೆಗಳನ್ನು ಆಧರಿಸಿ ಹತ್ತಾರು ಚಿತ್ರಗಳು ಬಿಡುಗಡೆ ಆಗಿವೆ. ಈ ಪೈಕಿ ಅನೇಕ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲೂ ಕಮಾಲ್ ಮಾಡಿವೆ. ಹೀಗಾಗಿ ಸರ್ಪ್ರೈಸ್​ ತಂಡ ಸಿನಿ ಪ್ರೇಕ್ಷಕರಿಗೆ ಯಾವ ರೀತಿಯ ರಸದೌತಣ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

    ಇದನ್ನೂ ಓದಿ: Kotigobba 3 Review: ಸತ್ಯ, ಶಿವ, ಸುಂದರ 'ಘೋಸ್ಟ್' ಈ ಕೋಟಿಗೊಬ್ಬ!

    ಈ ಚಿತ್ರಕ್ಕೆ ಕುಮಾರ್ ಎಸ್​.ವಿ. ಆಕ್ಷನ್ ಕಟ್​ ಹೇಳುತ್ತಿದ್ದು, ಇದು ಅವರ ಚೊಚ್ಚಲ ಚಿತ್ರ .ಇದಕ್ಕೂ ಮುಂಚೆ 'ಪವರ್ ಸ್ಟಾರ್ ಪುನೀತ್ ರಾಜಕುಮಾರ್ ' ಮತ್ತು ' ರೊರಿಂಗ್ ಸ್ಟಾರ್ ಶ್ರೀ ಮುರುಳಿ ' ಮತ್ತು ಕನ್ನಡದ ಸ್ಟಾರ್ ನಟರ ಚಿತ್ರ ಗಳಿಗೆ ಮೋಷನ್ ಪೋಸ್ಟರ್ , ಲಿರಿಕಲ್ ವಿಡಿಯೋ ಹಾಗೂ ಸಂಕಲನಕಾರರಾಗಿ ಕೆಲಸ ಮಾಡಿ ಇವರು ಮೆಚ್ಚುಗೆ ಪಡೆದಿದ್ದಾರೆ .

    ಈ ತಂಡದ ಯುವ ಪ್ರತಿಭೆ ಕುಮಾರ. ಕಥೆ , ಚಿತ್ರಕತೆ ಬರೆದು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ತಾರಕ್ ನಾಯಕ ನಟನಾಗಿ ನಟಿಸುತಿದ್ದು, ನಾನೊಂತರ ಚಿತ್ರದ ನಂತರ ' ಸರ್ಪ್ರೈಸ್ ' ಚಿತ್ರಕ್ಕೆ ನಾಯಕ ನಟರಾಗಿ ಬಣ್ಣ ಹಚ್ಚುತ್ತಿದ್ದಾರೆ.

    ಇದನ್ನೂ ಓದಿ: Parshanth Neel Meets Chiranjeevi: ಚಿರಂಜೀವಿ, ರಾಮ್​​ ಚರಣ್​​ ಜೊತೆ ಪ್ರಶಾಂತ್ ನೀಲ್: ಭೇಟಿಯ ಹಿಂದಿನ ಸೀಕ್ರೆಟ್ ಇಲ್ಲಿದೆ

    ಮನೋಜಿ ರೂಢಿಯ ಛಾಯಾಗ್ರಹಣ , ಆಕಾಶ್ ರವರ ಸಂಕಲನ ಮತ್ತು ಪ್ರದ್ಯೋತ್ತಮ್ ಸಂಗೀತ ಈ ಚಿತ್ರಕ್ಕಿದೆ . ಲಿಂಗರಾಜು ವಾಡಕಿ ಇವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ .. ಅತಿ ಶೀಘ್ರದಲ್ಲೇ ಚಿತ್ರ ತಂಡ ಚಿತ್ರಕರಣ ಮಾಡಲು ತಯಾರಿ ನಡೆಸುತ್ತಿದೆ .
    Published by:MAshok Kumar
    First published: