James: ಬೆಳ್ಳಿ ಪರದೆ ಮೇಲೆ `ಜೇಮ್ಸ್​’ ಅಬ್ಬರಿಸೋಕು ಮುನ್ನ ಮತ್ತೊಂದು ಸರ್​ಪ್ರೈಸ್​! ಫ್ಯಾನ್ಸ್​ ಫುಲ್​ ದಿಲ್​ ಖುಷ್​

ಈಗಾಗಲೇ ಬಿಡುಗಡೆಯಾಗಿರುವ ಟ್ರೇಡ್ ಮಾರ್ಕ್ ಸಾಂಗ್​ ಸ್ಯಾಂಡಲ್​ವುಡ್​ ಅಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್​ ಸೃಷ್ಟಿ ಮಾಡಿದೆ. ಇದೀಗ ಈ ಸಿನಿಮಾದ ಮತ್ತೊಂದು ಸಾಂಗ್​ ರಿಲೀಸ್ ಆಗಲಿದೆ. ಮಾರ್ಚ್ 11ಕ್ಕೆ 11ಗಂಟೆ 11 ನಿಮಿಷಕ್ಕೆ‘ಜೇಮ್ಸ್​’ ಸಿನಿಮಾದ ಮತ್ತೊಂದು ಸಾಂಗ್​ ಬಿಡುಗಡೆಯಾಗುತ್ತಿದೆ.

ನಟ ಪುನೀತ್​ ರಾಜ್​​ಕುಮಾರ್​

ನಟ ಪುನೀತ್​ ರಾಜ್​​ಕುಮಾರ್​

  • Share this:
ರಾಜ್ಯದಲ್ಲಿ ‘ಜೇಮ್ಸ್​’ (James) ಫೀವರ್​ ಶುರುವಾಗಿದೆ,ಎಲ್ಲಿ ನೋಡಿದರೂ ಜೇಮ್ಸ್​ ಪೋಸ್ಟರ್ (James Poster)​, ಬ್ಯಾನರ್​ಗಳು ರಾರಾಜಿಸುತ್ತಿವೆ. ಅಪ್ಪು (Appu) ಆಗಮನಕ್ಕೆ ಇಡೀ ರಾಜ್ಯವೇ ಕಾದು ಕುಳಿತಿದೆ. ಮಾರ್ಚ್​ 17 ಪುನೀತ್ ರಾಜ್​​ಕುಮಾರ್​ ಅವರ ಹುಟ್ಟುಹಬ್ಬ(Puneeth Rajkumar Birthday)ದ ದಿನ ಇಡೀ ವಿಶ್ವದಾದ್ಯಂತ ‘ಜೇಮ್ಸ್​’ ಸಿನಿಮಾ ರಿಲೀಸ್ ಆಗುತ್ತಿದೆ. ಅದ್ಧೂರಿಯಾಗಿ ‘ಜೇಮ್ಸ್​’ ಬರಮಾಡಿಕೊಳ್ಳಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ಮಾರ್ಚ್ 17ಕ್ಕೆ ಹಬ್ಬ ಮಾಡೋದಂತು ಕನ್ಫರ್ಮ್​ ಆಗಿದೆ. ಈ ಚಿತ್ರದಲ್ಲಿ ಅಪ್ಪು ಹೇಗೆ ಕಾಣಿಸಿಕೊಳ್ಳಲಿದ್ದಾರೆ, ಎನ್ನುವುದು ಈಗಾಗಲೇ ರಿವೀಲ್ ಆಗಿರುವ ಫೋಟೋಗಳ ಮೂಲಕ ಗೊತ್ತಾಗಿದೆ. ಬಿಡುಗಡೆಯಾಗಿರುವ ಟೀಸರ್ (Teaser)​, ಮೊದಲ ಲಿರಿಕಲ್​ ಸಾಂಗ್ (Lyrical Song)​ ಸಿನಿಮಾ ಮೇಲಿರುವ ಕುತೂಹಲವನ್ನು ಹೆಚ್ಚು ಮಾಡಿದೆ. ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಪವರ್​ಫುಲ್​ ಆ್ಯಕ್ಷನ್​(Powerful Action) ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ‘ಜೇಮ್ಸ್​’ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸರ್​ಪ್ರೈಸ್ (Surprise)​ ನೀಡಿದೆ. ಅದೇನು ಅಂತೀರಾ? ಮುಂದೆ ನೋಡ

ಮಾರ್ಚ್ 11ಕ್ಕೆ ರಿಲೀಸ್​ ಆಗ್ತಿದೆ ‘ಜೇಮ್ಸ್​’ ಮತ್ತೊಂದು ಸಾಂಗ್!

ಈಗಾಗಲೇ ಬಿಡುಗಡೆಯಾಗಿರುವ ಟ್ರೇಡ್ ಮಾರ್ಕ್ ಸಾಂಗ್​ ಸ್ಯಾಂಡಲ್​ವುಡ್​ ಅಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್​ ಸೃಷ್ಟಿ ಮಾಡಿದೆ. ಇದೀಗ ಈ ಸಿನಿಮಾದ ಮತ್ತೊಂದು ಸಾಂಗ್​ ರಿಲೀಸ್ ಆಗಲಿದೆ. ಮಾರ್ಚ್ 11ಕ್ಕೆ 11ಗಂಟೆ 11 ನಿಮಿಷಕ್ಕೆ‘ಜೇಮ್ಸ್​’ ಸಿನಿಮಾದ ಮತ್ತೊಂದು ಸಾಂಗ್​ ಬಿಡುಗಡೆಯಾಗುತ್ತಿದೆ. ಈ ವಿಚಾರ ಕೇಳಿ ಪುನೀತ್ ರಾಜ್​ಕುಮಾರ್​ ಅವರ ಅಭಿಮಾನಿಗಳು ಫುಲ್ ದಿಲ್​ಖುಷ್ ಆಗಿದ್ದಾರೆ. ಇನ್ನು ಚಿತ್ರದ ಇಂಟ್ರೊಡಕ್ಷನ್ ಹಾಡನ್ನು ರಿಲೀಸ್ ಮಾಡಲು ಮುಂದಾಗಿದೆ.

ಹಾಡಿನ ಎರಡು ಲೈನ್​ ಹಾಡಿದ್ದ ಚಂದನ್​ ಶೆಟ್ಟಿ!

ಚಂದನ್ ಶೆಟ್ಟಿ ಇತ್ತೀಚೆಗೆ ಇದೇ ಹಾಡಿನ ಎರಡು ಸಾಲುಗಳನ್ನು ಹಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೇ ಮಾರ್ಚ್ 17 ಜೇಮ್ಸ್ ತೆರೆಗೆ ಬರುತ್ತಿದೆ. ಜೇಮ್ಸ್ ಜಾತ್ರೆ ಜೊತೆಗೆ ಅಪ್ಪು ಹುಟ್ಟುಹಬ್ಬವನ್ನು ಅದ್ದೂರಿಯಾಗಿ, ಸಂಭ್ರಮದಿಂದ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು 'ಜೇಮ್ಸ್' ಸಿನಿಮಾ ಬಿಡುಗಡೆ ಹಾಗೂ ಅಪ್ಪು ಹುಟ್ಟುಹಬ್ಬದ ಅಂಗವಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡಿದ್ದಾರೆ. ಈ ಹೆಲಿಕಾಪ್ಟರ್ ಮೂಲಕ ವೀರೇಶ್ ಚಿತ್ರಮಂದಿರ, ಪ್ರಸನ್ನ ಹಾಗೂ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.

ಇದನ್ನೂ ಓದಿ: ಕರ್ನಾಟಕದ 400 ಚಿತ್ರಮಂದಿರಗಳಲ್ಲಿ `ಜೇಮ್ಸ್’​ ಅಬ್ಬರ, ಜೋಶ್​​ಗೂ-ಕ್ರೇಜ್​ಗೂ ಅಪ್ಪುನೇ ಟ್ರೇಡ್​ಮಾರ್ಕ್!

ಕರ್ನಾಟಕದ 400 ಚಿತ್ರಮಂದಿರಗಳಲ್ಲಿ ಜೇಮ್ಸ್​ ರಿಲೀಸ್!

ಜೇಮ್ಸ್’ ತಂಡ ಈಗಾಗಲೇ ಮೊದಲ ಹಂತದಲ್ಲಿ ಸುಮಾರು 130ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಬೆಂಗಳೂರಿನಲ್ಲಿ ಕೆಜಿ ರಸ್ತೆಯಲ್ಲಿರುವ ತ್ರಿವೇಣಿ, ವಿಜಯನಗರದಲ್ಲಿರುವ ವೀರೇಶ್, ಪ್ರಸನ್ನ, ವೀರಭದ್ರೇಶ್ವರ, ಅಂಜನ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಮಲ್ಟಿಪ್ಲೆಕ್ಸ್‌ಗಳನ್ನು ಹೊರಪಡಿಸಿ, ಕೇವಲ ಸಿಂಗಲ್ ಸ್ಕ್ರೀನ್‌ನಲ್ಲಿಯೇ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ‘ಜೇಮ್ಸ್​’ ಎಂಟ್ರಿಗೆ ಇನ್ನೂ ಕೇವಲ 7 ದಿನಗಳು ಮಾತ್ರ ಬಾಕಿ ಇದ್ದು, ಅಪ್ಪು ಅಭಿಮಾನಿಗಳ ಎದೆ ಬಡಿತ ಹೆಚ್ಚಾಗಿದೆ.

ಇದನ್ನೂ ಓದಿ: ಹೆಲ್ಮೆಟ್​ನಲ್ಲಿ ಅರಳಿದ ಅಪ್ಪು ಭಾವಚಿತ್ರ, ಇದನ್ನು ನೋಡೋಕೆ ಎರಡು ಕಣ್ಣು ಸಾಲಲ್ಲ ರೀ!


15 ದೇಶಗಳಲ್ಲಿ ರಾರಾಜಿಸಲಿದ್ದಾನೆ ‘ಜೇಮ್ಸ್​’!

ಜೇಮ್ಸ್​ ಸಿನಿಮಾವನ್ನು ಒಟ್ಟು 15 ದೇಶಗಳಲ್ಲಿ ರಿಲೀಸ್​ ಮಾಡಲು ಚಿತ್ರತಂಡ ತಯಾರಿ ನಡೆಸಿದೆಯಂತೆ. ಈ ಮೂಲಕ ಪುನೀತ್ ಕೊನೆ ಸಿನಿಮಾವನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಲು ಪ್ರಯತ್ನ ಮಾಡುತ್ತಿದ್ದೆ ಜೇಮ್ಸ್ ತಂಡ. ಈ ಸಿನಿಮಾ ಜರ್ಮನಿ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್ ರಿಲೀಸ್ ಆಗ್ತಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ವಿಚಾರ ಗೊತ್ತಾಗುತ್ತಿದ್ದ ಹಾಗೆ ಅಭಿಮಾನಿಗಳ ಖುಷಿ ದುಪ್ಪಟ್ಟಾಗಿದೆ.

Published by:Vasudeva M
First published: