• Home
  • »
  • News
  • »
  • entertainment
  • »
  • Actor Suriya: ಲುಕ್‌ ಬದಲಿಸಿಕೊಂಡ ತಮಿಳಿನ ಸೂಪರ್‌ ಸ್ಟಾರ್‌ ಸೂರ್ಯ!

Actor Suriya: ಲುಕ್‌ ಬದಲಿಸಿಕೊಂಡ ತಮಿಳಿನ ಸೂಪರ್‌ ಸ್ಟಾರ್‌ ಸೂರ್ಯ!

ನಟ ಸೂರ್ಯ

ನಟ ಸೂರ್ಯ

ಇತ್ತೀಚೆಗೆ ಜಿಮ್‌ನಲ್ಲಿ ಕಾಣಿಸಿಕೊಂಡಿರುವ ಸೂರ್ಯ ಅವರು ತಮ್ಮ ಫೋಟೋಗಳಲ್ಲಿ ಅತ್ಯಂತ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಂಬೈನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಪೋಟೋ ತೆಗೆಸಿಕೊಂಡಿರುವ ಸೂರ್ಯ, ತಮ್ಮ 42ನೇ ಚಲನಚಿತ್ರಕ್ಕಾಗಿ ಫಿಟ್‌ನೆಸ್‌ ತಯಾರಿ ನಡೆಸುತ್ತಿದ್ದಾರೆ.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Bangalore, India
  • Share this:

ತಮಿಳಿನ ಸೂಪರ್‌ ಸ್ಟಾರ್‌ ಸೂರ್ಯ ಅವರ ಚಲನಚಿತ್ರಗಳಿಗೆ (Cinema) ದೇಶದ ಎಲ್ಲೆಡೆ ಅಭಿಮಾನಿಗಳು ಇರುವುದು ಸತ್ಯ. ಅವರ ನಟನೆಗೆ (Acting) ಮನಸೋಲದವರೇ ಇಲ್ಲ. ಈಗ ಅವರು ತಮ್ಮ ಹೊಸ ಚಲನಚಿತ್ರಕ್ಕೆ ಹೊಸದೊಂದು ಮೇಕ್‌ಓವರ್‌ (Makeover) ಅನ್ನು ಮಾಡಿಕೊಂಡಿದ್ದಾರೆ. ಪ್ರತಿ ಪಾತ್ರಕ್ಕೂ ವಿಭಿನ್ನ ಮೇಕ್‌ಓವರ್‌ಗೆ ಹೆಸರುವಾಸಿಯಾಸಿಯಾಗಿರುವವರು ಯಾರು ಅಂದ್ರೆ ಅವರೇ ಕಮಲ್‌ ಹಾಸನ್‌. ಈಗ ಸೂರ್ಯ (Suriya) ಅವರೂ ಸಹ ಹಾಸನ್ ಅವರ ಹಾದಿಯನ್ನೇ ಹಿಡಿದಿದ್ದಾರೆ. ಪ್ರತಿ ಪಾತ್ರಕ್ಕೂ ಹೊಸ-ಹೊಸ ಮೇಕ್‌ಓವರ್‌ಗಳನ್ನು ಮಾಡಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ.


ರಾಷ್ಟ್ರಪ್ರಶಸ್ತಿ ವಿಜೇತ ನಟನಾದ ಸೂರ್ಯ ಅವರ ಹೊಸ ಲುಕ್‌


ರಾಷ್ಟ್ರಪ್ರಶಸ್ತಿ ವಿಜೇತರಾಗಿರುವ ಈ ನಟ ಪ್ರತಿ ಚಲನಚಿತ್ರದಲ್ಲಿ ತಮ್ಮ ಪ್ರತಿಯೊಂದು ಪಾತ್ರಕ್ಕೂ ಸತತವಾಗಿ ಹೊಸ ಮೇಕ್‌ಓವರ್‌ನ ಪ್ರಯತ್ನವನ್ನು ಮಾಡ್ತಾನೆ ಇರ್ತಾರೆ. ಈಗ ಸೂರ್ಯ ಅವರು ತಮ್ಮ 42 ನೇ ಚಲನಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಹಲವಾರು ಹಿಟ್‌ ಫಿಲ್ಮ್‌ಗಳನ್ನು ನೀಡಿರುವ ಹಿಟ್ ಮೇಕರ್ ಶಿವ ನಿರ್ದೇಶಿಸುತ್ತಿದ್ದಾರೆ.




ಇತ್ತೀಚೆಗೆ ಜಿಮ್‌ನಲ್ಲಿ ಕಾಣಿಸಿಕೊಂಡಿರುವ ಸೂರ್ಯ ಅವರು ತಮ್ಮ ಫೋಟೋಗಳಲ್ಲಿ ಅತ್ಯಂತ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಂಬೈನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಪೋಟೋ ತೆಗೆಸಿಕೊಂಡಿರುವ ಸೂರ್ಯ, ತಮ್ಮ 42ನೇ ಚಲನಚಿತ್ರಕ್ಕಾಗಿ ಫಿಟ್‌ನೆಸ್‌ ತಯಾರಿ ನಡೆಸುತ್ತಿದ್ದಾರೆ.




ನಿರ್ದೇಶಕ ಶಿವ ಅವರ ಜೊತೆ ಸೂರ್ಯ ಅವರ ಮೊದಲ ಚಲನಚಿತ್ರ ಇದಾಗಿದೆ. ಈ ಪೋಟೋದಲ್ಲಿ ಸೂರ್ಯ ತೂಕ ಇಳಿಸಿಕೊಂಡಂತೆ ಕಾಣುತ್ತಿದೆ. ಸೂರ್ಯ ಅವರ ಈ ಫಿಟ್‌ನೆಸ್‌ ಪೋಟೋ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ ಪೋಟೋ ಆಗಿದೆ.


ಹೊಸ ಸಿನಿಮಾಗೆ ದೈಹಿಕ ಕಸರತ್ತು ನಡೆಸುತ್ತಿರುವ ಸೂರ್ಯ


ಸೂರ್ಯ ಒಬ್ಬ ಪ್ರತಿಭಾವಂತ ನಟ, ಅವರು ತಮ್ಮ ಹೊಸ ಚಲನಚಿತ್ರಕ್ಕಾಗಿ 6-ಪ್ಯಾಕ್ ಲುಕ್‌ ಅನ್ನು ಪಡೆಯಲು ಅನೇಕ ರೀತಿಯ ದೈಹಿಕ ಕಸರತ್ತು ಮಾಡುತ್ತಿದ್ದಾರೆ. ಇದು ಮ್ಯಾಜಿಕಲ್ ಅಡ್ವೆಂಚರ್ ಥ್ರಿಲ್ಲರ್ ಚಲನಚಿತ್ರ ಆಗಿರುವುದರಿಂದ ಹೊಸ ಲುಕ್‌ಗೆ ತಮ್ಮನ್ನು ತಾವು ರೆಡಿ ಮಾಡಿಕೊಳ್ಳುತ್ತಿದ್ದಾರೆ ಸೂರ್ಯ.


ಈ ಚಿತ್ರದಲ್ಲಿ ಸೂರ್ಯ ಹಲವಾರು ಪಾತ್ರಗಳಲ್ಲಿ ನಟಿಸಬಹುದು ಎಂದು ಊಹೆ ಮಾಡಲಾಗಿದೆ. ಈ ಚತ್ರದಲ್ಲಿ ಅವರು ಯೋಧನ ಪಾತ್ರವನ್ನು ಸಹ ನಿರ್ವಹಿಸಲಿದ್ದಾರೆ. ಅದಕ್ಕೆ ಅವರು ಸಿಕ್ಸ್‌ಪ್ಯಾಕ್‌ ಲುಕ್‌ಗೆ ಬದಲಾಗುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ.




ಸೂರ್ಯ ಅವರು ತಮ್ಮ ಮಹತ್ವಾಕಾಂಕ್ಷೆಯ ಚಿತ್ರವಾದ ವಾಡಿವಾಸಲ್‌ನ ಮೊದಲ ಶೆಡ್ಯೂಲ್‌ನಲ್ಲಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಆದರೆ ವಾಡಿವಾಸಲ್‌ನ ಚಿತ್ರೀಕರಣವನ್ನು ಕೆಲವು ಕಾರಣಗಳಿಗೆ ಸದ್ಯಕ್ಕೆ ನಿಲ್ಲಿಸಲಾಗಿದೆ.


ನಿರ್ದೇಶಕ ಶಿವ ಅವರ ಹೆಸರಿಡದ ಚಲನಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ ನಂತರ, ವೆಟ್ರಿಮಾರನ್ ಅವರ ಚಿತ್ರದಲ್ಲಿ ಎರಡು ಪಾತ್ರಗಳನ್ನು ನಿರ್ವಹಿಸುತ್ತಿರುವ ನಟ ಮತ್ತೊಮ್ಮೆ ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿದೆ.


ತಮಿಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್‌ ಬೆಡಗಿ ದಿಶಾ ಪಟಾನಿ


ಸದ್ಯ ಸೂರ್ಯ ನಟಿಸಲಿರುವ ಈ ಚಿತ್ರ ಒಂದು ಫ್ಯಾಂಟಸಿ-ಸಾಹಸಭರಿತ ಚಿತ್ರ ಎಂದು ಹೇಳಲಾಗಿದ್ದು, ಈ ಚಿತ್ರಕ್ಕಾಗಿ ಸೂರ್ಯ ಅವರು ತಮ್ಮ ಹಿಂದಿನ ಚಲನಚಿತ್ರಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ಸಂಭಾವನೆ ಪಡೆದಿದ್ದಾರೆಂಬ ಮಾಹಿತಿಯಿದೆ.


ಇನ್ನು ಹೆಸರಿಡದ ಈ ಚಿತ್ರದ ಮೂಲಕ ಬಾಲಿವುಡ್ ನಟಿ ದಿಶಾ ಪಟಾನಿ ಅವರು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಸಾಕಷ್ಟು ವಿಶುವಲ್ ಎಫೆಕ್ಟ್‌ಗಳನ್ನು ಒಳಗೊಂಡಿರುವ ಆಕ್ಷನ್-ಪ್ಯಾಕ್ಡ್ ಸೂರ್ಯ ಅಭಿನಯದ ಈ ಚಿತ್ರವು ತಮಿಳು, ಮಲಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್‌ ಇಂಡಿಯಾ ಚಲನಚಿತ್ರವಾಗಿ ಹೊರಹೊಮ್ಮಲಿದೆ.


ಇದನ್ನೂ ಓದಿ: Daali Dhananjaya: ವಸಿಷ್ಠ ಸಿಂಹ ಮೊದಲೇ ನಮ್ಮ ಕೈಗೆ ಸಿಗಲ್ಲ, ನಮಗೂ ಸ್ವಲ್ಪ ಬಿಟ್ಟು ಕೊಡಿ! ಆಪ್ತಮಿತ್ರನ ಕಾಲೆಳೆದ ಡಾಲಿ


ತಮಿಳು ನಟ ಸೂರ್ಯ 'ಸೂರರೈ ಪೊಟ್ರು' ಸಿನಿಮಾ ಮೂಲಕ ಈ ವರ್ಷ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಅವರು ಕಮರ್ಷಿಯಲ್ ಚಿತ್ರಗಳ ಜೊತೆಗೆ ಹಲವು ಪ್ರಯೋಗಗಳಿಗೂ ಆದ್ಯತೆ ನೀಡಿದ್ದಾರೆ. ಅದರಲ್ಲಿ ಯಶಸ್ವಿಯನ್ನೂ ಕಂಡಿದ್ದಾರೆ.


ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿರುವ ಸೂರ್ಯ ಶಿರುತ್ತೈ ಶಿವ ನಿರ್ದೇಶನದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಲಿದ್ದಾರೆ.ಸೂರ್ಯ ನಾಯಕನಾಗಿ ಇದು 42ನೇ ಚಿತ್ರ.


ಅದ್ಧೂರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸಿದೆ. ಸ್ಟುಡಿಯೋ ಗ್ರೀನ್ ಕಂಪನಿ ಜಂಟಿಯಾಗಿ ಸೂರ್ಯ ಅವರ ಬಹು ನಿರೀಕ್ಷಿತ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ದೇವಿಶ್ರೀಪ್ರಸಾದ್ ಸಂಗೀತ ನೀಡುತ್ತಿದ್ದಾರೆ.

Published by:Divya D
First published: