Suriya and Jyothika: ಇರುಲ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ. ನೀಡಿದ ಜ್ಯೊತಿಕಾ, ಸೂರ್ಯ

ಈ ಸ್ಟಾರ್ ದಂಪತಿ ಇರುಲಾ ಎಂಬ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಒಂದು ಕೋಟಿ ಹಣದ ಚೆಕ್ ಅನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‍ಗೆ ನೀಡಿದ್ದಾರೆ. ನಿವೃತ್ತಿ ನ್ಯಾಯಾಧೀಶ ಕೆ. ಚಂದ್ರು ಮತ್ತು ಪಜನ್‍ಕುಡಿ ಬುಡಕಟ್ಟು ಜನಾಂಗದ ಸದಸ್ಯರು ಮುಖ್ಯಮಂತ್ರಿ ಸ್ಟಾಲಿನ್‍ ಅವರಿಂದ ಚೆಕ್ ಪಡೆದುಕೊಂಡಿದ್ದಾರೆ.

ಇರುಲ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ. ನೀಡಿದ ಜ್ಯೊತಿಕಾ, ಸೂರ್ಯ

ಇರುಲ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ. ನೀಡಿದ ಜ್ಯೊತಿಕಾ, ಸೂರ್ಯ

  • Share this:
ತಮಿಳು ಸಿನಿಮಾದ ನಟಿ ಜ್ಯೋತಿಕಾ(Tamil Actress Jyothika ) ಮತ್ತು ಸಿಂಗಂ ಸೂರ್ಯ (Singam Suriya)ಜೋಡಿ ಪ್ರಸಿದ್ಧ ಹಾಗೂ ಸಂತೋಷವಾಗಿರುವ ಜೋಡಿ. ಇವರಿಬ್ಬರೂ ಪ್ರೇಮಿಸಿ ಮನೆಯ ಒಪ್ಪಿಗೆಯ ಮೇರೆಗೆ ಸಪ್ತಪದಿ(Love Marriage) ತುಳಿದರು. ಸಿನಿಮಾ ಇಂಡಸ್ಟ್ರಿ(Cinema Industry)ಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿ ಬಹಳ ವರ್ಷ ಜೊತೆಯಾಗಿ ಬಾಳುವುದು ಕಡಿಮೆ. ಆದರೆ ಇವರು ಆದರ್ಶ ದಂಪತಿಯಾಗಿದ್ದು ದಿಯಾ(Dia) ಮತ್ತು ದೇವ್(Dev) ಎಂಬ ತಮ್ಮ ಮಕ್ಕಳ ಜೊತೆ ಖುಷಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಜೀವನ ಮಾತ್ರವಲ್ಲ ವೃತ್ತಿ ಜೀವನದಲ್ಲೂ ಸರಿಸಮಾನವಾಗಿ ತೊಡಗಿಸಿಕೊಂಡಿದ್ದಾರೆ. ಇವರದ್ದೇ ಸೂರ್ಯ ಮತ್ತು ಜ್ಯೋತಿಕಾ 2ಡಿ ಎಂಟರ್‌ಟೈನ್‌ಮೆಂಟ್(Suriya and Jyothika 2D Entertainment) ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾಗಳ ನಿರ್ಮಾಣಕ್ಕೂ ಹೆಜ್ಜೆ ಇಟ್ಟಿದ್ದಾರೆ.

ಓಟಿಟಿಯಲ್ಲಿ ರಿಲೀಸ್ ಆದ ಜೈ ಭೀಮ್

‘36 ವಯಿನಿದಿಲೆ‘ ಸಿನಿಮಾ ಮೂಲಕ ಜ್ಯೋತಿಕಾ ಪುನಃ ಸಿನಿಮಾ ಜರ್ನಿ ಅರಂಭಿಸಿದ್ದು ಇತ್ತೀಚೆಗೆ ಒಟಿಟಿ ಫ್ಲಾರ್ಟ್‍ಫಾಮ್‍ನಲ್ಲಿ ಅವರ ಅಭಿನಯದ ಉದನ್‍ಪಿರಪ್ಪೆ ಸಿನಿಮಾ ಬಿಡುಗಡೆಯಾಗಿದೆ. ಸೂರ್ಯ ಮತ್ತು ಜ್ಯೋತಿಕಾ ಅವರ 2ಡಿ ಎಂಟರ್‌ಟೈನ್‌ಮೆಂಟ್ ಈ ಸಿನಿಮಾ ನಿರ್ಮಾಣ ಮಾಡಿತ್ತು. ಇದೀಗ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾ ಕೂಡ ಒಟಿಟಿ ಫ್ಲಾರ್ಟ್‍ಫಾಮ್‍ನಲ್ಲಿ ಬಿಡುಗಡೆಗೊಂಡಿದೆ.

ಇರುಲಾ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ 1 ಕೋಟಿ ರೂ. ನೀಡಿದ ದಂಪತಿ

ಇದೀಗ ಈ ಸ್ಟಾರ್ ದಂಪತಿ ಇರುಲಾ ಎಂಬ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಒಂದು ಕೋಟಿ ಹಣದ ಚೆಕ್ ಅನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‍ಗೆ ನೀಡಿದ್ದಾರೆ. ನಿವೃತ್ತಿ ನ್ಯಾಯಾಧೀಶ ಕೆ. ಚಂದ್ರು ಮತ್ತು ಪಜನ್‍ಕುಡಿ ಬುಡಕಟ್ಟು ಜನಾಂಗದ ಸದಸ್ಯರು ಮುಖ್ಯಮಂತ್ರಿ ಸ್ಟಾಲಿನ್‍ ಅವರಿಂದ ಚೆಕ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:Puneeth Rajkumar : ಅಪ್ಪು ಬಗ್ಗೆ ಕೆಟ್ಟದಾಗಿ ಪೋಸ್ಟ್​ ಮಾಡಿದ್ದವ ಅರೆಸ್ಟ್​, ಕಿಡಿಗೇಡಿ ಬಂಧನಕ್ಕೆ ಆಗ್ರಹಿಸಿದ್ದ ಕನ್ನಡಿಗರು!

ಜೈ ಭೀಮ್​ ಸಿನಿಮಾದಲ್ಲಿ ಏನಿದೆ?

ನಟ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾವು ಒಬ್ಬ ಬುಡಕಟ್ಟು ಜನಾಂಗದ ಗರ್ಭಿಣಿಯು ಪೊಲೀಸ್ ಕಸ್ಟಡಿಯಲ್ಲಿರುವ ತನ್ನ ಗಂಡ ಕಾಣೆಯಾಗಿರುವುದನ್ನು ತಿಳಿದು ಹುಡುಕಾಟದಲ್ಲಿ ತೊಡಗುತ್ತಾಳೆ. ಆಗ ಅವರ ನೆರವಿಗೆ ಬರುವುದೇ ನ್ಯಾಯಾವಾದಿ ಸೂರ್ಯ. ಪೊಲೀಸ್ ಕಸ್ಟಡಿಯಿಂದ ಕಾಣೆಯಾದ ಪತಿಯನ್ನು ಹುಡುಕಿಕೊಡುತ್ತಾನಾ? ಅವರಿಗೆ ನ್ಯಾಯ ಒದಗಿಸಿಕೊಡುತ್ತಾರಾ ಎಂಬುದೇ ಸಿನಿಮಾದ ತಿರುಳು. ಸೂರ್ಯ ತಮ್ಮ ನಟನಾ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರವು ಜಾತಿ ಆಧಾರಿತ ತಾರತಮ್ಯ ಮತ್ತು ಪೊಲೀಸ್ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುತ್ತದೆ.

ಇಂದು ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್

ಸೂರ್ಯ ಅವರ ಜೈ ಭೀಮ್ ನವೆಂಬರ್ 2ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಥಾ ಸೆ ಜ್ಞಾನವೇಲ್ ನಿರ್ದೇಶಿಸಿದ ಜೈ ಭೀಮ್ 1993ರಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿದೆ. ಈ ಚಲನಚಿತ್ರವು ಜಾತಿ ತಾರತಮ್ಯ ಮತ್ತು ಇರುಳ ಬುಡಕಟ್ಟು ಜನಾಂಗದ ಅನ್ಯಾಯದ ಬಗ್ಗೆ ಮಾತನಾಡುತ್ತದೆ.

ಸೂರ್ಯ ಮತ್ತು ಜ್ಯೋತಿಕಾ ಪಜಂಕುಡಿ ಇರುಲರ್ ಎಜುಕೇಶನ್ ಟ್ರಸ್ಟ್‌ಗೆ 1 ಕೋಟಿ ರೂ. ಪ್ರೊಡಕ್ಷನ್ ಹೌಸ್ ನೀಡಿದೆ, "ನಮ್ಮ ಗೌರವಾನ್ವಿತ ಟಿಎನ್ ಮುಖ್ಯಮಂತ್ರಿ @mkstalin ಅವರ ಸಮ್ಮುಖದಲ್ಲಿ 2ಆ ಪರವಾಗಿ @Suriya_offl ಸರ್ ಮತ್ತು #ಜ್ಯೋತಿಕಾ ಮೇಮ್ ಅವರು ಇರುಳ ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ನ್ಯಾಯಮೂರ್ತಿ ಕೆ. ಚಂದ್ರು (ನಿವೃತ್ತ) ಮತ್ತು ಪಜಂಗುಡಿ ಇರುಳ ಟ್ರಸ್ಟ್‍ನ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. #ಜೈಭೀಮ್ (ic)." ಎಂದು ತಮ್ಮ ಪ್ರೊಡಕ್ಷನ್ ಹೌಸ್, 2ಡಿ ಎಂಟರ್‍ಟೈನ್‍ಮೆಂಟ್ ಟ್ವೀಟ್ ಮಾಡಿದೆ.

ಇದನ್ನೂ ಓದಿ:Krrish 4: ಮತ್ತೆ ಮರಳಲಿರುವ ಜಾದೂ, ಕ್ರಿಶ್ 4 ಸಿನಿಮಾದಲ್ಲಿ ಏನೆನೆಲ್ಲಾ ಇರುತ್ತೆ ಗೊತ್ತಾ?

ಜೈ ಭೀಮ್​​ ತಾರಾಗಣ

ತಾ ಸೇ ಜ್ಞಾನವೇಲ್ ನಿರ್ದೇಶನದ ಜೈ ಭೀಮ್ ಚಿತ್ರದಲ್ಲಿ ಸೂರ್ಯ, ಲಿಜೋಮೋಲ್ ಜೋಸ್ ಮತ್ತು ಮಣಿಕಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ರಾಜ್, ರಜಿಶಾ ವಿಜಯನ್, ಜಯಪ್ರಕಾಶ್ ಮತ್ತು ರಾವ್ ರಮೇಶ್ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Published by:Latha CG
First published: