Gargi Movie: ಗಾರ್ಗಿಗೆ ಸಾಥ್ ಕೊಟ್ಟ ಜ್ಯೋತಿಕಾ, ಸೂರ್ಯ; ಥ್ಯಾಂಕ್ಯೂ ಎಂದ ಸಾಯಿ ಪಲ್ಲವಿ

Sai Pallavi: ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಸ್ವಲ್ಪ ಹೆಚ್ಚು ಭರವಸೆಯನ್ನು ಈ ಚಿತ್ರದ ಮೇಲೆ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಚಿತ್ರತಂಡದಲ್ಲಿ ಇನ್ನಿಬ್ಬರು ಸ್ಟಾರ್ ನಟರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಗಾರ್ಗಿ ಸಿನಿಮಾ

ಗಾರ್ಗಿ ಸಿನಿಮಾ

  • Share this:
ತೆಲುಗಿನ ನಟಿ ಸಾಯಿ ಪಲ್ಲವಿ (Sai Pallavi) ಎಂದರೆ ಯಾರಿಗೆ ಗೊತ್ತಿರುವುದಿಲ್ಲ ಹೇಳಿ? ತನ್ನ ‘ಫಿದಾ’ (Fida) ಚಿತ್ರದಿಂದ ಸಿನಿ ಪ್ರೇಕ್ಷಕರನ್ನು ಫಿದಾ ಮಾಡಿದ ನಟಿ ಈಕೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗಷ್ಟೇ ಬ್ಲಾಕ್ ಬಸ್ಟರ್ ಹಿಟ್ ಚಿತ್ರವಾದ ‘ವಿರಾಟ ಪರ್ವಂ’ (Virata Parvam) ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಸಾಯಿ ಪಲ್ಲವಿ ಈಗ ತಮ್ಮ ಮುಂದಿನ ಚಿತ್ರವಾದ ‘ಗಾರ್ಗಿ’ (Gargi) ಗೆ ಸಜ್ಜಾಗುತ್ತಿದ್ದಾರೆ.

ಚಿತ್ರಕ್ಕೆ ಸೂರ್ಯ ಹಾಗೂ ಜ್ಯೋತಿಕಾ ಸಾಥ್ 

ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಸ್ವಲ್ಪ ಹೆಚ್ಚು ಭರವಸೆಯನ್ನು ಈ ಚಿತ್ರದ ಮೇಲೆ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಚಿತ್ರತಂಡದಲ್ಲಿ ಇನ್ನಿಬ್ಬರು ಸ್ಟಾರ್ ನಟರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಯಾರಪ್ಪಾ ಆ ದೊಡ್ಡ ಸ್ಟಾರ್ ನಟರು ಅಂತ ತಿಳಿದುಕೊಳ್ಳಲು ನೀವು ತುಂಬಾನೇ ಕಾತುರರಾಗಿರಬೇಕಲ್ಲವೇ? ತಮಿಳಿನ ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ತಮ್ಮ ಪ್ರೊಡಕ್ಷನ್ ಹೌಸ್ 2ಡಿ ಪಿಕ್ಚರ್ಸ್ ಅಡಿಯಲ್ಲಿ ಈ ಚಿತ್ರವನ್ನು ಪ್ರಸ್ತುತಪಡಿಸಲು ಚಿತ್ರತಂಡಕ್ಕೆ ಸೇರಿದ್ದಾರೆ ಎಂದು ಈಗಾಗಲೇ ಅಧಿಕೃತವಾಗಿ ಘೋಷಿಸಲಾಗಿದೆ. ಈ ಜೋಡಿ ಈ ಚಿತ್ರವನ್ನು ತಮಿಳಿನಲ್ಲಿ ಪ್ರಸ್ತುತ ಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ಅವರು ಸಾಯಿ ಪಲ್ಲವಿ ಅಭಿನಯದ ಮುಂಬರುವ ಚಿತ್ರವಾದ ‘ಗಾರ್ಗಿ’ ಯನ್ನು ಪ್ರಸ್ತುತಪಡಿಸುವುದಾಗಿ ಶುಕ್ರವಾರ ಅಧಿಕೃತವಾಗಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಸೂರ್ಯ ಟ್ವಿಟ್ಟರ್ ಖಾತೆಯ ಪುಟದಲ್ಲಿ ನಟಿ ಸಾಯಿ ಪಲ್ಲವಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಬರೆದು, ಚಿತ್ರ ತಂಡದೊಂದಿಗೆ ತೆಗೆಸಿಕೊಂಡಿರುವ ಒಂದು ಫೋಟೋವನ್ನು  ಪೋಸ್ಟ್ ಮಾಡಿದ್ದಾರೆ.ಪ್ರೊಡಕ್ಷನ್ ಹೌಸ್ 2ಡಿ ಎಂಟರ್ಟೈನ್ಮೆಂಟ್ ಅನ್ನು ನಡೆಸುತ್ತಿರುವ ಸೂರ್ಯ ಅವರು ತಮ್ಮ ಪೋಸ್ಟ್ ನೊಂದಿಗೆ "ಜೋ ಮತ್ತು ನಾನು ಗಾರ್ಗಿ ಚಿತ್ರ ತಂಡದೊಂದಿಗೆ ಸಹಯೋಗ ಹೊಂದುತ್ತಿರುವುದು ಬಹಳ ಸಂತೋಷವಾಗಿದೆ. ಕೆಲವು ಪಾತ್ರಗಳು ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದು ಬಿಡುತ್ತವೆ! ಹೊಸ ಆಲೋಚನೆಗಳು ಮತ್ತು ಬರವಣಿಗೆಯನ್ನು ಇನ್ನೂ ನಾವು ಮುಂದುವರೆಸಬೇಕು! ನೀವೆಲ್ಲರೂ ಅದನ್ನು ಇಷ್ಟಪಡುತ್ತೀರಿ ಅಂತ ನಾನು ಭಾವಿಸುತ್ತೇನೆ" ಎಂದು ಬರೆದಿದ್ದಾರೆ.

ಈ ಪೋಸ್ಟ್ ಗೆ ನಟಿ ಸಾಯಿ ಪಲ್ಲವಿ ಸಹ ಸೂರ್ಯ ಮಾಡಿರುವಂತಹ ಟ್ವೀಟ್ ಅನ್ನು ಉಲ್ಲೇಖಿಸಿ "ಸೂರ್ಯ ಸರ್ ನಿಮಗೆ ಧನ್ಯವಾದಗಳು ಸರ್ ಮತ್ತು ಜ್ಯೋತಿಕಾ ಮ್ಯಾಮ್ ನಿಮಗೂ ತುಂಬಾ ಧನ್ಯವಾದಗಳು. ನಿಮ್ಮ ಈ ಬೆಂಬಲಕ್ಕೆ ನಾನು ಅಭಾರಿಯಾಗಿದ್ದೇನೆ" ಅಂತ ಬರೆದಿದ್ದಾರೆ.

ಇದನ್ನೂ ಓದಿ: ಚಾರ್ಲಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಗಾಲಿ ಜನಾರ್ದನ ರೆಡ್ಡಿ, ಮುದ್ದು ನಾಯಿಯ ವಿಡಿಯೋ ಶೇರ್ ಮಾಡಿಕೊಂಡ ಮಾಜಿ ಸಚಿವ

ಪೋಸ್ಟರ್ ಹೆಚ್ಚು ಮಾಡಿದೆ ಕುತೂಹಲ

2017 ರಲ್ಲಿ ಬಿಡುಗಡೆಯಾದಂತಹ ನಿವಿನ್ ಪೌಲಿ ಅಭಿನಯದ ರಿಚಿ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಗೌತಮ್ ರಾಮಚಂದ್ರನ್ ಅವರು ಈ ‘ಗಾರ್ಗಿ’ ಚಿತ್ರದ ಕಥೆಯನ್ನು ಬರೆದು ನಿರ್ದೇಶಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಸಾಯಿ ಪಲ್ಲವಿ ಅವರ 30ನೇ ಹುಟ್ಟುಹಬ್ಬದಂದು ‘ಗಾರ್ಗಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಸಾಯಿ ಪಲ್ಲವಿ ತನ್ನ ಪಾತ್ರಕ್ಕೆ ಹೇಗೆ ಜೀವ ತುಂಬಿದ್ದರು ಎಂಬುದನ್ನು ತೋರಿಸುವ ತೆರೆಮರೆಯ ತುಣುಕನ್ನು ಸಿನಿಮಾ ತಂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಕನ್ನಡತಿ ವರೂಧಿನಿ ಸೂಪರ್ ಪೋಸ್, ರಿಯಲ್​ ಲೈಫ್​ನಲ್ಲೂ ಸಾರಾ ಅಣ್ಣಯ್ಯ ಸಖತ್ ಸ್ಟೈಲಿಶ್

‘ಗಾರ್ಗಿ’ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ಪಾತ್ರವು ಒಂದು ರೀತಿಯ ಕಾನೂನು ಹೋರಾಟದಲ್ಲಿ ಸಿಲುಕಿದ ಮಹಿಳೆಯ ಪಾತ್ರವಾಗಿದೆ ಮತ್ತು ಅವಳು ನಿರಂತರವಾಗಿ ನ್ಯಾಯವನ್ನು ಪಡೆಯಲು ಹೊರಡುತ್ತಾಳೆ ಮತ್ತು ಅದೇ ಸಮಯಕ್ಕೆ ತನ್ನ ಕುಟುಂಬದಿಂದ ಗೌರವವನ್ನು ಸಹ ಬಯಸುವಂತಹ ಒಂದು ಮಹಿಳೆಯ ಪಾತ್ರ ಇದಾಗಿದೆ ಎಂದು ಹೇಳಲಾಗುತ್ತಿದೆ. ಅವಳು ಮಹಿಳೆಯಾಗಿರುವುದರಿಂದ ಅವಳನ್ನು ಅನ್ಯಾಯವಾಗಿ ನಡೆಸಿಕೊಳ್ಳುತ್ತಾರೆ. ಇದರಿಂದ ರೊಚ್ಚಿಗೆದ್ದ ಮಹಿಳೆಯೊಬ್ಬಳು ಅವಳು ಕುಟುಂಬ, ಸಮಾಜ ಮತ್ತು ಇಡೀ ವ್ಯವಸ್ಥೆಯೊಂದಿಗೆ ಹೋರಾಡಲು ಕಾರಣವಾಗುತ್ತದೆ.
Published by:Sandhya M
First published: