Bad Manners Poster: ರಗಡ್​ ಲುಕ್​ನಲ್ಲಿ ಅಭಿಷೇಕ್​ ಅಂಬರೀಷ್: ಸೂರಿ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್​ ರಿಲೀಸ್​​..!

Abhishek Ambareesh New Movie: ಅಮರ್ ಸಿನಿಮಾದ ಸೋಲಿನ ನಂತರ ಕತೆ ಹಾಗೂ ನಿರ್ದೇಶಕ ಆಯ್ಕೆಯಲ್ಲಿ ಅಭಿಷೇಕ್​ ಸಾಕಷ್ಟು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಅಂತೆಯೇ ಇತ್ತೀಚೆಗೆ ನಿರ್ದೇಶಕ ಸುಕ್ಕಾ ಸೂರಿ ಅವರೊಂದಿಗೆ ಯಂಗ್​ ರೆಬೆಲ್​ ಸ್ಟಾರ್​ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಈಗ ಆ ಸುದ್ದಿಗೆ ಪುಷ್ಠಿ ನೀಡುವಂತೆ ಚಿತ್ರತಂಡ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದೆ.

Anitha E | news18-kannada
Updated:May 27, 2020, 7:35 PM IST
Bad Manners Poster: ರಗಡ್​ ಲುಕ್​ನಲ್ಲಿ ಅಭಿಷೇಕ್​ ಅಂಬರೀಷ್: ಸೂರಿ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್​ ರಿಲೀಸ್​​..!
ಬ್ಯಾಡ್​ ಮ್ಯಾನರ್ಸ್​ ಸಿನಿಮಾದ ಪೋಸ್ಟರ್​
  • Share this:
ಅಮರ್ ಸಿನಿಮಾದ ನಂತರ ಯಂಗ್ ರೆಬೆಲ್​ ಸ್ಟಾರರ್ ಅಭಿಷೇಕ್​ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿತ್ತು. ಆಗಲೇ ಸಂದರ್ಶನವೊಂದರಲ್ಲಿ ಸುಮಲತಾ ಅವರೂ ಮಗನ ಕೈಯಲ್ಲಿ ಎರಡು ಮೂರು ಸಿನಿಮಾ ಕತೆಗಳಿವೆ. ಅವುಗಳಲ್ಲಿ ಆಯ್ಕೆ ಮಾಡಿಕೊಂಡು ನಿರ್ಧರಿಸಬೇಕಿದೆ ಎಂದಿದ್ದರು.

ಅಮರ್ ಸಿನಿಮಾದ ಸೋಲಿನ ನಂತರ ಕತೆ ಹಾಗೂ ನಿರ್ದೇಶಕ ಆಯ್ಕೆಯಲ್ಲಿ ಅಭಿಷೇಕ್​ ಸಾಕಷ್ಟು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿತ್ತು. ಅಂತೆಯೇ ಇತ್ತೀಚೆಗೆ ನಿರ್ದೇಶಕ ಸುಕ್ಕಾ ಸೂರಿ ಅವರೊಂದಿಗೆ ಯಂಗ್​ ರೆಬೆಲ್​ ಸ್ಟಾರ್​ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಈಗ ಆ ಸುದ್ದಿಗೆ ಪುಷ್ಠಿ ನೀಡುವಂತೆ ಚಿತ್ರತಂಡ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದೆ.

Suri and Abhshek Ambareesh's New Movie Bad Manners Poster is out now
ಬ್ಯಾಡ್​ ಮ್ಯಾನರ್ಸ್​ ಸಿನಿಮಾದ ಪೋಸ್ಟರ್​


ಸೂರಿ ನಿರ್ದೇಶನದಲ್ಲಿ ಅಭಿಷೇಕ್​ ನಟಿಸುತ್ತಿರುವುದು ಖಚಿತವಾಗಿದೆ. ಈ ಸಿನಿಮಾಗೆ 'ಬ್ಯಾಡ್​ ಮ್ಯಾನರ್ಸ್'​ ಎಂಬ ಟೈಟಲ್​ ಇಡಲಾಗಿದ್ದು, ಚಿತ್ರದ ಪೋಸ್ಟರ್​ನಲ್ಲಿ ಅಭಿಷೇಕ್​ ಸಖತ್ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಪಿಸ್ತೂಲ್​ ಹಿಡಿದು ಪಕ್ಕಾ ಮಾಸ್ ಸಿನಿಮಾದ ನಾಯಕನಂತೆ ಕಾಣುತ್ತಿದ್ದಾರೆ.

ಅಂಬರೀಷ್​ ಹುಟ್ಟುಹಬ್ಬದಂದು ಮೋಷನ್​ ಪೋಸ್ಟರ್ ಬಿಡುಗಡೆ

ಈ ಸಿನಿಮಾದ ಮೋಷನ್​ ಪೋಸ್ಟರ್ ಇದೇ ಶುಕ್ರವಾರ ಅಂದರೆ ಅಂಬರೀಷ್​ ಅವರ ಹುಟ್ಟುಹಬ್ಬ ಮೇ 29ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದೆಯಂತೆ ಚಿತ್ರತಂಡ. ಇನ್ನು ರೊಮ್ಯಾಂಟಿಕ್​ ಲವ್​ ಸ್ಟೋರಿಯಲ್ಲಿ ಅಭಿನಯಿಸಿದ್ದ ಅಭಿಷೇಕ್​ ಈ ಸಲ ಪಕ್ಕಾ ಕಮರ್ಷಿಲ್​ ಸಿನಿಮಾದಲ್ಲಿ ನಟಿಸಲಿದ್ದಾರಂತೆ.

Suri and Abhshek Ambareesh's New Movie Bad Manners Poster is out now
ಬ್ಯಾಡ್​ ಮ್ಯಾನರ್ಸ್​ ಸಿನಿಮಾದಲ್ಲಿ ಅಭಿಷೇಕ್​ ಲುಕ್​
ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಪ್ರಕಟಿಸುವ ಮುನ್ನ ಅಂದರೆ ಲಾಕ್​ಡೌನ್​ನಲ್ಲಿ ಈ ಬಗ್ಗೆ ಅಭಿಷೇಕ್​ ಹಾಗೂ ಸೂರಿ ನಡುವೆ ಹಲವಾರು ಸುತ್ತುಗಳ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Rashmika Mandanna: ಜೊತೆಗೆ ಕೆಲಸ ಮಾಡುವವರ ಸಂಬಳ ಕಡಿತ ಗೊಳಿಸುವುದಾಗಿ ಹೇಳಿದ ರಶ್ಮಿಕಾ..!

ಸುಧೀರ್​ ಕುಮಾರ್​ ನಿರ್ಮಾಣದ ಈ ಸಿನಿಮಾಗೆ ಚರಣ್​ ರಾಜ್​ ಸಂಗೀತ ನೀಡಲಿದ್ದಾರೆ. ಶೇಖರ್ ಅವರ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದೆ. ಉಳಿದಂತೆ ನಾಯಕಿ ಸೇರಿದಂತೆ ಇತರ ತಾರಾ ಬಳಗದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಲಾಕ್​ಡೌನ್​ ಮುಗಿದ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

Kangana Ranaut: 48 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಕಂಗನಾರ ಈ ಪ್ರೊಡಕ್ಷನ್​ ಹೌಸ್​..!

First published: May 27, 2020, 7:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading