Mouni Roy: ಮುಖದ ಶಸ್ತ್ರ ಚಿಕಿತ್ಸೆಯಿಂದ ಅಂದ ಕೆಡಿಸಿಕೊಂಡರಾ ಕೆ.ಜಿ.ಎಫ್.ನಲ್ಲಿ ಯಶ್​ ಜತೆ ಹೆಜ್ಜೆ ಹಾಕಿದ್ದ ಈ​ ನಟಿ..!

Bharat Movie Premier: ಕಿರುತೆರೆಯಲ್ಲಿ ನಾಗಿನ್​ ಧಾರಾವಾಹಿಯಲ್ಲಿ ಸೀಸನ್​ 1-2 ರಲ್ಲಿ ಪ್ರೇಕ್ಷಕರ ಮನ ಗೆದ್ದ ನಂತರ ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದ ನಟಿ ಮೌನಿ ರಾಯ್​. ಇತ್ತೀಚೆಗಷ್ಟೆ ಭಾರತ್​ ಚಿತ್ರದ ಪ್ರೀಮಿಯರ್​ಗೆ ಬಂದಿದ್ದ ಮೌನಿ ಈಗ ಟ್ರಾಲ್​ ಆಗುತ್ತಿದ್ದಾರೆ. ಅದು ಸಹ ಅವರು ಮಾಡಿಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಮುಖದ ಸರ್ಜರಿ ಕಾರಣಕ್ಕೆ.

Anitha E | news18
Updated:June 8, 2019, 4:34 PM IST
Mouni Roy: ಮುಖದ ಶಸ್ತ್ರ ಚಿಕಿತ್ಸೆಯಿಂದ ಅಂದ ಕೆಡಿಸಿಕೊಂಡರಾ ಕೆ.ಜಿ.ಎಫ್.ನಲ್ಲಿ ಯಶ್​ ಜತೆ ಹೆಜ್ಜೆ ಹಾಕಿದ್ದ ಈ​ ನಟಿ..!
ನಟಿ ಮೌನಿ ರಾಯ್​
  • News18
  • Last Updated: June 8, 2019, 4:34 PM IST
  • Share this:
ಸಿನಿಮಾ ಜಗತ್ತು ಬಣ್ಣದ ಲೋಕ... ಇಲ್ಲಿ ತಾರೆಯರಾಗಿ ಮಿಂಚುವ ಆಸೆಯಿಂದ ಬರುವ ಹೆಣ್ಣು ಮಕ್ಕಳು ಸಾಕಷ್ಟು ಕಷ್ಟಪಡುತ್ತಾರೆ. ಅದರಲ್ಲೂ ಇರುವ ನೈಜ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಕಾಸೆಮೆಟಿಕ್ಸ್​ ಹಾಗೂ ಸರ್ಜರಿಗಳ ಮೊರೆ ಹೋಗುತ್ತಾರೆ. ಆದರೆ ಮುಖದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡದವರಲ್ಲಿ ಸೌಂದರ್ಯ ಹಾಳು ಮಾಡಿಕೊಂಡವರೇ ಹೆಚ್ಚು.

ಸದ್ಯ 'ಕೆ.ಜಿ.ಎಫ್​ ಚಾಪ್ಟರ್ 1'ರಲ್ಲಿ ಯಶ್​ ಜತೆ ಹಿಂದಿ ಅವತರಣಿಕೆಯ ಚಿತ್ರದಲ್ಲಿ 'ಗಲಿ ಗಲಿ ಮೇ' ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಮೌನಿ ರಾಯ್​ ಕಳೆದ ಕೆಲ ದಿನಗಳಿಂದ ಟ್ರಾಲ್​ ಆಗುತ್ತಿದ್ದಾರೆ. ಹೌದು, ಅವರು ಮಾಡಿಸಿಕೊಂಡಿರುವ ಮುಖದ ಶಸ್ತ್ರ ಚಿಕಿತ್ಸೆಯಿಂದಾಗಿ ಅವರ ಅಂದ ಹಾಳಾಗಿದ್ದು, ಅವರು ರಾಖಿ  ಸಾವಂತ್​ ಅವರಂತೆ ಕಾಣಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್​ ಮಾಡಲಾಗುತ್ತಿದೆ.

Mouni Roy
ಬಾಲಿವುಡ್​ ನಟಿ ಮೌನಿ ರಾಯ್​


ಇತ್ತೀಚೆಗೆ ಸಲ್ಮಾನ್​ ಖಾನ್​ ಅಭಿನಯದ 'ಭಾರತ್​' ಸಿನಿಮಾ ಬಿಡಗಡೆಯಾಗಿದ್ದು, ಅದರ ಪ್ರೀಮಿಯರ್​ ಶೋಗೆ ಮೌನಿ ಸಹ ಬಂದಿದ್ದರು. ಅಲ್ಲಿ ಅವರು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಆ ಚಿತ್ರ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ಚಿತ್ರದಲ್ಲಿ ಅವರ ತುಟಿಗಳು ಎಲ್ಲರ ಗಮನ ಸೆಳೆದಿದೆ.

ಅವರ ಈ ಫೋಟೊ ನೋಡಿದ ಜಾಲತಾಣಿಗರು ಅವರ ತುಟಿಗಳಿಗೆ ಏನಾಗಿದೆ...? ಮುಖಕ್ಕೆ ಮಾಡಿಸಿಕೊಂಡ ಸರ್ಜರಿ ವಿಫಲವಾಯಿತಾ ..? ಸಹಜ ಸೌಂದರ್ಯವನ್ನು ಏಕೆ ಒಪ್ಪಿಕೊಳ್ಳಲಿಲ್ಲ ಎಂದೆಲ್ಲ ಟ್ರಾಲ್​ ಮಾಡುತ್ತಿದ್ದಾರೆ.

ಆದರೆ ಮೌನಿ ರಾಯ್​ಗೆ ಬೆಂಬಲವಾಗಿ ಕೆಲವರು ಟ್ರಾಲ್​ ಮಾಡಿದವರಿಗೆ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ. ಅವರ ಜೀವನ ಅವರಿಷ್ಟ. ಅವರು ತುಂಬಾ ಚೆನ್ನಾಗಿಯೇ ಕಾಣುತ್ತಿದ್ದಾರೆ. ಅವರ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ನಿಮಗಿಲ್ಲ ಎಂದೆಲ್ಲ ಕೆಲವರು ಬೆಂಬಲಿಸಿದ್ದಾರೆ.

Mouni Roy Photos: ಮುದ್ದಾದ ನಗು ಮೊಗದ 'ಕೆ.ಜಿ.ಎಫ್' ಸಿನಿಮಾದ ನಟಿ ಮೌನಿ ರಾಯ್​

 

 

 
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ