ಪ್ರಿಯಾ ಪ್ರಕಾಶ್​ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ಅನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್​..!

news18
Updated:August 31, 2018, 1:10 PM IST
ಪ್ರಿಯಾ ಪ್ರಕಾಶ್​ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ಅನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್​..!
ನಟಿ ಪ್ರಿಯಾ ಪ್ರಕಾಶ್
news18
Updated: August 31, 2018, 1:10 PM IST
ನ್ಯೂಸ್​ 18 ಕನ್ನಡ 

ಕೇವಲ ತನ್ನ ಕಣ್​ ಸನ್ನೆ ಮೂಲಕವೇ ರಾತ್ರೋರಾತ್ರಿ ಸ್ಟಾರ್​ ಆಗಿದ್ದ ಪ್ರಿಯಾ ಪ್ರಕಾಶ್​ ಯಾರಿಗೆ ಗೊತ್ತಿಲ್ಲ ಹೇಳಿ. ಮಲಯಾಳಂನ 'ಒರು ಆಡಾರ್​ ಲವ್​' ಸಿನಿಮಾದ ಒಂದು ದೃಶ್ಯದಲ್ಲಿ ಕಣ್ಣು ಹೊಡೆಯುವ ದೃಶ್ಯದ ಮೂಲಕವೇ ಪಡ್ಡೆ ಹುಡುಗರ ನಿದ್ದೆಗೆಡುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ದೂಳೆಬ್ಬಿಸಿದ್ದ ಚೆಲುವೆ ಈಕೆ.

ಈ ಸಿನಿಮಾದಲ್ಲಿರುವ ‘ಮಾಣಿಕ್ಯ ಮಲರಾಯ ಪೂವಿ’ ಈ ಹಾಡಿನಲ್ಲಿ ಮುಸ್ಲಿಂರ ಭಾವನೆಗಳಿಗೆ ನೋವಾಗುವ ಅಂಶಗಳಿವೆ ಎಂದು ಹಾಡಿನಲ್ಲಿ ಅಭಿನಯಿಸಿರುವ ಪ್ರಿಯಾ, ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​ ಈಗ ಪ್ರಿಯಾ ಪ್ರಕಾಶ್​ ವಾರಿಯರ್​, ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ದಾಖಲಾಗಿರುವ ಎಫ್​ಐಆರ್​ ಅನ್ನು ರದ್ದುಗೊಳಿಸಿ ಆದೇಶ ನೀಡಿದೆ.

ಫೆ.14ರಂದು ಹೈದರಾಬಾದಿನಲ್ಲಿ ಕೆಲ ಮುಸ್ಲಿಂ ಯುವಕರು ಈ ಹಾಡನ್ನು ನಿಷೇಧಿಸಬೇಕು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಾಡನ್ನು ಇಂಗ್ಲಿಷ್​ಗೆ ಅನುವಾದ ಮಾಡಿದರೆ ಅದರಲ್ಲಿ ಮೊಹಮ್ಮದ್​ ಪೈಗಂಬರ್​ ಅವರಿಗೆ ಅವಮಾನ ಮಾಡುವ ಪದಗಳಿವೆ ಎಂದು ದೂರುದಾರರು ಆರೋಪಿಸಿದ್ದರು.

ಸೆಂಟ್ರಲ್​ ಬೋರ್ಡ್​ ಆಫ್​ ಪಿಲ್ಮ್​ ಸರ್ಟಿಫಿಕೇಟ್​ಗೆ ಮುಂಬೈನ ರಜಾ ಅಕಾಡೆಮಿ ಈ ಸಿನಿಮಾದ ಹಾಡನ್ನು ನಿಷೇಧಿಸುವಂತೆ ಪತ್ರ ಬರೆದಿತ್ತು. ಈ ದೂರು ದಾಖಲಾಗುತ್ತಿದ್ದಂತೆ ಪ್ರಿಯಾ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು. ಆಗ ಇಂತಹ ದೂರುಗಳನ್ನು ನೀಡಲು ಬಂದರೆ, ಅದಕ್ಕೆ ಸೊಪ್ಪಾಕದಂತೆ ನ್ಯಾಯಾಲಯ ತೆಲಂಗಾಣ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಿ, ಎಫ್​ಐಆರ್​ಗೆ ತಡೆ ನೀಡಿತ್ತು.
Loading...

ಪ್ರಿಯಾ ವಾರಿಯರ್​ ವಿರುದ್ಧದ ದಾಖಲಾಗಿದ್ದ ದೂರಿನ ಕುರಿತು ಹೆಚ್ಚಿನ ಮಾಹಿತಿಗೆ ಈ ಲಿಂಕ್​ ಕ್ಲಿಕ್​ ಮಾಡಿ...

https://kannada.news18.com/news/national-international/complaint-against-priya-warier-10357.html

ಕಳೆದ ಫೆಬ್ರುವರಿಯಲ್ಲಿ ಪ್ರಿಯಾ ಇದ್ದಕ್ಕಿಂದತೆ ಸ್ಟಾರ್ ಆದ ಸಮಯದಲ್ಲಿ ಆಕೆಯ ಕುರಿತಾಗಿ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅದರಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದ ಕಾಲೇಜು ಕುರಿತಾದ ಸುದ್ದಿ ಸಹ ಒಂದಾಗಿತ್ತು.

ಪ್ರಿಯಾ ಓದುತ್ತಿದ್ದ  ಕಾಲೇಜಿನಲ್ಲಿ, ಆಕೆಯ ವಿರುದ್ಧ ಹಬ್ಬಿದ್ದ ಸುಳ್ಳು ಸುದ್ದಿ ಕುರಿತು ಓದಲು ಈ ಲಿಂಕ್​ ಕ್ಲಿಕ್​ ಮಾಡಿ.....

https://kannada.news18.com/news/trend/fake-news-about-priya-prakash-winking-22559.html

ಪ್ರಿಯಾ ರಾತ್ರೋರಾತ್ರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಆ ಸಂದರ್ಭದಲ್ಲಿ ಪ್ರಿಯಾ ಅವರನ್ನು ಬಿ-ಟೌನ್​ನ ದೊಡ್ಡ ದೊಡ್ಡ ನಿರ್ಮಾಪಕರು ಪ್ರಿಯಾ ಪ್ರಕಾಶ್ ಅವರನ್ನು ತಮ್ಮ ಸಿನಿಮಾಗಳಿಗೆ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು. ಆಗ ಪ್ರಿಯಾರನ್ನು ಸಿನಿಮಾಗೆ ತೆಗೆದುಕೊಳ್ಳುವ ವಿಷಯದಲ್ಲಿ ಬಿ-ಟೌನ್​ನ ದೊಡ್ಡ ನಿರ್ಮಾಪಕರಿಬ್ಬರ ನಡುವೆ ಜಗಳ ಸಹ ಆಗಿತ್ತು. ಇದರ ಬಗ್ಗೆ ಓದಲು ಇಲ್ಲಿದೆ ಲಿಂಕ್​

https://kannada.news18.com/news/trend/producer-karan-johar-and-naadiyaadvaala-fighting-due-to-priya-prakash-21253.html

 

 

 

 
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...