• Home
  • »
  • News
  • »
  • entertainment
  • »
  • Shah Rukh Khan: ಗೌರಿ ಖಾನ್ ತನ್ನನ್ನು ಬಿಟ್ಟು ಹೋಗ್ತೇನೆ ಅಂತ ಹೆದರಿಸಿದ್ರೆ ಶಾರುಖ್ ಖಾನ್ ಸಿಟ್ಟಲ್ಲಿ ಏನ್ ಮಾಡ್ತಾರಂತೆ ಗೊತ್ತಾ?

Shah Rukh Khan: ಗೌರಿ ಖಾನ್ ತನ್ನನ್ನು ಬಿಟ್ಟು ಹೋಗ್ತೇನೆ ಅಂತ ಹೆದರಿಸಿದ್ರೆ ಶಾರುಖ್ ಖಾನ್ ಸಿಟ್ಟಲ್ಲಿ ಏನ್ ಮಾಡ್ತಾರಂತೆ ಗೊತ್ತಾ?

ಶಾರುಖ್ ಖಾನ್ ಮತ್ತು ಗೌರಿ ಖಾನ್

ಶಾರುಖ್ ಖಾನ್ ಮತ್ತು ಗೌರಿ ಖಾನ್

ಶಾರುಖ್ ಖಾನ್ ದಿನವಿಡೀ ವಿಡಿಯೋ ಗೇಮ್ ಗಳನ್ನು ಆಡಿದ್ದಕ್ಕಾಗಿ ಗೌರಿ ಖಾನ್ ಹೇಗೆ ಕಿರುಚುತ್ತಾಳೆ ಎಂಬುದನ್ನು ವಿವರಿಸಿದರು ಮತ್ತು ಅವರು ಶಾರುಖ್ ನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದರೆ ತಾನು ಏನು ಮಾಡುವೆ ಎಂಬುದರ ಬಗ್ಗೆಯೂ ಸಹ ಹೇಳಿಕೊಂಡಿದ್ದಾರೆ ನೋಡಿ.

  • Share this:

ಹೆಂಡತಿ (Wife) ಸ್ವಲ್ಪ ದಿನದ ಮಟ್ಟಿಗೆ ತನ್ನ ತವರು ಮನೆಗೆ ಹೋಗಿ ಬಂದರೆ, ಗಂಡಂದಿರಗೆ (Husband) ಅಷ್ಟೊಂದು ತೊಂದರೆ ಆಗುವುದಿಲ್ಲ. ಅದೇ ಶಾಶ್ವತವಾಗಿ ಬಿಟ್ಟು ಹೋಗುತ್ತೇನೆ ಅಂತ ಬೆದರಿಕೆ ಹಾಕಿದರೆ ಸಾಕು, ಎಂತಹ ಗಂಡನಿಗೂ ಭಯ ಶುರುವಾಗುವುದು ಗ್ಯಾರೆಂಟಿ ಎಂದು ಹೇಳಬಹುದು. ತನ್ನ ಸ್ಟೈಲ್ ಮತ್ತು ನಟನೆಯಿಂದ (Acting) ಅನೇಕ ಹುಡುಗಿಯರ ಮನಗೆದ್ದ ಶಾರುಖ್ ಖಾನ್ (Shah Rukh Khan) ಮತ್ತು ಅವರ ಹೆಂಡತಿ ಗೌರಿ ಖಾನ್ (Gauri Khan) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ? ಹೌದು..ಬಾಲಿವುಡ್ ನಲ್ಲಿ ಶಾರುಖ್ ಅವರಿಗೆ ಇದ್ದಷ್ಟು ಅಭಿಮಾನಿಗಳು ತುಂಬಾನೇ ಕಡಿಮೆ ನಟರಿಗೆ ಇರಬಹುದು.


ಶಾರುಖ್ ಮತ್ತು ಗೌರಿ ಮದುವೆ ಆಗಿ ಮೂರು ದಶಕಗಳೆ ಕಳೆದಿವೆ..
ನಟ ಶಾರುಖ್ ಖಾನ್ ಮತ್ತು ಅವರ ಪತ್ನಿ, ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಮದುವೆಯಾಗಿ ಮೂರು ದಶಕಗಳು ಕಳೆದಿವೆ, ಮತ್ತು ಇವರಿಬ್ಬರು ದಂಪತಿಗಳು ಸಂದರ್ಭ ಸಿಕ್ಕಾಗಲೆಲ್ಲಾ ಪರಸ್ಪರರ ಬಗ್ಗೆ ಮಾತನಾಡುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ.


ಶಾರುಖ್ ಒಮ್ಮೆ ಟಾಕ್ ಶೋ ವೊಂದರಲ್ಲಿ ಕಾಣಿಸಿಕೊಂಡರು ಮತ್ತು ಅವರ ವೈವಾಹಿಕ ಜೀವನದ ಅತ್ಯಂತ ನಿಯಮಿತ ಚಿತ್ರವನ್ನು ಚಿತ್ರಿಸಿದರು. ಫರೀದಾ ಜಲಾಲ್ ಅವರೊಂದಿಗೆ ಮಾತನಾಡಿದ ಶಾರುಖ್, ತನ್ನನ್ನು ತಾನು 'ಹೆಂಡತಿಯ ಆಜ್ಞೆಯನ್ನು ಪಾಲಿಸುವ ಪತಿ ಎಂದು ಕರೆದುಕೊಳ್ಳುತ್ತಾರೆ.


ದಿನವಿಡೀ ವಿಡಿಯೋ ಗೇಮ್ ಗಳನ್ನು ಆಡಿದ್ದಕ್ಕಾಗಿ ಗೌರಿ ತನ್ನ ಮೇಲೆ ಹೇಗೆ ಕಿರುಚುತ್ತಾಳೆ ಎಂಬುದನ್ನು ವಿವರಿಸಿದರು ಮತ್ತು ಅವರು ಶಾರುಖ್ ನನ್ನು ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದರೆ ತಾನು ಏನು ಮಾಡುವೆ ಎಂಬುದರ ಬಗ್ಗೆಯೂ ಸಹ ಹೇಳಿಕೊಂಡಿದ್ದಾರೆ ನೋಡಿ.


ಫರೀದಾ ಜಲಾಲ್ ಕೇಳಿದ ಆ ಪ್ರಶ್ನೆ ಏನು ನೋಡಿ
ಈ ಚಾಟ್ 1997 ರಲ್ಲಿ ನಡೆಯಿತು ಅಂತ ಹೇಳಬಹುದು.. ಫರೀದಾ ಜಲಾಲ್ ಅವರು ಶಾರುಖ್ ಅವರ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಮತ್ತು ಮಹಿಳೆಯರೊಂದಿಗೆ ಅವರ ಜನಪ್ರಿಯತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.


ಇದನ್ನೂ ಓದಿ:  Actor Upendra: ಹಂಪಿಗೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ!


ಅವರು ಒಂದು ಪ್ರಶ್ನೆ "ಒಂದು ಕ್ಷಣ ಯೋಚಿಸಿ, ಒಂದು ದಿನ ಬೆಳಿಗ್ಗೆ ಗೌರಿ ತಾನು ನಿಮ್ಮಿಂದ ಸಂಪೂರ್ಣವಾಗಿ ಬೇಸರಗೊಂಡಿದ್ದೇನೆಂದು ಹೇಳಿ ವಿದಾಯ ಹೇಳಿ ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಗಾದಾಗ ನೀವು ಏನು ಮಾಡುತ್ತೀರಿ?" ಅಂತ ಕೇಳಿದರು.


ಶಾರುಖ್ ಏನ್ ಉತ್ತರ ನೀಡಿದ್ದಾರೆ?
ಶಾರುಖ್ ಸ್ವಲ್ಪ ಸಮಯ ಯೋಚಿಸಿ "ಕೇವಲ ಒಂದು ಬೆಳಿಗ್ಗೆ ಮಾತ್ರವಲ್ಲ, ಅವಳು ಪ್ರತಿದಿನ ಬೆಳಿಗ್ಗೆ ಇದನ್ನು ಹೇಳುತ್ತಾಳೆ" ಎಂದು ನಟ ಹೇಳಿದರು. ಆದರೆ ಫರೀದಾ ಜಲಾಲ್ ಇನ್ನೂ ನಿಖರವಾದ ಉತ್ತರವನ್ನು ಬಯಸಿದ್ದರು. ಹಾಗಾಗಿ ಇನ್ನೂ ಸ್ವಲ್ಪ ಕೆಣುಕಿ ಕೆಣುಕಿ ಕೇಳಿದರು.


ನಂತರ, ಶಾರುಖ್ "ಅವಳು ಎಂದಾದರೂ ಈ ರೀತಿಯಾಗಿ ನನ್ನನ್ನು ಬಿಟ್ಟು ಹೋದರೆ... ಅವಳು ಹಾಗೆ ಮಾಡಬಾರದು, ಏಕೆಂದರೆ ನಾನು ತುಂಬಾ ಒಳ್ಳೆಯ ಗಂಡ ಆಗಿದ್ದೇನೆ. ಆದರೂ ಸಹ ಆಕೆ ಹಾಗೆ ಮಾಡಿದರೆ, ನಾನು ನನ್ನ ಬಟ್ಟೆಗಳನ್ನು ಹರಿದುಕೊಂಡು ನಡು ಬೀದಿಯಲ್ಲಿ ನಿಂತು 'ಓ ಗೋರಿ ಗೋರಿ, ಓ ಬಂಕಿ ಚೋರಿ' ಅಂತ ಹಾಡು ಹೇಳುತ್ತೇನೆ ಮತ್ತು ಅವಳು ಹಾಡು ಕೇಳಿ ತಕ್ಷಣವೇ ಹಿಂತಿರುಗಿ ಬರುತ್ತಾಳೆ ಎಂದು ನನಗೆ ಖಾತ್ರಿಯಿದೆ" ಎಂದು ನಟ ಹೇಳಿದರು.


ಇದನ್ನೂ ಓದಿ: Raghu Dixit: ಕನ್ನಡದ ವಿಶೇಷ ಕಂಠಸಿರಿಯ ಗಾಯಕನಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲ್ಮ್ ಫೇರ್ ಗೌರವ


ತಮ್ಮ ವಿವಾಹ ಸಮಾರಂಭದ ಬಗ್ಗೆಯೂ ಮಾತನಾಡಿದ ಶಾರುಖ್, ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸಲು ಅವರು ಬಯಸದ ಕಾರಣ, ಅವರು ಈ ಪ್ರಕ್ರಿಯೆಯಲ್ಲಿ ಅತಿಯಾಗಿ ತೊಡಗಿಸಿಕೊಂಡರು ಮತ್ತು ಪಂಡಿತರು ಹೇಳಿದ್ದನ್ನೆಲ್ಲವನ್ನು ಕೇಳುತ್ತಲೇ ಇದ್ದರು ಎಂದು ಹೇಳಿದರು. ಕೊನೆಯಲ್ಲಿ ಅವರ ಅತ್ತೆ ಮತ್ತು ಮಾವ ಶಾರುಖ್ ಗೆ 'ಅದನ್ನು ತುಂಬಾ ಗಂಭೀರವಾಗಿ ಪರಿಗಣಿಸಬೇಡಿ'. ಎಂದು ಹೇಳಿದ್ದರಂತೆ ಎಂದು ನಟ ಹೇಳಿದರು.

Published by:Ashwini Prabhu
First published: