KGF Chapter 2: ಕನ್ನಡದಲ್ಲೇ ಕೆಜಿಎಫ್​ 2 ನೋಡಿದ `ತಲೈವಾ’! ರಾಕಿ ಆರ್ಭಟ ಕಂಡು ಹಿಂಗಂದ್ರು ರಜನಿಕಾಂತ್​

ಚಿತ್ರತಂಡದ ಶ್ರಮಕ್ಕೆ ‘ಸೂಪರ್​ಸ್ಟಾರ್’(Super Star) ಕಡೆಯಿಂದಲೇ ಶಹಬ್ಬಾಸ್​ಗಿರಿ ಸಿಕ್ಕಿದೆ. ಹೌದು, ತಲೈವಾ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ರಜನಿಕಾಂತ್ (Rajinikanth) ಚೆನ್ನೈನಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ವೀಕ್ಷಿಸಿದ್ದಾರೆ.

ಯಶ್​, ರಜನಿಕಾಂತ್​

ಯಶ್​, ರಜನಿಕಾಂತ್​

  • Share this:
ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ಗೆ (KGF Chapter 2) ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಚಿತ್ರವನ್ನು ವೀಕ್ಷಿಸಿದ ದಿಗ್ಗಜರು ಚಿತ್ರತಂಡದ ಪರಿಶ್ರಮಕ್ಕೆ, ದೊಡ್ಡ ಚಿತ್ರವೊಂದನ್ನು ಕಟ್ಟಿಕೊಟ್ಟ ಬಗೆಗೆ ಮನಸೋತಿದ್ದಾರೆ. ಎಲ್ಲಾ ಭಾಷೆಯ ಘಟಾನುಘಟಿ ಕಲಾವಿದರು ಕೆಜಿಎಫ್​ 2 ಗೆ ಮನಸೋತಿದ್ದಾರೆ. ಸೋಷಿಯಲ್​ ಮೀಡಿಯಾ(Social Media)ದಲ್ಲಿ ಕೆಜಿಎಫ್​ 2 ಸಿನಿಮಾ ಹಾಗೂ ರಾಕಿಂಗ್​ ಸ್ಟಾರ್(Rocking Star)​ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಚಿತ್ರತಂಡದ ಶ್ರಮಕ್ಕೆ ‘ಸೂಪರ್​ಸ್ಟಾರ್’(Super Star) ಕಡೆಯಿಂದಲೇ ಶಹಬ್ಬಾಸ್​ಗಿರಿ ಸಿಕ್ಕಿದೆ. ಹೌದು, ತಲೈವಾ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ರಜನಿಕಾಂತ್ (Rajinikanth) ಚೆನ್ನೈನಲ್ಲಿ ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ವೀಕ್ಷಿಸಿದ್ದಾರೆ. ರಾಕಿಂಗ್ ಸ್ಟಾರ್​ ಆರ್ಭಟಕ್ಕೆ ರಜನಿಕಾಂತ್​ ಮನಸೋತಿದ್ದಾರೆ. ಹಾಗಿದ್ದರೆ, ಕೆಜಿಎಫ್​ 2 ನೋಡಿ ರಜನಿಕಾಂತ್​ ಹೇಳಿದ್ದೇನು? ಮುಂದೆ ನೋಡಿ..

ಕೆಜಿಎಫ್​ 2 ಅಬ್ಬರಕ್ಕೆ ರಜನಿ ಫಿದಾ!

ಕೆಜಿಎಫ್​ 2 ಕಥೆ ಹಾಗೂ ಅದ್ದೂರಿ ಮೇಕಿಂಗ್​ಗೆ ಸೂಪರ್​ ಸ್ಟಾರ್​ ರಜನಿಕಾಂತ್​ ಮಾರುಹೋಗಿದ್ದಾರೆ. ವಿಶೇಷವೆಂದರೆ ರಜನಿ ಕನ್ನಡ ಅವತರಣಿಕೆಯಲ್ಲೇ ‘ಕೆಜಿಎಫ್ 2’ ವೀಕ್ಷಿಸಿದ್ದಾರೆ. ಈ ಬಗ್ಗೆ ಹಲವರು ಟ್ವೀಟ್ ಮಾಡಿದ್ದು, ರಜನಿ ಚಿತ್ರ ನೋಡಿದ ನಂತರ ನೀಡಿದ ಪ್ರತಿಕ್ರಿಯೆಯ ಬಗ್ಗೆ ಬರೆದುಕೊಂಡಿದ್ದಾರೆ.  ಬಾಕ್ಸಾಫೀಸ್ ವಿಶ್ಲೇಶಕ ಹಾಗೂ ಸಿನಿಮಾ ವಿಮರ್ಶಕರಾದ ರಮೇಶ್ ಬಾಲಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಚಿತ್ರ ವೀಕ್ಷಿಸಿದ ರಜನಿ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕರೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ.

ಚಿತ್ರತಂಡಕ್ಕೆ ಶಹಬ್ಬಾಸ್​ಗಿರಿ ನೀಡಿದ ಸೂಪರ್​ ಸ್ಟಾರ್​!

ಅಭೂತಪೂರ್ವ ಪರಿಕಲ್ಪನೆಯನ್ನು ತೆರೆಗೆ ತಂದಿದ್ದಕ್ಕೆ ಹಾಗೂ ಅದನ್ನು ಸಾಧ್ಯವಾಗಿಸಿದ ಚಿತ್ರತಂಡಕ್ಕೆ ರಜಿನಿ ಶಹಬ್ಬಾಸ್​ಗಿರಿ ನೀಡಿದ್ದು, ಚಿತ್ರತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ ಎಂದು ರಮೇಶ್ ತಿಳಿಸಿದ್ದಾರೆ. ಮತ್ತೋರ್ವ ವಿಶ್ಲೇಷಕ ಮನೋಬಲ ವಿಜಯಬಾಲನ್ ಕೂಡ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಕೆಜಿಎಫ್’ ಚಿತ್ರತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ರಿಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.


ಇದನ್ನೂ ಓದಿ: ಟಚ್​ ಮಾಡೋದಿರ್ಲಿ, ಹತ್ತಿರ ಬರಕ್ಕೂ ಆಗಲ್ಲ! 2ನೇ ದಿನದ ಕಲೆಕ್ಷನ್​ ಕಂಡು ಬೆಚ್ಚಿಬಿದ್ದ ಸಿನಿ ಇಂಡಸ್ಟ್ರಿ

ಎರಡನೇ ದಿನ 240 ಕೋಟಿ ರೂಪಾಯಿ ಕಲೆಕ್ಷನ್​!

ಅಬ್ಬಬ್ಬಾ.. ಹೌದು, ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿರುವ ಪ್ರಕಾರ, ಎರಡು ದಿನಗಳಲ್ಲಿ ಚಿತ್ರ ಭಾರತದಲ್ಲಿ ಬರೋಬ್ಬರಿ 240 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವಿಚಾರ ತಿಳಿದು ರಾಕಿಂಗ್​ ಸ್ಟಾರ್ ಯಶ್​ ಅವರ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಬಾಲಿವುಡ್‌ನಲ್ಲಂತೂ ‘ಕೆಜಿಎಫ್: ಚಾಪರ್‌ 2’ ಸಿನಿಮಾ ಅಕ್ಷರಶಃ ಸುನಾಮಿಯೇ ಸೃಷ್ಟಿಸಿದೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹಿಂದಿ ವರ್ಷನ್ ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ‘ಕೆಜಿಎಫ್: ಚಾಪ್ಟರ್ 2’ ಹಿಂದಿ ವರ್ಷನ್ ಭಾರತದಲ್ಲಿ ಒಟ್ಟು 46.79 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ: ರಾಕಿ​ ಅಬ್ಬರದ ನಡುವೆ ದೊಡ್ಡದಾಗಿ ಸೌಂಡ್ ಮಾಡ್ತಿರೋ `ದೊಡ್ಡಮ್ಮ’! ಇದರ ಸ್ಪೆಷಾಲಿಟಿ ಏನ್​ ಅಂತ ಇಲ್ಲಿದೆ

ವರ್ಲ್ಡ್​ ವೈಡ್​ ಕೆಜಿಎಫ್​ 2 ಕಲೆಕ್ಷನ್​  ಎಷ್ಟು?

ವಿಶ್ವದಾದ್ಯಂತ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಎರಡು ದಿನಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಪಕ್ಕಾ ಸಾವಿರ ಕೋಟಿ ಕ್ಲಬ್​ ಸೇರುತ್ತೆ ಅಂತ ಸಿನಿಪಂಡಿತರು ಹೇಳುತ್ತಿದ್ದಾರೆ.

ಮೊದಲ ದಿನ 135 ಕೋಟಿ ಕಲೆಕ್ಷನ್​!

ಕೆಜಿಎಫ್​ 2 ಮೊದಲ ದಿನದಲ್ಲಿ 130 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ದಾಖಲೆಗಳನ್ನು ಧೂಳಿಪಟ ಮಾಡಿದೆ. ಸಾಧ್ಯತೆಯಿದೆ. ಕೆಜಿಎಫ್ ಚಾಪ್ಟರ್  2 ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಗಾಧವಾದ ಮೆಚ್ಚುಗೆ ಪಡೆಯುತ್ತಿದೆ. ಅತಿಹೆಚ್ಚು ಸ್ಕ್ರೀನ್‍ಗಳಲ್ಲಿ ಹೆಚ್ಚಿನ ಪ್ರದರ್ಶನ ಕಂಡಿರುವ ‘ಕೆಜಿಎಫ್-2’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿದೆ. ಕೆಜಿಎಫ್ 2 ಮುಂಬರುವ ದಿನಗಳಲ್ಲಿ ಇನ್ನೂ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಲಿದೆ ಎನ್ನಲಾಗುತ್ತಿದೆ.
Published by:Vasudeva M
First published: