• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಬೆಂಗಳೂರಿನ ಅಭಿಮಾನಿಗಾಗಿ ಸಖತ್ ಗಿಫ್ಟ್ ಕಳಿಸಿದ ಸೂಪರ್​ಸ್ಟಾರ್ ರಜನಿಕಾಂತ್, ವಿಡಿಯೋ ನೋಡಿ

ಬೆಂಗಳೂರಿನ ಅಭಿಮಾನಿಗಾಗಿ ಸಖತ್ ಗಿಫ್ಟ್ ಕಳಿಸಿದ ಸೂಪರ್​ಸ್ಟಾರ್ ರಜನಿಕಾಂತ್, ವಿಡಿಯೋ ನೋಡಿ

ರಜನೀಕಾಂತ್

ರಜನೀಕಾಂತ್

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೂಪರ್​ಸ್ಟಾರ್ ರಜನಿಕಾಂತ್ ಅಭಿಮಾನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ತಲೈವಾ ಆಕೆಗಾಗಿ ಒಂದು ಅದ್ಭುತ ಉಡುಗೊರೆ ನೀಡಿ ಬೇಗ ಗುಣಮುಖವಾಗುವಂತೆ ಹಾರೈಸಿದ್ದಾರೆ..ಏನದು ಉಡುಗೊರೆ?

  • Trending Desk
  • 3-MIN READ
  • Last Updated :
  • Share this:

ಬರೀ ತಮ್ಮ ಚಿತ್ರಗಳಲ್ಲಿನ ನಟನೆ ಮಾಡುವುದರಿಂದ ಸೂಪರ್ ಸ್ಟಾರ್ (Superstar) ಎಂದು ಎನಿಸಿಕೊಳ್ಳುವುದಿಲ್ಲ, ಅವರ ಚಿತ್ರೋದ್ಯಮದ (Movie business) ವೃತ್ತಿ ಬದುಕಿನ ಹೊರಗೂ ಅವರ ನೈಜ ಬದುಕಿನಲ್ಲಿ ಅಭಿಮಾನಿಗಳೊಂದಿಗೆ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ತಮ್ಮ ಚಿತ್ರಗಳಲ್ಲಿ ಅಮೋಘವಾದ ನಟನೆಯಿಂದಲ್ಲದೆ (Acting skills) ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವ ನೈತಿಕ ಮೌಲ್ಯಗಳಿಂದಾಗಿ ಮತ್ತು ಅವರ ವಿನಯತೆಗಾಗಿ ಗುರುತಿಸುವ ಸ್ಟಾರ್‌ಗಳ ಪಟ್ಟಿಯಲ್ಲಿ ರಜನಿಕಾಂತ್‌ (Rajinikanth) ಅವರು ಮೊದಲ ಸಾಲಿನಲ್ಲಿರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್‌ ಚಿಕಿತ್ಸೆಗಾಗಿ (Treatment) ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಅಭಿಮಾನಿಗಳು (Fans) ಆತಂಕ ವ್ಯಕ್ತಪಡಿಸಿದ್ದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಆರೋಗ್ಯ ವಿಚಾರಿಸುತ್ತಿದ್ದುದ್ದನ್ನು ನಾವೆಲ್ಲಾರೂ ನೋಡಿರುತ್ತೇವೆ ಮತ್ತು ಕೇಳಿದ್ದೇವೆ.


ಸೂಪರ್ ಸ್ಟಾರ್ ರಜನಿಕಾಂತ್‌ ತಮ್ಮ ಸರಳತೆ ಮತ್ತು ದಯೆಗೆ ಹೆಸರು ವಾಸಿಯಾಗಿದ್ದಾರೆ. ರಜನಿಕಾಂತ್‌ ದೇಶದ ದೊಡ್ಡ ತಾರೆಗಳಲ್ಲಿ ಒಬ್ಬರು ಏಕೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಟ ಅನಾರೋಗ್ಯದಿಂದ ಬಳಲುತ್ತಿರುವ ಅಭಿಮಾನಿಗೆ 30 ಸೆಕೆಂಡುಗಳ ಅವಧಿಯ ಒಂದು ವಿಶೇಷ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.


ಅಭಿಮಾನಿಗಾಗಿ ತಲೈವಾ ಹಾರೈಕೆ

ತಲೈವಾ ತಮ್ಮ ಅಭಿಮಾನಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು ಮತ್ತು ವೈಯಕ್ತಿಕವಾಗಿ ಅಭಿಮಾನಿಯನ್ನು ಭೇಟಿ ಮಾಡಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದರು. ಸ್ಟಾರ್ ನಟ "ಹಲೋ ಸೌಮ್ಯಾ, ಹೇಗಿದ್ದೀರಿ? ಚಿಂತಿಸಬೇಡಿ, ನೀವು ಶೀಘ್ರದಲ್ಲಿಯೇ ಗುಣಮುಖರಾಗುತ್ತೀರಿ. ಕ್ಷಮಿಸಿ ಕನ್ನಾ, ಈ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಮತ್ತು ನನ್ನ ಆರೋಗ್ಯವೂ ನಿಜವಾಗಿಯೂ ಸರಿಯಾಗಿಲ್ಲ, ಇಲ್ಲದಿದ್ದರೆ, ನಾನು ಖಂಡಿತವಾಗಿಯೂ ನಿಮ್ಮನ್ನು ಭೇಟಿ ಮಾಡುತ್ತಿದ್ದೆ. ನೀವು ಧೃತಿಗೆಡಬೇಡಿ, ದೇವರು ಇದ್ದಾನೆ ಮತ್ತು ನಾನು ನಿಮಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಚಿಂತೆ ಬೇಡ ಕನ್ನಾ, ನೀವು ಶೀಘ್ರದಲ್ಲಿಯೇ ಗುಣ ಮುಖರಾಗುತ್ತೀರಿ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: ಸೂಪರ್‌ಸ್ಟಾರ್ ರಜನಿಕಾಂತ್ ಒಟ್ಟು ಆಸ್ತಿ ಎಷ್ಟು ಗೊತ್ತಾ? ನೋಡಿದ್ರೆ ತಲೆ ತಿರುಗೋದು ಪಕ್ಕಾ!


ಎಲ್ಲಾ ಕಡೆ ಈಗ ಇದರದ್ದೇ ಚರ್ಚೆ

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ನಿವಾಸಿಯಾಗಿರುವ ಸೌಮ್ಯಾಗಾಗಿ ಈ ವಿಡಿಯೋ ಸಂದೇಶವನ್ನು ರಜನಿ ಕಳುಹಿಸಿದ್ದಾರೆ. ವರದಿಗಳ ಪ್ರಕಾರ, ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಮತ್ತು ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಡಿಯೋ ಸಂದೇಶವನ್ನು ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದು, 4 ಸಾವಿರಕ್ಕೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ. ಆ ವಿಡಿಯೋ ನೀವೂ ನೋಡಿ:

ನಿರ್ದೇಶಕ ಶಿವ ಅವರ 'ಅನ್ನಾಥೆ' ಚಿತ್ರದಲ್ಲಿ ಈ ಹಿಂದೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದ ಸೂಪರ್ ಸ್ಟಾರ್ ಇತ್ತೀಚೆಗೆ ಡಿಸೆಂಬರ್ 12ರಂದು ತಮ್ಮ 71ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಹುಟ್ಟುಹಬ್ಬದ ಆಚರಣೆಯ ಫೋಟೋಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡರು. ರಜನಿಕಾಂತ್ ಪುತ್ರಿ ಐಶ್ವರ್ಯಾ ಆರ್. ಧನುಷ್ ಮತ್ತು ಸೌಂದರ್ಯ ಸಹ ರಜನಿ ವಿಶೇಷ ದಿನದಂದು ಅವರೊಂದಿಗೆ ಹಾಜರಿದ್ದರು.


ಈ ಮಧ್ಯೆ, ರಜನಿಕಾಂತ್ ಯಾವುದೇ ಹೊಸ ಚಿತ್ರಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ತಲೈವಾ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯನ್ನು ದೊಡ್ಡ ಪರದೆಯಲ್ಲಿ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು.


Published by:Soumya KN
First published: