ಅಂಬಿ ಮಗನ ಚಿತ್ರದಲ್ಲಿ ನಟಿಸಲು ರಜಿನಿ ಹಂಬಲ: ಭಿಕ್ಷುಕನ ಪಾತ್ರವನ್ನಾದರೂ ಕೊಡಿ ಅಂದಿದ್ದರಂತೆ ತಲೈವಾ ?

ರೆಬೆಲ್‍ಸ್ಟಾರ್ ಅಂಬರೀಷ್ ಸ್ನೇಹಜೀವಿಯಾಗಿದ್ದವರು. ಅವರ ಸ್ನೇಹಪರತೆಗೆ ಮಾರು ಹೋಗದವರೇ ಇಲ್ಲ. ಅಂಬಿಯ ಜೊತೆ ಆತ್ಮೀಯ ಒಡನಾಟವನ್ನ ಹೊಂದಿದ್ದ ರಜನಿ, ಅಂಬಿಗಾಗಿ ಏನ್ ಬೇಕಾದರೂ ಮಾಡ್ತಿದ್ರು. ಇದಕ್ಕೆ ಸಾಕ್ಷಿ, ಅಂಬಿಯ ಮಗ ಅಭಿಷೇಕ್ ಸಿನಿಮಾ ಎಂಟ್ರಿ. ಈ ವಿಷಯ ಕೇಳಿನೇ ಖುಷಿಯಾಗಿದ್ದ ರಜನಿಕಾಂತ್, ಅಂಬಿ ಮಗನ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರವನ್ನಾದರೂ ಕೊಡು ಅಂತ ನಿರ್ದೇಶಕ ನಾಗ್‍ಶೇಖರ್​ಗೆ ಕೇಳಿಕೊಂಡಿದ್ದರಂತೆ.

Anitha E | news18
Updated:May 20, 2019, 2:51 PM IST
ಅಂಬಿ ಮಗನ ಚಿತ್ರದಲ್ಲಿ ನಟಿಸಲು ರಜಿನಿ ಹಂಬಲ: ಭಿಕ್ಷುಕನ ಪಾತ್ರವನ್ನಾದರೂ ಕೊಡಿ ಅಂದಿದ್ದರಂತೆ ತಲೈವಾ ?
ಅಭಿಷೇಕ್ ಅಂಬರೀಷ್​
  • News18
  • Last Updated: May 20, 2019, 2:51 PM IST
  • Share this:
ಕಲಿಯುಗ ಕರ್ಣ, ರೆಬೆಲ್‍ಸ್ಟಾರ್ ಅಂಬರೀಷ್ ಸ್ನೇಹಕ್ಕೆ ಇನ್ನೊಂದು ಹೆಸರು ಎಂಬಂತೆ ಇದ್ದವರು. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿಯೂ ಸ್ನೇಹಿತರಿದ್ದರು. ಅವರಲ್ಲಿ ಸೂಪರ್​ ಸ್ಟಾರ್​ ರಜಿನಿಕಾಂತ್ ಕೂಡ ಒಬ್ಬರು. ಇಂತಹ ರಜಿನಿ, ಸ್ನೇಹಿತ ಅಂಬಿಗಾಗಿ ಭಿಕ್ಷುಕನಾಗೋಕು ಸೈ ಅಂದಿದ್ದರಂತೆ.

ರೆಬೆಲ್‍ಸ್ಟಾರ್ ಅಂಬರೀಷ್ ಸ್ನೇಹಜೀವಿಯಾಗಿದ್ದವರು. ಅವರ ಸ್ನೇಹಪರತೆಗೆ ಮಾರು ಹೋಗದವರೇ ಇಲ್ಲ. ಅಂಬಿಯ ಜೊತೆ ಆತ್ಮೀಯ ಒಡನಾಟವನ್ನ ಹೊಂದಿದ್ದ ರಜನಿ, ಅಂಬಿಗಾಗಿ ಏನ್ ಬೇಕಾದರೂ ಮಾಡ್ತಿದ್ರು. ಇದಕ್ಕೆ ಸಾಕ್ಷಿ, ಅಂಬಿಯ ಮಗ ಅಭಿಷೇಕ್ ಸಿನಿಮಾ ಎಂಟ್ರಿ. ಈ ವಿಷಯ ಕೇಳಿನೇ ಖುಷಿಯಾಗಿದ್ದ ರಜನಿಕಾಂತ್, ಅಂಬಿ ಮಗನ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರವನ್ನಾದರೂ ಕೊಡು ಅಂತ ನಿರ್ದೇಶಕ ನಾಗ್‍ಶೇಖರ್​ಗೆ ಕೇಳಿಕೊಂಡಿದ್ದರಂತೆ.

ಇದನ್ನೂ ಓದಿ: Happy Birthday Sanvi: ಮಗಳ ಹುಟ್ಟುಹಬ್ಬಕ್ಕಾಗಿ ಮುಂಬೈನಿಂದ ಬಂದ ಕಿಚ್ಚ ಸುದೀಪ್​..!

ಒಂದು ಭಿಕ್ಷುಕನ ಪಾತ್ರವಾದ್ರೂ ಸರಿ, ಅಂಬಿ ಮಗನ ಮೊದಲ ಚಿತ್ರದಲ್ಲಿ ನಟಿಸಬೇಕು ನಾನು ಅಂತ ರಜನಿ ಆಸೆ ಪಟ್ಟಿದ್ದರಂತೆ. ಹೀಗಾಗಿ ನಿರ್ದೇಶಕರ ಬಳಿ ಕೇಳಿಕೊಂಡಿದ್ದರಂತೆ. ಆದರೆ ಈ ವಿಷಯವನ್ನ ಅಂಬರೀಷ್ ಅವರ ಬಳಿ ನಿರ್ದೇಶಕರು ಹೇಳಿಕೊಂಡಾಗ ಕಥೆಗೆ ಅವಶ್ಯವಾಗಿದ್ದರೆ, ಅವರಿಗೆ ಒಪ್ಪುವಂತಹ ಪಾತ್ರಗಳಿದ್ದರೆ ಮಾತ್ರ ಹೇಳು.. ಅವರು ಸಿಕ್ತಾರೆ ಅಂತ ಯಾವುದ್ಯಾವುದೋ ಪಾತ್ರವನ್ನ ಮಾಡಿಸಿದರೆ ಅವರ ಗೌರವ ಕಮ್ಮಿಯಾಗುತ್ತೆ ಅಂತ ಹೇಳಿದ್ದರಂತೆ ರೆಬೆಲ್‍ಸ್ಟಾರ್.

ಇನ್ನು 'ಅಮರ್' ಚಿತ್ರದಲ್ಲಿ ಕನ್ನಡದ ಹಲವು ತಾರೆಯರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಅಂಬಿಯ ದೊಡ್ಡ ಮಗನಂತಿದ್ದ ಚಾಲೆಂಜಿಂಗ್ ಸ್ಟಾರ್  ದರ್ಶನ್ ಪ್ರಮುಖರು. ಈ ಚಿತ್ರದ ಒಂದು ಬಹುಮುಖ್ಯ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.

ಹಾಗೆ ನಿರೂಪ್ ಭಂಡಾರಿ, ಡೈನಾಮಿಕ್ ಸ್ಟಾರ್ ದೇವರಾಜ್, ನಟಿ ರಚಿತಾ ಸಹ 'ಅಮರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಇವರೆಲ್ಲ ಒಟ್ಟಾಗಿ ಕುಣಿದಿರೋ 'ಜೋರು ಪಾಟ್ಟು...' ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ಸಿನಿರಸಿಕರಿಂದ ಸಖತ್ ಪ್ರತಿಕ್ರಿಯೆ ಸಿಕ್ತಿದೆ.

ಇದನ್ನೂ ಓದಿ: ಗೌರವ ಸಿಕ್ಕಿಲ್ಲ ಅಂತ ಅಕ್ಷಯ್​ ಕುಮಾರ್​ ಅಭಿನಯದ 'ಲಕ್ಷ್ಮಿ ಬಾಂಬ್​' ಸಿನಿಮಾದಿಂದ ಹೊರ ಬಂದ ನಿರ್ದೇಶಕ ರಾಘವ ಲಾರೆನ್ಸ್​ಇದೇ ತಿಂಗಳ 31 ರಂದು 'ಅಮರ್' ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಮಂಡ್ಯದಲ್ಲಿ ಪ್ರೀ ರಿಲೀಸ್ ಈವೆಂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್‍ನ ಘಟಾನುಘಟಿ ತಾರೆಯರು ಮಾತ್ರವಲ್ಲದೆ, ದಕ್ಷಿಣದ ದೊಡ್ಡ ಸ್ಟಾರ್​ಗಳೂ ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ.

- ಆನಂದ್​ ಸಾಲುಂಡಿ

Cannes 2019: ಸಮ್ಮರ್​ ಲುಕ್​ನಲ್ಲಿ ಕಾನ್ಸ್​ನಲ್ಲಿ ಕಾಣಿಸಿಕೊಂಡ ಬಾಲಿವುಡ್​ ಕ್ವೀನ್​ ಕಂಗನಾ..!
First published: May 20, 2019, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading