Rajinikanth: ಹುಟ್ಟುಹಬ್ಬದ ಸಂಭ್ರಮದಲ್ಲಿ `ಅಣ್ಣಾತೆ’ ರಜಿನಿಕಾಂತ್​: 71ರಲ್ಲೂ ಅದೇ ಸ್ಟೈಲ್​.. ಅದೇ ಖದರ್​​..!

ರಜಿನಿಕಾಂತ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 71ನೇ ವಸಂತಕ್ಕೆ ಕಾಲಿಟ್ಟಿರುವ ರಜನಿಕಾಂತ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ರಜಿನಿಕಾಂತ್​

ರಜಿನಿಕಾಂತ್​

  • Share this:
ಯೂರ್ನಿವರ್ಸಲ್​ ಬಾಸ್​, ಬಾದ್​ಷಾ, ಪಡೆಯಪ್ಪ. ತಲೈವಾ, ಸೂಪರ್​ ಸ್ಟಾರ್, ಕಬಾಲಿ, ಕಾಲಾ, ಅಣ್ಣಾತೆ ಹೀಗೆ ಒಬ್ಬ ಸ್ಟಾರ್​​ಗೆ ನೂರಾರು ಹೆಸರಿನಿಂದ ಕರೆಸಿಕೊಳ್ಳುತ್ತಾರೆ ಅಂದರೆ, ಅದು ಒನ್​ ಎಂಡ್​ ಓನ್ಲಿ ರಜನಿಕಾಂತ್​(One and Only Rajinikanth)​. ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಮೊದಲ ಬಾರಿಗೆ ಕ್ರೇಜ್(Craze)​ ಹುಟ್ಟಿಸಿದ ಭಾರತೀಯ ನಟ ಅಂದರೆ, ಅದೇ ತಲೈವಾ ರಜಿನಿಕಾಂತ್(Rajinikanth)​. ರಜಿನಿಕಾಂತ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 71ನೇ ವಸಂತಕ್ಕೆ ಕಾಲಿಟ್ಟಿರುವ ರಜನಿಕಾಂತ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮ ವಿಶಿಷ್ಟ ಮ್ಯಾನರಿಸಂ(Mannerism)ನಿಂದ ದೇಶ ವಿದೇಶದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಪಡೆದಿರುವ ರಜನಿ, ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ.ರಜಿನಿಕಾಂತ್​ ಸಿನಿಮಾ ಜರ್ನಿ ಬಹಳ ವಿಚಿತ್ರವಾಗಿದೆ. ಬಸ್​ ಕಂಡಕ್ಟರ್​(Bus Conductor) ಆಗಿದ್ದ ಅವರು ಸಿನಿಮಾದಲ್ಲಿ ನಟಿಸುತ್ತಾ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡರು. ಕನ್ನಡ(Kannada), ತೆಲುಗು(Telugu), ತಮಿಳು(Tamil), ಹಿಂದಿ(Hindi) ಸಿನಿಮಾದಲ್ಲಿ ರಜನಿ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಹಿರಿಯ ನಟರೊಂದಿಗೆ ಹೆಜ್ಜೆ ಹಾಕಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ, ಖಳನಟನಾಯಿಗೂ ಪಾತ್ರನಿರ್ವಹಿಸಿದ್ದರು. ತಲೈವಾ ಸಿನಿಮಾ ಅಂದರೆ ಅಲ್ಲಿ  ಕ್ರೇಜ್​. ಇದುವರೆಗೂ ರಜಿನಿಕಾಂತ್​ ಅವರ ಸಿನಿಮಾಗಳಿಗೆ ಇರುವ ಕ್ರೇಜ್ ಬೇರೆ ಯಾವ ನಟರ ಸಿನಿಮಾಗೆ ಬರೋದಿಲ್ಲ. 

ಕಂಡೆಕ್ಟರ್​ನಿಂದ ಸೂಪರ್​ಸ್ಟಾರ್​ವರೆಗೆ!

ಮರಾಠಿ ಕುಟುಂಬಕ್ಕೆ ಸೇರಿದ ರಜಿನಿಕಾಂತ್​​​​​12 ಡಿಸೆಂಬರ್​​​​​1950 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಶಿವಾಜಿರಾವ್ ಗಾಯಕ್​ವಾಡ್. ಬೆಂಗಳೂರಿನ ಹನುಮಂತನಗರದಲ್ಲಿ ನೆಲೆಸಿದ್ದ ರಜಿನಿ ಕಾಲೇಜು ಶಿಕ್ಷಣ ಮುಗಿಸಿ ಕಂಡಕ್ಟರ್ ವೃತ್ತಿಗೆ ಸೇರಿದರು. ಆದರೆ ಚಿಕ್ಕಂದಿನಿಂದ ಅವರಿಗಿದ್ದ ಸಿನಿಮಾ ಸೆಳೆತದಿಂದ ರಜಿನಿ ಮದ್ರಾಸ್​​​​ಗೆ ತೆರಳಿ ಅಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದರು. ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ರಜಿನಿಕಾಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. 1975 ರಲ್ಲಿ ಬಿಡುಗಡೆಯಾದ 'ಅಪೂರ್ವ ರಾಗಂಗಳ್' ಚಿತ್ರದ ಮೂಲಕ ಆ್ಯಕ್ಟಿಂಗ್ ಆರಂಭಿಸಿದ ರಜಿನಿಕಾಂತ್ ಈಗ ಅಭಿಮಾನಿಗಳ ಮೆಚ್ಚಿನ ತಲೈವಾ ಆಗಿ ತಮಿಳು ಸಿನಿಪ್ರಿಯರ ಹೃದಯದಲ್ಲಿ ರಾರಾಜಿಸುತ್ತಿದ್ದಾರೆ.

ಇದನ್ನು ಓದಿ: 25 ವರ್ಷದ ಬಳಿಕ ಬಾಲಿವುಡ್​ಗೆ ವಿಕ್ಟರಿ ವೆಂಕಟೇಶ್​: ಸಲ್ಮಾನ್​ ಖಾನ್​ ಜೊತೆ ಹೊಸ ಸಿನಿಮಾ ಅನೌನ್ಸ್​!

ಚಿತ್ರರಂಗಕ್ಕೆ ಪಡೆಯಪ್ಪನೇ ಆರಾಧ್ಯ ದೈವ!

ಸ್ಟೈಲ್ ಕಿಂಗ್ ರಜಿನಿಕಾಂತ್ ಸ್ಕ್ರೀನ್​ ಮೇಲೆ ಕಾಣಿಸಿಕೊಂಡ್ರೆ ಸಾಕು, ಇಡೀ ಥಿಯೇಟರ್​ಗೆ ಥಿಯೇಟರ್​ ಶಿಳ್ಳೆ ಚಪ್ಪಾಳೆಯಿಂದ ಮಾರ್ದನಿಸುತ್ತೆ. ತಲೈವಾ ಫ್ಯಾನ್ಸ್ ಹುಚ್ಚೆದ್ದು ಕುಣೀತಾರೆ. ತಮಿಳುನಾಡಿನ ಸಿನಿರಸಿಕರಿಗೆ ಮಾತ್ರವಲ್ಲಾ ಭಾರತೀಯ ಚಿತ್ರರಂಗಕ್ಕೂ ಪಡೆಯಪ್ಪನೇ ಆರಾಧ್ಯ ದೈವ. ರಜಿನಿಕಾಂತ್ ಅವರಿಗೆ ತಮಿಳುನಾಡು ಮಾತ್ರವಲ್ಲ, ದೇಶಾದ್ಯಂತ ಅಷ್ಟೇ ಏಕೆ ವಿದೇಶದಲ್ಲಿ ಕೂಡಾ ಅಭಿಮಾನಿಗಳಿದ್ದಾರೆ.ಇವರ ಸಿನಿಮಾ ರಿಲೀಸ್​ ಆದ ದಿನ ರಜಿನಿಕಾಂತ್​ರಂತೆ ಗೆಟಪ್​ ಹಾಕಿ ಅಭಿಮಾನಿಗಳು ಹಬ್ಬ ಮಾಡುತ್ತಾರೆ.

71ರಲ್ಲೂ ಅದೇ ಖದರ್​, ಅದೇ ಸ್ಟೈಲ್​!

ತಮಿಳಿನಲ್ಲಿ ಮೂಂಡ್ರು ಮುಡಿಚ್ಚು, ತಪ್ಪು ತಾಳಂಗಳ್, ಪ್ರಿಯಾ, ಕನ್ನಡದಲ್ಲಿ ಸಹೋದರರ ಸವಾಲ್, ಕುಂಕುಮ ರಕ್ಷೆ, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ತಪ್ಪಿದ ತಾಳ, ಘರ್ಜನೆ, ತೆಲುಗಿನಲ್ಲಿ ಅಂತುಲೇನಿ ಕಥ, ಚಿಲಕಮ್ಮ ಚೆಪ್ಪಂಡಿ, ಅಣ್ನತಮ್ಮುಲ ಸವಾಲ್, ಆಮೆಕಥಾ, ಹಿಂದಿಯಲ್ಲಿ ಜಾನ್ ಜಾನಿ ಜನಾರ್ಧನ್, ಮಹಾಗುರು, ಅಸ್ಲಿ ನಕ್ಲಿ, ದೋಸ್ತಿ ದುಷ್ಮನಿ, ಚಾಲ್​ಬಾಜ್​ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ರಜಿನಿಕಾಂತ್. ಇಂಗ್ಲೀಷ್, ಮಲಯಾಳಂ​​ ಹಾಗೂ ಬೆಂಗಾಳಿ ಸಿನಿಮಾಗಳಲ್ಲಿ ಕೂಡಾ ಅವರು ಅಭಿನಯಿಸಿದ್ದಾರೆ.


ಇದನ್ನು ಓದಿ : ಈ ವರ್ಷದ ಟಾಪ್​ 10 ಬೆಸ್ಟ್​ ಸಿನಿಮಾ, ಸೀರೀಸ್​ಗಳು ಇವೆ: ನೋಡಿಲ್ಲ ಅಂದ್ರೆ ಮಿಸ್​ ಮಾಡ್ದೆ ನೋಡಿ..!

ಇತ್ತೀಚೆಗೆ ಬಿಡುಗೊಡೆಗೊಂಡ ಅಣ್ಣಾತೆ ಸಿನಿಮಾ ಬಾಕ್ಸ್​ ಆಫೀಸ್​ ಲೂಟಿ ಮಾಡಿತ್ತು. ಈ ವಯಸ್ಸಿನಲ್ಲೂ ರಜನಿಕಾಂತ್​ ಅದೇ ಖದರ್​..ಅದೇ ಸ್ಟೈಲ್​ ಜೀವಂತವಾಗಿದೆ. ಅವರ ಅಭಿಮಾನಿಗಳಿಗೆ ಅವರ ಸ್ಟೈಲ್​ಗೆ ಫಿದಾ ಆಗಿದ್ದಾರೆ. ಅಭಿಮಾನಿಗಳ ಹೃದಯ ಸಿಂಹಾಸನಾಧೀಶ್ವರ ರಜಿನಿಯ ಹುಟ್ಟುಹಬ್ಬ ಅಂದ್ರೆ ಅದೊಂದು ಹಬ್ಬವೇ ಸರಿ.
Published by:Vasudeva M
First published: