ಸೂಪರ್ ಸ್ಟಾರ್(Super Star) ರಜಿನಿಕಾಂತ್ ಅಂದರೆ ಭಾರತೀಯ ಚಿತ್ರರಂಗದ ಧ್ರುವತಾರೆ. ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಮೊದಲ ಬಾರಿಗೆ ಕ್ರೇಜ್ (Craze) ಹುಟ್ಟಿಸಿದ ಭಾರತೀಯ ನಟ ಅಂದರೆ, ಅದೇ ತಲೈವಾ ರಜಿನಿಕಾಂತ್ (Rajinikanth). ಇವರ ಸಿನಿಮಾ ರಿಲೀಸ್ ಇರಲಿ, ಹೊಸ ಸಿನಿಮಾ ಸೆಟ್ಟೇರಿದರೂ ಸಾಕು ಅವರ ಅಭಿಮಾನಿಗಳು ಹಬ್ಬವನ್ನೇ ಮಾಡುತ್ತಾರೆ.ರಜನಿಕಾಂತ್ ಅಭಿನಯದ ಅಣ್ಣಾತೆ(Annaatthe) ಸಿನಿಮಾ ಸೂಪರ್ ಡೂಪರ್ ಹಿಟ್(Hit) ಎನಿಸಿಕೊಂಡಿತ್ತು. ಹೆಂಗಳೆಯರ ಮನ ಗೆದ್ದಿತ್ತು. ತಂಗಿಯ ನೆರಳಾಗಿ ಆಕೆಯನ್ನು ಕಾಪಾಡುವ ಅಣ್ಣನ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದರು. ಈ ಸಿನಿಮಾ ಹಿಟ್ ಆಗುವುದರನ ಜೊತೆ ಬಾಕ್ಸಾಫೀಸ್(Box office)ನಲ್ಲೂ ಸಖತ್ ಕಮಾಲ್ ಮಾಡಿತ್ತು. ಇದಾದ ಬಳಿಕ ಯಾವ ಸಿನಿಮಾದಲ್ಲಿ ರಜನಿಕಾಂತ್ ನಟಿಸುತ್ತಾರೆ ಅನ್ನುವ ಕುತೂಹಲ ಸೃಷ್ಟಿಯಾಗಿತ್ತು. ರಜನಿಕಾಂತ್ ತಮ್ಮ 169ನೇ ಸಿನಿಮಾವನ್ನು ‘ಬೀಸ್ಟ್’(Beast) ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್(Nelsan Dilip Kumar) ಅವರೊಂದಿಗೆ ಮಾಡುತ್ತಾರೆ ಅನ್ನುವ ವಿಚಾರವನ್ನು ಚಿತ್ರತಂಡ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅನೌನ್ಸ್(Announce ಮಾಡಲಾಗಿತ್ತು.
ಮತ್ತೊಬ್ಬ ಯುವ ನಿರ್ದೇಶಕನ ಸಿನಿಮಾದಲ್ಲಿ ತಲೈವಾ!
ರಜನಿಕಾಂತ್ ಅವರು ಇತ್ತೀಚೆಗೆ ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಇಷ್ಟ ಪಡುತ್ತಾರೆ. ರಜನಿಕಾಂತ್ 169ನೇ ಸಿನಿಮಾ ಮೇ ಆರಂಭದಲ್ಲಿ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ. ಇದರ ಮದ್ಯೆ ರಜನಿಕಾಂತ್ ತಮ್ಮ ಮುಂದಿನ ಸಿನಿಮಾವನ್ನು ಮತ್ತೊಬ್ಬ ಯುವ ನಿರ್ದೇಶಕನ ಜೊತೆ ಮಾಡುತ್ತಿದ್ದಾರೆ. ಹೌದು, ರಜನಿಕಾಂತ್ ತಮ್ಮ 170 ನೇ ಸಿನಿಮಾವನ್ನುಅರುಣ್ ರಾಜ ಕಾಮರಾಜ್ ಜೊತೆ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಸಿನಿಮಾ ಮಾಡದಿರಲು ರಜನಿ ನಿರ್ಧರಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ, ಈ ಅಪ್ಡೇಟ್ನಿಂ ದ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ: ಡಿವೋರ್ಸ್ ಬಳಿಕ ಹೈದರಾಬಾದ್ನಲ್ಲಿ ಮತ್ತೊಂದು ಹುಡುಗಿ ಜೊತೆ ಧನುಷ್ ಪ್ರತ್ಯಕ್ಷ! ಯಾರಿವಳು?
ಯಾರು ಈ ಅರುಣ್ ರಾಜ್ ಕಾಮರಾಜ್?
ರಜನಿಕಾಂತ್ ಅವರ 170ನೇ ಸಿನಿಮಾಗೆ ಅರುಣ್ ರಾಜ ಕಾಮರಾಜ್ ಆ್ಯಕ್ಷನ್ ಕಟ್ ಹೇಳುವುದು ಬಹುತೇಕ ಫೈನಲ್ ಆಗಿದೆ. ಈ ಹಿಂದೆ ನಾಯಕಿ ಪ್ರಧಾನ ಸಿನಿಮಾವಾದ ‘ಕನಾ’ ಸಿನಿಮಾವನ್ನು ಕಾಮರಾಜ್ ನಿರ್ದೇಶನ ಮಾಡಿದ್ದರು. ಇದಾದ ಬಳಿಕ ‘ನೆಂಜುಕು ನೀಧಿ’ ಎಂಬ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದರು. ಜೊತೆಗೆ ಅರುಣ್ ರಾಜ್ ಕಾಮರಾಜ್ ಹಾಡುಗಾರ ಕೂಡ ಹೌದು, ಡಿಮೇಟ್ ಕಾಲೋನಿ ಸಿನಿಮಾದಲ್ಲಿ ಹಾಡಿದ್ದಾರೆ. ಇದೀಗ ರಜನಿಕಾಂತ್ ಅವರ ಮುಂದಿನ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.
ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಬೋನಿ ಕಪೂರ್!
ತಮಿಳಿನ ಬಹು ನಿರೀಕ್ಷಿತ ವಲಿಮೈ ಸಿನಿಮಾಗೆ ಹಣ ಹೂಡಿರುವ ಬೋನಿ ಕಪೂರ್, ರಜನಿಕಾಂತ್ ಅವರ 170ನೇ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಅಜಿತ್ ನಟನೆಯ ವಲಿಮೈ ಸಿನಿಮಾ ಫೆಬ್ರವರಿ 24ರಂದು ತೆರೆಗೆ ಬರುತ್ತಿದೆ. ಇನ್ನೂ ಕಳೆದ ವರ್ಷ ಕೊರೋನಾದಿಂದ ಅರುಣ್ ರಾಜ್ ಕಾಮರಾಜ್ ಅವರ ಪತ್ನಿ ಮೃತಪಟ್ಟಿದ್ದರು. ಆ ನೋವಿನಿಂದ ಕೆಲ ದಿನಗಳ ಕಾಲ ಸಿನಿಮಾದಿಂದ ಅರುಣ್ ರಾಜ್ ದೂರವಿದ್ದರು. ಇದೀಗ ರಜನಿ ಸಿನಿಮಾದ ಮೂಲಕ ಮತ್ತೆ ಪುಟಿದೇಳುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: `ಬೀಸ್ಟ್’ ನಿರ್ದೇಶಕನ ಜೊತೆ ರಜನಿಕಾಂತ್ ನೆಕ್ಸ್ಟ್ ಸಿನಿಮಾ.. ತಲೈವಾಗೆ ಹೇಳಿ ಮಾಡಿಸಿದ ಕಥೆಯಂತೆ!
ಮಗಳ ವಿಚ್ಚೇದನದ ಬಳಿಕ ಡಲ್ ಆಗಿರುವ ರಜನಿ!
ಹೌದು, ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ವಿಚ್ಛೇದನದ ನಂತರ ರಜನಿಕಾಂತ್ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆಯಂತೆ. ದಂಪತಿಗಳನ್ನು ಮತ್ತೆ ಒಟ್ಟಿಗೆ ಸೇರಿಸುವ ಪ್ರಯತ್ನದಲ್ಲಿ ರಜನಿಕಾಂತ್ ಇದ್ದಾರೆ ಎಂದು ತಮಿಳುನಾಡು ಮಾದ್ಯಮಗಳಿಂದ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ