'ಸೂಪರ್​ ಸ್ಟಾರ್'​ ರಜನಿ ವೃತ್ತಿಜೀವನದ ಕ್ಲೈಮ್ಯಾಕ್ಸ್​​ನಲ್ಲಿ 'ಪೆಟ್ಟಾ' ನೀಡಲಿದೆಯಾ ಯಶಸ್ಸಿನ ಸಿಹಿ?

ರಜನಿ ನಟನೆಯ ಯಾವ ಚಿತ್ರವೂ ಹೇಳಿಕೊಳ್ಳುವಂಥ ಯಶಸ್ಸು ಗಳಿಸಿಲ್ಲ. ‘ಲಿಂಗಾ’, ‘ಕಬಾಲಿ’, ‘ಕಾಲಾ’ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡವು. ‘ಕೊಚಡಿಯಾನ್​’ ಚಿತ್ರವಂತೂ ಹೀನಾಯವಾಗಿ ಸೋತಿತ್ತು.

Rajesh Duggumane | news18
Updated:January 9, 2019, 3:12 PM IST
'ಸೂಪರ್​ ಸ್ಟಾರ್'​ ರಜನಿ ವೃತ್ತಿಜೀವನದ ಕ್ಲೈಮ್ಯಾಕ್ಸ್​​ನಲ್ಲಿ 'ಪೆಟ್ಟಾ' ನೀಡಲಿದೆಯಾ ಯಶಸ್ಸಿನ ಸಿಹಿ?
ರಜನಿಕಾಂತ್​
Rajesh Duggumane | news18
Updated: January 9, 2019, 3:12 PM IST
ರಾಜೇಶ್​ ದುಗ್ಗುಮನೆ

ಇತ್ತೀಚೆಗೆ ತೆರೆಕಂಡ ‘ಸೂಪರ್​ ಸ್ಟಾರ್​’ ರಜನಿಕಾಂತ್​ ನಟನೆಯ ಯಾವ ಚಿತ್ರಗಳೂ ಅವರ ಮೊದಲಿನ ಖದರ್​​​ನಲ್ಲಿ ಮೂಡಿಬಂದಿಲ್ಲ. ಇನ್ನೂ ಹೇಳಬೇಕೆಂದರೆ, ಅವರ ಯಾವ ಸಿನಿಮಾಗಳೂ ಹೇಳಿಕೊಳ್ಳುವಂಥ ಯಶಸ್ಸು ಗಳಿಸಿಲ್ಲ. ನಾಳೆ (ಜ.10) ತೆರೆಕಾಣುತ್ತಿರುವ ‘ಪೆಟ್ಟಾ’ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್​​​ ಹಾಗೂ ಪೋಸ್ಟರ್​ ಮೂಲಕ ಕುತೂಹಲ ಹುಟ್ಟಿಸಿರುವ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗೆಲುವಿನ ನಗೆ ಬೀರಲಿದೆಯೇ.? ಎಂಬ ಪ್ರಶ್ನೆ ಅಭಿಮಾನಿಗಳದ್ದು.

2010ರಲ್ಲಿ ತೆರೆಕಂಡಿದ್ದ ‘ಎಂದಿರನ್​’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಆ ಚಿತ್ರವೇ ಕೊನೆ. ನಂತರ ರಜನಿ ನಟನೆಯ ಯಾವ ಚಿತ್ರವೂ ಹೇಳಿಕೊಳ್ಳುವಂಥ ಯಶಸ್ಸು ಗಳಿಸಿಲ್ಲ. ‘ಲಿಂಗಾ’, ‘ಕಬಾಲಿ’, ‘ಕಾಲಾ’ ಚಿತ್ರಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡವು. ‘ಕೊಚಡಿಯಾನ್​’ ಚಿತ್ರವಂತೂ ಹೀನಾಯವಾಗಿ ಸೋತಿತ್ತು. ಇತ್ತೀಚೆಗೆ ತೆರೆಕಂಡ ‘2.0’ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್​ ಮಾಡಿದ್ದೇನೋ ಹೌದು. ಆದರೆ ಚಿತ್ರದ ಬಜೆಟ್​ 600 ಕೋಟಿ ರೂ. ದಾಟಿತ್ತು. ಹಾಗಾಗಿ ಚಿತ್ರದ ವೆಚ್ಚ -ಗಳಿಕೆ ಸಮವಾಗಿತ್ತು. ಇನ್ನು ಈ ರಜನಿ ಅಲ್ಲದೆ, ಸಾಕಷ್ಟು ಕಲಾವಿದರು ಈ ಚಿತ್ರದ ಭಾಗವಾಗಿದ್ದರು.

ಇದನ್ನೂ ಓದಿ: 68ನೇ ವಸಂತಕ್ಕೆ ಕಾಲಿಟ್ಟ ತಲೈವಾ ರಜನಿಕಾಂತ್; ಅಭಿಮಾನಿಗಳಿಗೆ ‘ಪೆಟ್ಟಾ’ ಟೀಸರ್​ ಗಿಫ್ಟ್

ಹಾಗಾಗಿ, ಸಾಕಷ್ಟು ವರ್ಷಗಳಿಂದ ರಜನಿ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ‘ಪೆಟ್ಟಾ’ ಚಿತ್ರದ ಮೂಲಕ ಅದನ್ನು ಪಡೆದುಕೊಳ್ಳುವ ಹಂಬಲ ಅವರದ್ದು. ಈಗಾಗಲೇ ಟ್ರೇಲರ್​ ರಿಲೀಸ್​ ಆಗಿದ್ದು, ಸಿನಿಮಾ ನಿರೀಕ್ಷೆಗೆ ಮೈಲೇಜ್​ ನೀಡಿದೆ.

‘ಪೆಟ್ಟಾ’ ಮೇಲೆ ನಿರೀಕ್ಷೆ ಇಟ್ಟುಕೊಳ್ಳಲು ಕಾರಣ ಚಿತ್ರದ ನಿರ್ದೇಶಕ ಕಾರ್ತಿಕ್​ ಸುಬ್ಬರಾಜು. ‘ಪಿಜ್ಜಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಕಾರ್ತಿಕ್​ ಮೊದಲ ಸಿನಿಮಾದಲ್ಲೇ ಹಿಟ್​ ನೀಡಿದ್ದರು. ಈ ಮೂಲಕ ಭರವಸೆಯ ನಿರ್ದೇಶಕ ಎನಿಸಿಕೊಂಡರು. ಇತ್ತೀಚೆಗೆ ತೆರೆಕಂಡ ಪ್ರಭುದೇವ ನಟನೆಯ ‘ಮರ್ಕ್ಯೂರಿ’​  ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು ಇದೇ ಕಾರ್ತಿಕ್​. ಮೂಕಿ ಚಿತ್ರ ಇದಾಗಿದ್ದು, ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಇದೇ ಮೊದಲ ಬಾರಿಗೆ ಕಾರ್ತಿಕ್ ಅವರು ರಜನಿ ಜೊತೆ ಕೈಜೋಡಿಸಿದ್ದಾರೆ. ಹಾಗಾಗಿ ‘ಪೆಟ್ಟಾ’ ಚಿತ್ರ ಗೆಲ್ಲಲಿದೆ ಎನ್ನುವ ಬಲವಾದ ನಂಬಿಕೆ ಅಭಿಮಾನಿಗಳದ್ದು.

ಇದನ್ನೂ ಓದಿ: 'ಆ್ಯಕ್ಸಿಡೆಂಟಲ್ ಪ್ರೈಮಿನಿಸ್ಟರ್' ಚಿತ್ರಕ್ಕೆ ಕಂಟಕ; ತಂಡದ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ!
Loading...

ಈ ಚಿತ್ರದಲ್ಲಿ ರಜನಿ ಅಲ್ಲದೆ, ವಿಜಯ್​ ಸೇತುಪತಿ, ಸಿಮ್ರನ್​, ಎಂ. ಶಶಿಕುಮಾರ್​, ಬಾಲಿವುಡ್​ ಹೀರೋ ನವಾಜುದ್ದೀನ್​ ಸಿದ್ಧಕಿ, ಬಾಬಿ ಸಿಂಬಾ ಬಣ್ಣ ಹಚ್ಚಿದ್ದಾರೆ. ಇದು ಚಿತ್ರಕ್ಕೆ ಪ್ಲಸ್​ ಆಗಲಿದೆ. ಸನ್​ ಪಿಕ್ಚರ್ಸ್​​ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್​​ ರವಿಚಂದರ್​ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಪೆಟ್ಟಾ' ಸಿನಿಮಾ ಕನ್ನಡದಲ್ಲಿ ಡಬ್​ ಆಗಿ ತೆರೆಕಾಣುತ್ತಿದೆ.

ಸದ್ಯ ರಜನಿ, ರಾಜಕೀಯದತ್ತ ತೆರೆದುಕೊಳ್ಳುತ್ತಿದ್ದಾರೆ. ಈ ವರ್ಷ ಅವರು ಪಕ್ಷ ಘೋಷಣೆ ಮಾಡುವುದಾಗಿಯೂ ಹೇಳಿದ್ದಾರೆ. ಖ್ಯಾತ ನಿರ್ದೇಶಕ ಎ.ಆರ್​. ಮುರಗದಾಸ್​ ಅವರ ಜೊತೆ ಕೈ ಜೋಡಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆಯಾದರೂ, ಅಧಿಕೃತವಾಗಿಲ್ಲ. ‘ಪೆಟ್ಟಾ’ ರಜನಿ ವೃತ್ತಿ ಜೀವನದ ಕೊನೆಯ ಚಿತ್ರವಾಗಲಿದೆ ಎನ್ನುವ ಮಾತಿದೆ. ಹಾಗಾಗಿ, ಅವರ ಕರಿಯರ್​ ಕ್ಲೈಮ್ಯಾಕ್ಸ್​ನಲ್ಲಿ ರಜನಿಗೆ ಸಿಹಿ ಸಿಗಲಿದೆಯೇ? ಅವರ ಚಿತ್ರ ಗೆಲ್ಲಲಿದೆಯೇ ಎಂಬುದನ್ನು ತಿಳಿಯಲು ನಾಳೆಯವರೆಗೆ ಕಾಯಲೇಬೇಕು.

ಇದನ್ನೂ ಓದಿ: ತಮಿಳುನಾಡು ರಾಜಕೀಯಕ್ಕೆ 'ಸೂಪರ್ ಸ್ಟಾರ್' ರಜನಿಕಾಂತ್ ಎಂಟ್ರಿ: ಅಭಿಮಾನಿಗಳ ಸಂಭ್ರಮಾಚರಣೆ

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ