ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ (Super star Rajinikanth Movie) ಜೈಲರ್ ಚಿತ್ರದ ಹೊಸ ಅಪ್‌ಡೇಟ್ಸ್ ಹೊರ ಬಿದ್ದಿದೆ. ಬಹು ತಾರೆಯರ ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸಖತ್ ಆಗಿಯೇ (Jailer Release Date Announce) ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹೀಗೆ ಎಲ್ಲ ಭಾಷೆಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ (Super Star Rajinikanth Cinema) ಮೂಲಕ ಜೈಲರ್ ಸಿನಿಮಾ ಎಲ್ಲ ಭಾಷೆಯ ಸಿನಿಪ್ರೇಮಿಗಳ ಹೃದಯ ಕದಿಯೋಕೆ ಸಜ್ಜಾಗಿದೆ. ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಕೂಡ ಇದೆ. ಈ ಮೂಲಕ ಡೈರೆಕ್ಟರ್ ನೆಲ್ಸನ್ (Jailer Movie Release Soon) ಹಾಸ್ಯದ ರಸದೌತಣ ಕೂಡ ಬಡಿಸಲಿದ್ದಾರೆ.
ಹಾಗಾಗಿಯೇ ಈ ಚಿತ್ರವನ್ನ ಆ್ಯಕ್ಷನ್-ಕಾಮಿಡಿ ಚಿತ್ರ ಅಂತ ಸಿನಿಮಾ ತಂಡ ಇಲ್ಲಿವರೆಗೂ ಬಿಂಬಿಸುತ್ತಲೇ ಬಂದಿದೆ. ಇದೀಗ ಸಿನಿಮಾ ರಿಲೀಸ್‌ಗೂ ರೆಡಿ ಆಗಿ ಬಿಟ್ಟಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ರಿಲೀಸ್ ಡೇಟ್ ಅನೌನ್ಸ್
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಸೂಪರ್ ಆಗಿಯೇ ಬಂದಿದೆ. ಚಿತ್ರದ ಅಧಿಕೃತ ಟೀಸರ್ ಮೂಲಕ ಸಿನಿಮಾದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಇದೀಗ ಚಿತ್ರದ ರಿಲೀಸ್ ಡೇಟ್ ಅನ್ನು ಕೂಡ ಈಗ ರಿವೀಲ್ ಮಾಡಿದೆ.
ರಜನಿ ಸಿನಿಮಾದಲ್ಲಿ ಶಿವಣ್ಣ-ಮೋಹನ್ ಲಾಲ್ ರೋಲ್ ಏನು?
ಬಹು ತಾರೆಯರ ಬಹು ನಿರೀಕ್ಷಿತ ಜೈಲರ್ ಸಿನಿಮಾದ ಟೀಸರ್ ಸೂಪರ್ ಆಗಿದೆ. ಹಾಸ್ಯದ ಸ್ಪರ್ಶ ಇರೋ ಈ ಒಂದು ಚಿತ್ರದಲ್ಲಿ ಮೋಹನ್ ಲಾಲ್ ಸಖತ್ ರೆಟ್ರೋ ಗೆಟಪ್ ಅಲ್ಲಿಯೇ ಕಾಣಿಸಿಕೊಡಿದ್ದಾರೆ. ಶಿವರಾಜ್ ಕುಮಾರ್ ಎಂಟ್ರಿ ಸರಳ ಅನಿಸಿದ್ರೂ ವಿಶೇಷ ಫೀಲ್ ಕೊಡುತ್ತದೆ.
ಜೈಲರ್ ಚಿತ್ರದಲ್ಲಿ ರಜನಿ ಎಂಟ್ರಿ ಹೇಗಿದೆ ಗೊತ್ತೆ?
ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ ಕೂಡ ಸೂಪರ್ ಆಗಿಯೇ ಬಂದಿದೆ. ಕಾರ್‌ನಿಂದ ಇಳಿದು ಬರೋ ರಜನಿಕಾಂತ್ ಇಲ್ಲಿ ಮತ್ತೆ ತಮ್ಮ ಗತ್ತನ್ನ ಮುಂದುವರೆಸಿಕೊಂಡು ಎಲ್ಲರಿಗೂ ಥ್ರಿಲ್ ಮೂಡಿಸುತ್ತಿದ್ದಾರೆ.
ರಜನಿ ಸಿನಿಮಾದಲ್ಲಿ ಜಾಕಿ ಶ್ರಾಫ್ ಅಭಿನಯ
ಬಾಲಿವುಡ್ ನಟ ಜಾಕಿ ಶ್ರಾಫ್ ಪರಿಚಯ ಅಂತೂ ಇಲ್ಲಿ ಇಂಟ್ರಸ್ಟಿಂಗ್ ಅನಿಸುತ್ತದೆ. ಹಾಸ್ಯ ನಟ ಸುನಿಲ್ ಕೂಡ ಹಾಸ್ಯದ ಕಿಕ್ ಕೊಡ್ತಾರೆ. ಹೀಗೆ ಜೈಲರ್ ಚಿತ್ರದ ಪಾತ್ರಗಳ ಪರಿಚಯ ಆಗಿವೆ. ಆದರೆ ಇಲ್ಲಿವರೆಗೂ ಸಿನಿಮಾದ ರಿಲೀಸ್ ಡೇಟ್ ಮಾತ್ರ ಅನೌನ್ಸ್ ಆಗಿರಲಿಲ್ಲ. ಈಗ ಅದು ಆಗಿದೆ ನೋಡಿ.
ಆಗಸ್ಟ್ -10 ರಂದು ಜೈಲರ್ ಸಿನಿಮಾ ರಿಲೀಸ್
ಜೈಲರ್ ಚಿತ್ರ ಇದೇ ವರ್ಷ ಆಗಸ್ಟ್ -10 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ಅನಿರುದ್ಧ ರವಿಚಂದರ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಬಹು ತಾರೆಯರ ಈ ಚಿತ್ರದಲ್ಲಿ ನಾಯಕಿಯರೇ ಇಲ್ವೇ ಅಂತ ಕೇಳಬೇಡಿ. ಇಲ್ಲಿ ನಾಯಕಿಯರೂ ಇದ್ದಾರೆ.
ಜೈಲರ್ ಚಿತ್ರದಲ್ಲಿ ಇಬ್ಬರು ನಾಯಕಿಯರು
ರಮ್ಯಾ ಕೃಷ್ಣ ಮತ್ತು ತಮನ್ನಾ ಭಾಟಿಯಾ ಇಲ್ಲಿ ನಟಿಸಿದ್ದಾರೆ. ಇವರ ಪಾತ್ರದ ಒಂದು ಝಲಕ್ ಕೂಡ ಈಗ ರಿಲೀಸ್ ಮಾಡಿರೋ ಟೀಸರ್ ಅಲ್ಲಿದೆ. ಬಹು ದಿನಗಳಿಂದಲೂ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಸಿನಿಮಾ ತಂಡ ರಿಲೀಸ್ ಬಗ್ಗೆ ಹೊಸ ಅಪ್‌ಡೇಟ್ಸ್ ಕೊಟ್ಟಿದೆ.
ಇದನ್ನೂ ಓದಿ: Comedy Actor Mitra: ಮರತೇ ಹೋದ ಮಿತ್ರನಿಗೆ ಮರು ಜೀವ ಕೊಟ್ಟ ರಾಘವೇಂದ್ರ ಸ್ಟೋರ್ಸ್ಸ್
ಜೈಲರ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದ ಟೀಸರ್
ಜೈಲರ್ ಸಿನಿಮಾವನ್ನ ನಿರೀಕ್ಷೆ ಮಾಡ್ತಿರೋರಿಗೆ ಈಗ ಟೀಸರ್ ಒಂದಷ್ಟು ವಿಷಯ ಬಿಟ್ಟುಕೊಟ್ಟಿದೆ. ಇಡೀ ಸಿನಿಮಾ ಹೇಗಿರುತ್ತದೆ ಅನ್ನುವ ಕುತೂಹಲವನ್ನ ಕೂಡ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ