ಸೂಪರ್ ಸ್ಟಾರ್ ರಜನಿಕಾಂತ್ ಒಂದು ಹೊಸ (Lal Salaam Movie First Look) ಚಿತ್ರದ ಪೋಸ್ಟರ್ ಅತಿ ಹೆಚ್ಚು ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ರಜನಿ ವಿಭಿನ್ನವಾಗಿ ಕಾಣಿಸುತ್ತಿದ್ದಾರೆ. ಇಲ್ಲಿವರೆಗೂ ರಜನಿಕಾಂತ್ ಈ ಒಂದು (Rajinikanth Lal Salaam Movie) ಗೆಟಪ್ ಅಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಮಗಳಿಗೋಸ್ಕರ ಈ ಒಂದು ಗೆಟಪ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಶುರು ಆದ ಈ ಚಿತ್ರಕ್ಕೆ ಲಾಲ್ ಸಲಾಮ್ ಅನ್ನುವ (Movie First Look Release) ಶೀರ್ಷಿಕೆ ಇಡಲಾಗಿದೆ. ಇದೇ ಚಿತ್ರದಲ್ಲಿ ರಜನಿಕಾಂತ್ ಮುಸ್ಲಿಂ ಗೆಟಪ್ ಧರಿಸಿದ್ದಾರೆ. ಈ ಒಂದು ರೋಲ್‌ನ ಫೋಸ್ಟರ್ (Super Star Rajinikanth Movie) ರಿಲೀಸ್ ಆಗಿದೆ. ಇದು ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ಲಾಲ್ ಸಲಾಮ್ ರಜನಿಕಾಂತ್ ಫಸ್ಟ್ ಲುಕ್ ರಿಲೀಸ್
ಸೂಪರ್ ಸ್ಟಾರ್ ರಜನಿಕಾಂತ್ ಇಲ್ಲಿವರೆಗೂ ಈ ರೀತಿ ರೋಲ್ ಮಾಡಿದಂತೆ ಕಾಣೋದೇ ಇಲ್ಲ. ಮಗಳು ಐಶ್ವರ್ಯ ರಜನಿಕಾಂತ್ ಗೋಸ್ಕರ ಈ ಒಂದು ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಮುಸ್ಲಿಂ ಪಾತ್ರ ಮಾಡಿರೋ ರಜನಿಕಾಂತ್ ಪಾತ್ರದ ಹೆಸರು ಏನು ಗೊತ್ತೆ?
ಹೌದು, ಮೊಯಿದ್ದೀನ್ ಅನ್ನುವ ಪಾತ್ರದಲ್ಲಿ ರಜನಿಕಾಂತ್ ನಿರ್ವಹಿಸಿದ್ದಾರೆ. ಲೈಕಾ ಮೀಡಿಯಾ ಈ ಒಂದು ಚಿತ್ರವನ್ನ ನಿರ್ಮಿಸುತ್ತಿದೆ. ತನ್ನ ಅಧಿಕೃತ ಪೇಜ್ ಅಲ್ಲಿಯೇ ರಜನಿಕಾಂತ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ.
ಮೊಯಿದ್ದೀನ್ ಪಾತ್ರದ ಫಸ್ಟ್ ಲುಕ್ ರಿಲೀಸ್
ಮೊಯಿದ್ದೀನ್ ಪಾತ್ರದ ಫಸ್ಟ್ ಲುಕ್ ಅನ್ನ ಒಮ್ಮೆ ಗಮನಿಸಿದ್ರೆ, ಅಲ್ಲಿ ಒಂದಷ್ಟು ವಿಷಯ ಕೂಡ ಇದೆ. ದಂಗೆ ಎದ್ದ ಜನರ ಮಧ್ಯೆ ರಜನಿಕಾಂತ್ ಸೂಪರ್ ಕೂಲ್ ಅನ್ನುವ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ.
ಮುಸ್ಲಿಂ ಪಾತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್
ಮುಖದಲ್ಲಿ ಒಂದು ಸ್ಮೈಲ್ ಇದೆ. ತಲೆ ಮೇಲೆ ಕೆಂಪು ಟೊಪ್ಪಿಗೆ ಇದೆ. ಕಣ್ಣಿಗೆ ಕಪ್ಪು ಸನ್ ಗ್ಲಾಸ್ ಧರಿಸಿದ್ದಾರೆ. ಬನಾರಸ್ ಮುಸ್ಲಿಂರು ಧರಿಸೊ ಉಡುಗೆಯಲ್ಲಿ ರಜನಿ ಇಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ವಿಭಿನ್ನ ಕುತೂಹಲವನ್ನ ಹುಟ್ಟುಹಾಕಿದ್ದಾರೆ.
ಲಾಲ್ ಸಲಾಮ್ ಚಿತ್ರದಲ್ಲಿ ರಜನಿಕಾಂತ್ ಗೆಸ್ಟ್ ರೋಲ್
ಪುತ್ರಿ ಐಶ್ವರ್ಯ ನಿರ್ದೇಶನದ ಲಾಲ್ ಸಲಾಮ್ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿರೋ ಹೀರೋ ಬೇರೆನೆ ಇದ್ದಾರೆ. ಹೌದು, ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಗಳ ಪ್ರೀತಿಯ ಒತ್ತಾಯಕ್ಕೆ ರಜನಿಕಾಂತ್ ಈ ಚಿತ್ರದಲ್ಲಿ ಮೊಯಿದ್ದೀನ್ ಭಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರಜನಿಕಾಂತ್ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ
ಲಾಲ್ ಸಲಾಂ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಕ್ರಿಕೆಟ್ ವಿಷಯ ಕೂಡ ಇದೆ ಅನ್ನುವುದು ಈಗಾಗಲೇ ರಿವೀಲ್ ಆಗಿದೆ. ಸಿನಿಮಾದ ಟೈಟಲ್ ರಿವೀಲ್ ಆದ ಸಮಯದಲ್ಲಿ ಪೋಸ್ಟರ್ ರಿಲೀಸ್ ಆಗಿದ್ದವು.
ಲಾಲ್ ಸಲಾಮ್ ಸಿನಿಮಾದಲ್ಲಿ ಏನಿದೆ ಗೊತ್ತೆ?
ಆ ಪೋಸ್ಟರ್ ನಲ್ಲಿ ಕ್ರಿಕೆಟ್ ಆಡೋವಾಗ ಧರಿಸೋ ಹೆಲ್ಮೇಟ್ ಬರ್ನ್ ಆಗುವ ದೃಶ್ಯ ಇತ್ತು. ಅಲ್ಲಿಗೆ ಇದು ಕ್ರಿಕೆಟ್ ಮತ್ತು ದಂಗೆಯ ವಿಷಯ ಕುರಿತು ಸಿನಿಮಾ ಅಂತ ಗೆಸ್ ಮಾಡಬಹುದು. ಆದರೆ ಸಿನಿಮಾ ತಂಡ ಈ ಬಗ್ಗೆ ಹೆಚ್ಚೇನೂ ಹೇಳಿಕೊಂಡಿಲ್ಲ.
ಇದನ್ನೂ ಓದಿ: The Kerala Story: ಬೆಂಗಳೂರಲ್ಲಿ ಯುವತಿಯರಿಗೆ BJPಯಿಂದ ಕೇರಳ ಸ್ಟೋರಿ ವಿಶೇಷ ಪ್ರದರ್ಶನ!
ಸಿನಿಮಾ ನಿರೀಕ್ಷೆ ಮಾಡ್ತಿರೋರಿಗೆ ಲಾಲ್ ಸಲಾಮ್ ಇದೇ ವರ್ಷ ಬೆಳ್ಳಿತೆರೆ ಮೇಲೆ ದೊರೆಯಲಿದೆ. ಆದರೆ ರಿಲೀಸ್ ಡೇಟ್ ಮಾತ್ರ ಇನ್ನೂ ಅನೌನ್ಸ್ ಆಗಿಲ್ಲ. ಲೈಕಾ ಮೀಡಿಯಾ ಅದನ್ನ ಶೀಘ್ರದಲ್ಲಿ ಅನೌನ್ಸ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ