ಭಾರತ ಚಿತ್ರರಂಗದ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಚಿಕಿತ್ಸೆ ಬಳಿಕ ಮರಳಿ ಮನೆ ಸೇರಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಅವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್(Discharge) ಆಗಿ ಮನೆಗೆ ಮರಳಿದ್ದಾರೆ. ಅಕ್ಟೋಬರ್ 28ರಂದು ಎದೆ ನೋವು ಹಾಗೂ ಸುಸ್ತು ಕಾಣಿಸಿಕೊಂಡ ಹಿನ್ನೆಲೆ ರಜನಿಕಾಂತ್ ಅವರನ್ನು ಕಾವೇರಿ(Kaveri) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗಷ್ಟೇ ರಜನಿ ಸಣ್ಣ ಶಸ್ತ್ರಚಿಕಿತ್ಸೆ ಒಂದಕ್ಕೆ ಒಳಗಾಗಿದ್ದರು. ಬಳಿಕ ಸೂಪರ್ಸ್ಟಾರ್ ರಜನಿಕಾಂತ್ ಚೇತರಿಸಿಕೊಂಡಿದ್ದರು. ಆದರೆ ರೂಟಿನ್ ಚೆಕ್ಅಪ್(Routine Checkup)ಗೆ ಬಂದಾಗ ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್(M.K Stalin) ಅವರು ಕೂಡ ರಜನಿಕಾಂತ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ರಜನಿಕಾಂತ್ ಆರೋಗ್ಯವಾಗಿದ್ದಾರೆ, ಆತಂಕ ಪಡುವ ಯಾವ ಅಗತ್ಯವೂ ಇಲ್ಲ ಎಂದು ವೈದ್ಯರು ತಿಳಿಸಿದ್ದರು. ಈ ವಿಚಾರ ಆತಂಕದಲ್ಲಿದ್ದ ಅವರ ಅಭಿಮಾನಿಗಳಿಗೆ ಸಮಾಧಾನ ತಂದಿದೆ.
ರೂಟಿನ್ ಹೆಲ್ತ್ ಚೆಕ್ಅಪ್ ಎಂದಿದ್ದ ಕುಟುಂಬಸ್ಥರು
70 ವರ್ಷದ ರಜನಿಕಾಂತ್ ಅವರನ್ನು ಗುರುವಾರ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನು ಕೇಳಿ ಅವರ ಅಭಿಮಾನಿಗಳ ಮನದಲ್ಲಿ ಆತಂಕ ಮೂಡಿತ್ತು. ಆದರೆ ಅವರ ಕುಟುಂಬಸ್ಥರು ಪ್ರತಿ ವರ್ಷ ಮಾಡಿಸುವ ಆರೋಗ್ಯ ತಪಾಸಣೆಗಾಗಿ ಅವರನ್ನು ಕರೆತರಲಾಗಿದೆ ಎಂದು ಹೇಳಿದ್ದರು. ಶನಿವಾರ ಕಾವೇರಿ ಆಸ್ಪತ್ರೆ ಬಿಡುಗಡೆ ಮಾಡಿದ್ದ ಹೆಲ್ತ್ ಬುಲೆಟಿನ್ನಲ್ಲಿ ರಜನಿಕಾಂತ್ ಕೊಂಚ ಆಯಾಸಿಂದ ಬಳಲುತ್ತಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು ಎಂದು ತಿಳಿಸಲಾಗಿತ್ತು. ರಜನಿಕಾಂತ್ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ ಮನೆಗೆ ಮರಳಿದ್ದಾರೆ.
ಇದನ್ನು ಓದಿ:
ಅಪ್ಪು ಓದಿಸುತ್ತಿದ್ದ 1800 ಮಕ್ಕಳ ಹೊಣೆ ಹೊತ್ತ ತಮಿಳು ನಟ ವಿಶಾಲ್: ಕನ್ನಡಿಗರಿಂದ ಬಹುಪರಾಕ್!
ಶುಕ್ರವಾರ ನಡೆದ ಶಸ್ತ್ರಚಿಕಿತ್ಸೆ
ರಜನಿಕಾಂತ್ ಅವರು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರದಂದು ಅವರಿಗೆ ಕುತ್ತಿಗೆಯಲ್ಲಿರುವ ರಕ್ತನಾಳದ ಮರುಜೋಡಣೆ ಸರ್ಜರಿಯನ್ನು ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಶುಕ್ರವಾರದಂದು ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಬಳಿಕ ಒಂದು ದಿನಗಳ ಕಾಲ ಕಾವೇರಿ ಆಸ್ಪತ್ರೆಯಲ್ಲಿ ರಜಿನಿಕಾಂತ್ ವಿಶ್ರಾಂತಿ ಪಡೆದು ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹಿಂದಿರುಗಿದ್ದಾರೆ.
ಟ್ವೀಟ್ ಮಾಡಿದ ತಲೈವಾ ರಜನಿಕಾಂತ್
ರಜನಿಕಾಂತ್ ಅವರ ಪತ್ನಿ ಲತಾ ಹಾಗೂ ಮಗಳು ಅವರನ್ನು ಬರಮಾಡಿಕೊಂಡರು. ರಜನಿಕಾಂತ್ ಅವರ ಪುತ್ರಿ ಇತ್ತೀಚೆಗೆ ಪ್ರಾರಂಭವಾದ ಧ್ವನಿ ಆಧಾರಿತ ಸಾಮಾಜಿಕ ಮಾಧ್ಯಮದಲ್ಲಿ ರಜನಿಕಾಂತ್ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಇದನ್ನೇ ತಮ್ಮ ಟ್ವೀಟರ್ ಖಾತೆಯಲ್ಲಿ ತಲೈವಾ ರಜನಿಕಾಂತ್ ಮನೆಗೆ ಮರಳಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಚಿಕಿತ್ಸೆ ಮುಗಿದಿದೆ, ನಾನು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಮತ್ತು ನಾನು ಮನೆಗೆ ಮರಳಿದ್ದೇನೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಮತ್ತು ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಧನ್ಯವಾದಗಳು ಎಂದು ರಜನಿ ಧ್ವನಿ ಆಧಾರಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ :
Puneeth Rajkumar ಚಿತ್ರರಂಗದ ಅದ್ಭುತ ಶಕ್ತಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಸೂಪರ್ ಸ್ಟಾರ್ Rajinikanth
ನವೆಂಬರ್ 4ಕ್ಕೆ `ಅಣ್ಣಾತೆ’ ದರ್ಶನ
'ತಲೈವಾ' ರಜನಿಕಾಂತ್ ಅಭಿನಯದ 'ಅಣ್ಣಾತೆ' ಚಿತ್ರದ ಮೇಲೆ ಫ್ಯಾನ್ಸ್ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ. ನವಂಬರ್ 4ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಅಣ್ಣಾತೆ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇಂದಿನಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಓಪನ್ ಆಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ